ಆಂಧ್ರಪ್ರದೇಶ:ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಅಡ್ಡಂಕಿಯಲ್ಲಿ ಸಾರ್ವಜನಿಕ ಸಭೆಗೆ ಜನರು ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ಮದ್ಯ ವಿತರಿಸಲಾಗಿದೆ ಎಂದು ತೆಲುಗು ದೇಶಂ ಪಕ್ಷ (ಟಿಡಿಪಿ) ಆರೋಪಿಸಿದ್ದು, ಭಾನುವಾರ ವೀಡಿಯೊವನ್ನು ಸಹ ಹಂಚಿಕೊಂಡಿದೆ.
ಇದನ್ನೂ ಓದಿ:ಮಗನನ್ನೇ ಕೊಂದಿದ್ದ ತಂದೆಯ ಬಂಧನ: ಮಗನನ್ನು ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ
ಮದ್ಯದ ಬಾಟಲಿಗಳನ್ನು ಹಿಡಿದುಕೊಂಡು ಬಸ್ಸಿನೊಳಗೆ ಅನೇಕ ಪುರುಷರು ಕುಳಿತು, ಮದ್ಯಪಾನ ಮಾಡುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಅವರಲ್ಲಿ ಹಲವರು ಬಾಟಲಿಗಳಿಂದ ಮದ್ಯ ಸೇವಿಸುತ್ತಿರುವುದು ಪತ್ತೆಯಾಗಿದೆ. ಟಿಡಿಪಿ ಈ ವಿಡಿಯೋವನ್ನು ಎಕ್ಸ್‌ನಲ್ಲಿ (ಈ ಹಿಂದೆ ಟ್ವಿಟರ್) ಹಂಚಿಕೊಂಡು, ಸಿಎಂ ಜಗನ್​ ಮೋಹನ್​ ರೆಡ್ಡಿ ವಿರುದ್ಧ ಗುಡುಗಿದೆ.
ಇದನ್ನೂ ಓದಿ:ವಿಮಾನ ನಿಲ್ದಾಣ ಹೊಸ ಟರ್ಮಿನಲ್ ಶಂಕುಸ್ಥಾಪನೆ, ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ವರ್ಚುವಲ್ ಕಾರ್ಯಕ್ರಮ
ಜಗನ್ ಮೋಹನ್ ರೆಡ್ಡಿ ಅವರ ಸಾರ್ವಜನಿಕ ಸಭೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಲಿ ಎಂದು ಮದ್ಯವನ್ನು ನೀಡಿದ್ದಾರೆ. ಮದ್ಯ ನೀಡದಿದ್ದರೆ ಜನರು ಭಾಗವಹಿಸುತ್ತಿರಲಿಲ್ಲವೇ ಎಂದು ಪ್ರಶ್ನಿಸಿದೆ. ಜಗನ್ ಮೋಹನ್ ರೆಡ್ಡಿ ಪಕ್ಷವಾದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ), ‘ಸಿದ್ಧಮ್’ (ಸಿದ್ಧ) ಎಂಬ ಹೆಸರಿನ ಸಾರ್ವಜನಿಕ ಸಭೆಯಲ್ಲಿ 15 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ತಿಳಿಸಿದೆ.
బూమ్ బూమ్.. ప్రెసిడెంట్ మెడల్.. స్పెషల్ స్టేటస్…ఇవి లేనిదే, నీ మొహం చూడటానికి రారా?ఇదీ నీ పరిస్థితి జగన్ రెడ్డి.#SiddhamFlopShow#GreenMatSiddham#EndOfYCP#YCPAntham#2024JaganNoMore#ByeByeJaganIn2024#AndhraPradeshpic.twitter.com/FVn4WiEAzT
— Telugu Desam Party (@JaiTDP)March 10, 2024

“ಸಭೆಯಲ್ಲಿ ಕಡಿಮೆ ಹಾಜರಾತಿಯನ್ನು ಮರೆಮಾಚಲು ಈ ರೀತಿ ಮಾಡಲಾಗಿದೆ” ಎಂದ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, “ಜನರ ಕೊರತೆಯಿಂದಾಗಿ ಸಾರ್ವಜನಿಕ ಸಭೆಯು ಒಂದೂವರೆ ಗಂಟೆಗಳ ಕಾಲ ವಿಳಂಬವಾಯಿತು. ಜನಸಂದಣಿ ಕ್ಷಿಣಿಸುವ ಮೂಲಕ ಜಗನ್ ರೆಡ್ಡಿ ಯುಗ ಅಂತ್ಯಗೊಳ್ಳುತ್ತಿದೆ ಎಂಬುದು ಇದರ ಸಂಕೇತ” ಎಂದರು.
ఎక్కడ చూసినా జనమే.. ఏ నోట విన్నా జగనే
మీలా గ్రీన్ మ్యాట్‌లు వేసి.. గ్రాఫిక్స్‌తో జిమ్మిక్కులు చేసే పార్టీ మాది కాదు పప్పు@naralokesh..?
అద్దంకి సభ బయట దృశ్యం ఇది.. ఇప్పుడేం చెప్తావ్?#Siddham#WhyNot175#YSJaganAgain#AndhraPradeshpic.twitter.com/KFyjFCO58t
— YSR Congress Party (@YSRCParty)March 10, 2024

ಇದಕ್ಕೆ ಪ್ರತಿಕ್ರಿಯಿಸಿದ ವೈಎಸ್‌ಆರ್‌ಸಿಪಿ, ಸಭೆಯ ಸ್ಥಳದ ಹೊರಗೆ ನೆರೆದಿದ್ದ ಜನಸಮೂಹದ ವೀಡಿಯೊವನ್ನು ಹಂಚಿಕೊಂಡಿದ್ದು, ಟಿಡಿಪಿ ನಾಯಕನನ್ನು ‘ಪಪ್ಪು’ ಎಂದು ಗೇಲಿ ಮಾಡಿತು. ಗ್ರಾಫಿಕ್ಸ್ ಅಥವಾ ಗ್ರೀನ್​ ಮ್ಯಾಟ್‌ಗಳನ್ನು ಬಳಸುವಂತಹ ‘ಗಿಮಿಕ್‌ಗಳಲ್ಲಿ’ ನಾವು ಪಾಲ್ಗೊಳ್ಳುವುದಿಲ್ಲ ಎಂದು ಹೇಳುವ ಮುಖೇನ ನಾರಾ ಲೋಕೇಶ್​ ಹೇಳಿಕೆಗೆ ತಿರುಗೇಟು ನೀಡಿದೆ,(ಏಜೆನ್ಸೀಸ್).
80ರ ದಶಕದಲ್ಲಿ ಸ್ಟಾರ್​ ಆಗಿ ಮಿಂಚಿದ ನಟಿ ಮಾಧವಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತೇ? ಇಲ್ಲಿವೆ ನೋಡಿ ಫೋಟೋಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
