ಜೈಪುರ:ರೈಲ್ವೆ ನಿಲ್ದಾಣದಲ್ಲಿ ಕುಳಿತು ರೈಲಿಗೆ ಕಾಯುವಾಗ ಒಂದು ಕಪ್​ ಟೀ ಇದ್ದರೆ ಅದರ ಮಜಾನೇ ಬೇರೆ. ಮನೆಯಲ್ಲಿ ಮಾಡುವಷ್ಟು ರುಚಿ ಇಲ್ಲದಿದ್ದರೂ, ಪ್ಲಾಸ್ಟಿಕ್​ ಕಪ್​ನಲ್ಲಿ ಸಿಗುವ ಆ ಟೀ ಬಗ್ಗೆ ಬೇರೆಯದ್ದೇ ಆದ ಪ್ರೀತಿ ಪ್ರಯಾಣಿಕರಿಗಿದೆ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಪ್ಲಾಸ್ಟಿಕ್​ ಕಪ್​ನಲ್ಲಿ ಟೀ ಕುಡಿಯುವದಕ್ಕೆ ಸಂಪೂರ್ಣವಾಗಿ ಬ್ರೇಕ್​ ಹಾಕಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಇದನ್ನೂ ಓದಿ:ಡಿವೋರ್ಸ್​ ಕೇಸ್​ ಹಾಕಿದವರೇ ವಾದ ಮಂಡಿಸಲು ಅವಕಾಶವಿದೆಯೆ?
ರೈಲ್ವೆ ನಿಲ್ದಾಣದ ಟೀ ಶಾಪ್​ಗಳಲ್ಲಿ ಪ್ಲಾಸ್ಟಿಕ್​ ಕಪ್​ ಬದಲಾಗಿ ಮಣ್ಣಿನ ಲೋಟದಲ್ಲಿ ಟೀ ಮಾರಾಟ ಮಾಡಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್​ ಗೋಯಲ್​ ತಿಳಿಸಿದ್ದಾರೆ. ಭಾನುವಾರದಂದು ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ಧಿಗವಾರ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಿದ ಅವರು ಈ ಮಾತನ್ನು ಹೇಳಿದ್ದಾರೆ. ಈಗಾಗಲೇ ದೇಶದ 400 ರೈಲ್ವೆ ನಿಲ್ದಾಣದಲ್ಲಿ ಮಣ್ಣಿನ ಲೋಟದಲ್ಲಿ ಟೀ ಮಾರಾಟ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪ್ರತಿ ರೈಲ್ವೆ ನಿಲ್ದಾಣವೂ ಪ್ಲಾಸ್ಟಿಕ್​ ಮುಕ್ತವಾಗಲಿದೆ. ಎಲ್ಲ ನಿಲ್ದಾಣದಲ್ಲಿಯೂ ಮಣ್ಣಿನ ಲೋಟದಲ್ಲಿಯೇ ಟೀ ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)
ಲೈವ್​ನಲ್ಲೇ ಹೋಯಿತು ಪ್ರಾಣ! ಹರಿಹರದಲ್ಲಿ ವಿದ್ಯುತ್​ ಅವಘಡಕ್ಕೆ ಬಲಿಯಾದ ಲೈನ್​ ಮ್ಯಾನ್​

ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + four =
Remember me
