ನವದೆಹಲಿ:ಕುರುಕ್ಷೇತ್ರದಲ್ಲಿ ಬೀದಿಬದಿ ಚಹಾ ಮಾರಾಟ ಮಾಡುವವ ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ. ಇದರಿಂದ ಪಾರಾಗಲು ಬ್ಯಾಂಕ್​ನಿಂದ ಸ್ವಲ್ಪ ಸಾಲ ಪಡೆಯೋಣ ಎಂದು ಅರ್ಜಿ ಸಲ್ಲಿಸಿದ್ದವನಿಗೆ ಬ್ಯಾಂಕ್​ವೊಂದು 50 ಕೋಟಿ ರೂ. ಶಾಕ್​ ನೀಡಿದೆ.
ಈಗಾಗಲೆ ತೆಗೆದುಕೊಂಡಿರುವ 50 ಕೋಟಿ ರೂ. ಸಾಲವನ್ನು ಹಿಂದಿರುಗಿಸಿಲ್ಲ. ಹಾಗಾಗಿ ನಿಮಗೆ ಹೊಸದಾಗಿ ಸಾಲ ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಬ್ಯಾಂಕ್ ಸಿಬ್ಬಂದಿ​ ಚಹಾ ಮಾರಾಟಗಾರನ ಸಾಲದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ:ಮನೆಪಾಠ ಮಾಡಲೆಂದು ಬಂದ, ಬಾಲಕನ ಮೇಲೆ ಅತ್ಯಾಚಾರ ಎಸಗಿದ; ಬಹಿರಂಗಪಡಿಸಿದರೆ ಆತ್ಮಹತ್ಯೆಯ ಬೆದರಿಕೆ ಒಡ್ಡಿದ!
ಕೋವಿಡ್​-19 ಪಿಡುಗಿನಿಂದಾಗಿ ವಹಿವಾಟು ಸರಿಯಾಗಿ ನಡೆಯದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೆ. ಆದರೆ, ಬ್ಯಾಂಕ್​ನವರು ನಾನು ಈಗಾಗಲೆ 50 ಕೋಟಿ ರೂ. ಸಾಲ ಪಡೆದುಕೊಂಡಿದ್ದೇನೆ ಎಂದು ಹೇಳುತ್ತಿದ್ದಾರೆ. ಅದು ಯಾವಾಗ ಇಷ್ಟೊಂದು ಸಾಲ ಮಾಡಿದೆನೋ, ಬ್ಯಾಂಕ್​ನವರು ಅದು ಹೇಗೆ ಇಷ್ಟೊಂದು ಸಾಲವನ್ನು ನನಗೆ ಕೊಟ್ಟರೋ ನನಗೇ ತಿಳಿಯದಾಗಿದೆ ಎಂದು ಚಹಾ ಮಾರಾಟಗಾರ ಹೇಳಿದ್ದಾನೆ.
Haryana: Rajkumar, a tea seller in Kurukshetra claims he owes Rs50 crores to banks without even taking a loan. Says, "I had applied for a loan as my financial situation is dire due to COVID. Bank rejected it saying I already have debt of Rs 50 cr, don't know how it is possible."pic.twitter.com/BhTStsIwiy
— ANI (@ANI)July 22, 2020

ಅರ್ಜಿ ತಿರಸ್ಕೃತಗೊಂಡ ಬಳಿಕ ನಾನು ನನ್ನ ಆಧಾರ್​ಕಾರ್ಡ್​ ಸೇರಿ ಎಲ್ಲ ದಾಖಲೆಗಳನ್ನು ಕೊಂಡೊಯ್ದು ಬ್ಯಾಂಕ್​ನವರಿಗೆ ಕೊಟ್ಟು ಮರುಪರಿಶೀಲಿಸುವಂತೆ ಹೇಳಿದೆ. ಆದರೂ ಬ್ಯಾಂಕ್​ನವರು ನನ್ನ ಹೆಸರಿನಲ್ಲಿ 50 ಕೋಟಿ ರೂ. ಸಾಲ ಇರುವುದಾಗಿ ಹೇಳುತ್ತಿದ್ದಾರೆ. ಈಗ ಚಹಾ ಮಾರಾಟ ಬಿಟ್ಟು ಬೇರೆ ಏನಾದರೂ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದೇನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮುಂದೆ ಏನು ಮಾಡುವುದು ಎಂಬುದೇ ತಿಳಿಯದಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾನೆ.
ಬೇಲಿ ಮೇಲೆ ಕುಳಿತಿರುವವರು ಸ್ವಲ್ಪ ಆಚೀಚೆ ನೆಗೆದರೆ ಸಚಿನ್​ ಪೈಲಟ್​ ಸಿಎಂ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − eleven =
Remember me
