ಬೆಂಗಳೂರು: ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿಯ ಐಟಿ ಇನ್​ಫ್ರಾಸ್ಟ್ರಕ್ಚರ್​ನ ಗ್ಲೋಬಲ್ ಹೆಡ್ 53 ವರ್ಷದ ಅಮಿತ್ ಜೈನ್​ ಭಾರಿ ಹೃದಯಾಘಾತಕ್ಕೆ ಒಳಗಾಗಿ ಇತ್ತೀಚೆಗೆ ಕೊನೆಯುಸಿರೆಳೆದಿದ್ದಾರೆ. ಆದರೆ ಈ ನಿಧನದ ಹಿಂದಿನ ಕಾರಣವನ್ನು ದ ಹಿಂದು ಬಿಸಿನೆಸ್ ಲೈನ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಎಲ್ಲರೂ ಖೇದಿಸುವಂತೆ ಇದೆ ಆ ಕರುಣಾಜನಕ ವಿದ್ಯಮಾನ.
ಮೂಲಗಳನ್ನು ಉಲ್ಲೇಖಿಸಿದ ವರದಿ ಪ್ರಕಾರ, ಕರೊನಾ ವೈರಸ್​ ನಿಂದ ಹರಡುತ್ತಿರುವ Covid19 ಸೋಂಕು ತೀವ್ರಗೊಂಡ ಕಾರಣ #WorkFromHome ವ್ಯವಸ್ಥೆಗಾಗಿ ಕಡಲಾಚೆಯ ಡೆಲಿವರಿ ಸೆಂಟರನ್ನು ಸಕ್ರಿಯಗೊಳಿಸುವ ತೀವ್ರ ಒತ್ತಡ ಅವರ ಮೇಲಿತ್ತು. ಒಂದು ವಾರದಿಂದ ನಿದ್ದೆ ಮಾಡದೇ ಪ್ರೆಸೆಂಟೇಷನ್ ಸಿದ್ಧಪಡಿಸಿದ್ದ ಅವರು, ಕಂಪನಿಯ ಹಿರಿಯ ಎಕ್ಸಿಕ್ಯೂಟಿವ್ಸ್​ಗೆ ಪ್ರೆಸೆಂಟೇಷನ್ ತೋರಿಸುತ್ತಿದ್ದಾಗ ಭಾರಿ ಹೃದಯಘಾತಕ್ಕೆ ಒಳಗಾಗಿದ್ದಾರೆ. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಹಲವು ಊಹಾಪೋಹಗಳೊಂದಿಗೆ ಹರಿದಾಡುತ್ತಿದೆ.
ಈ ಬಗ್ಗೆ ಅಮಿತ್ ಜೈನ್ ಅವರ ಸಹೋದರ ಮುಕುಲ್ ಜೈನ್​ ಅವರು ಪ್ರತಿಕ್ರಿಯಿಸಿದ್ದು, ನನ್ನ ಸಹೋದರನಿಗೆ ಮಾರ್ಚ್ 17ರಂದು ಅಪರಾಹ್ನ 3.30ಕ್ಕೆ ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿದೆ. ಕೂಡಲೇ ಅವರನ್ನು ಕೆಲಸದ ಸ್ಥಳಕ್ಕೆ ಹತ್ತಿರದ ಹಿರಾನಂದಾನಿ ಹಾಸ್ಪಿಟಲ್​ಗೆ ಸೇರಿಸಲಾಗಿತ್ತು. ಅಲ್ಲಿ ಅಮಿತ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಹೋಯಿತು. ಹೀಗಾಗಿ 19ರಂದು ನಾವು ಅವರನ್ನು ಕಳೆದುಕೊಂಡೆವು. ಈ ಎಲ್ಲ ಅವಧಿಯಲ್ಲೂ ಟಿಸಿಎಸ್​ ನಮ್ಮೊಂದಿಗೆ ಇತ್ತು. ಅಮಿತ್​ ಅವರನ್ನು ಉಳಿಸುವ ನಿಟ್ಟಿನಲ್ಲಿ ಕಂಪನಿ ಗರಿಷ್ಠ ಪ್ರಯತ್ನ ಮಾಡಿದೆ. ಅಮಿತ್ ಅವರು 32 ವರ್ಷಗಳ ಕಾಲ ಟಿಸಿಎಸ್​ಗೆ ಕೆಲಸ ಮಾಡಿದ್ದಾರೆ. ಅವರು ಧೂಮಪಾನಿಯಲ್ಲ, ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುವಂಥವರಾಗಿದ್ದರು. ಅವರಿಗೆ ಬಿಪಿ ಅಥವಾ ಇನ್ನಾವುದೇ ರೋಗಗಳು ಇರಲಿಲ್ಲ. ಹಾರ್ಡ್​ ವರ್ಕರ್ ಆಗಿದ್ದ ಅವರಿಗೆ ಎಲ್ಲರಿಗೂ ಇರುವಂಥ ಸ್ಟ್ರೆಸ್ ಇತ್ತಷ್ಟೆ. ಟಿಸಿಎಸ್​ನ 4 ಲಕ್ಷ ಉದ್ಯೋಗಿಗಳ #WorkFromHome ವ್ಯವಸ್ಥೆ ಜಾರಿಗೊಳಿಸುವ ಮಹತ್ವದ ಹೊಣೆಗಾರಿಕೆ ಅವರ ಮೇಲಿತ್ತು. Covid19 ಕಂಟಕ ಕೆಲಸದ ಸ್ಟ್ರೆಸ್​ ರೂಪದಲ್ಲಿ ಕಾಡಿದ್ದು ವಿಪರ್ಯಾಸ. ಆದರೂ ಸ್ಟ್ರೆಸ್ ಯಾರಿಗೆ ಇರಲ್ಲ ಹೇಳಿ ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)
Covid19 ಹರಡುವ ಟೈಮ್ ಬಾಂಬ್ ಆಗಲಿದೆ ಚೀನಾ: 2007ರಲ್ಲೇ ಎಚ್ಚರಿಸಿದ್ದ ಸೈಂಟಿಸ್ಟ್​ಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 3 =
Remember me
