ಚೆನ್ನೈ :ಚೆನ್ನೈನ ಪ್ರಮುಖ ಶಾಲೆಯೊಂದರ ಕಾಮರ್ಸ್​ ಶಿಕ್ಷಕನನ್ನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಮಾಜಿ ವಿದ್ಯಾರ್ಥಿನಿಯೋರ್ವಳ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
2014 ರಿಂದ 2016 ರ ನಡುವೆ ಸದರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿಯೊಬ್ಬಳು ಆರೋಪಿ ಶಿಕ್ಷಕನು ತನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾಗಿ ದೂರು ನೀಡಿದ್ದಳು. ಕಿಲ್​​ಪೌಕ್​ ಆಲ್ ವುಮೆನ್ ಪೊಲೀಸ್​ ಠಾಣೆಯ ತಂಡವು ಘಟನೆಯ ಬಗ್ಗೆ ತನಿಖೆ ಕೈಗೊಂಡು, ಸಂಬಂಧಿತ ಶಿಕ್ಷಕನನ್ನು ಬಂಧಿಸಿತು ಎನ್ನಲಾಗಿದೆ.
ಇದನ್ನೂ ಓದಿ:ಲಾಕ್​ಡೌನ್ ವೇಳೆ ಸೀಜ್ ಆದ ವಾಹನಗಳ ರಿಲೀಸ್ ಪ್ರಕ್ರಿಯೆ ಶುರು
ಇತ್ತೀಚೆಗೆ ಚೆನ್ನೈನ 5 ಶಾಲೆಗಳ ಶಿಕ್ಷಕರನ್ನು ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧಿಸಲಾಗಿದೆ ಇಲ್ಲವೇ ಸಸ್ಪೆಂಡ್​ ಮಾಡಲಾಗಿದೆ. ಆನ್​ಲೈನ್​ ತರಗತಿಗೆ ಟವಲ್​ ಸುತ್ತಿಕೊಂಡು ಬರುತ್ತಿದ್ದ ಶಿಕ್ಷಕನ ವಿರುದ್ಧ ಪ್ರತಿಷ್ಠಿತ ಶಾಲೆಯೊಂದರ ಹಾಲಿ ವಿದ್ಯಾರ್ಥಿಗಳು ಮತ್ತು ಅಲುಮ್ನಿ ಅಸೋಸಿಯೇಷನ್​ ದನಿ ಎತ್ತಿದ ಮೇಲೆ ಈ ಕಾರ್ಯಾಚರಣೆ ಆರಂಭವಾಗಿದೆ.
ಆನ್​ಲೈನ್​ ತರಗತಿಗಳ ಸಂದರ್ಭದಲ್ಲೂ ಶಾಲಾ ಮಕ್ಕಳಿಗೆ ಅಸಂಬದ್ಧ ಚಿತ್ರಗಳನ್ನು ಮತ್ತು ಸಂದೇಶಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ದರಿಂದ ವರ್ಚುವಲ್ ತರಗತಿಗಳನ್ನು ನಿಯಂತ್ರಿಸಲು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​ ಹಲವು ನಿರ್ದೇಶನಗಳನ್ನು ನೀಡಿದ್ದಾರೆ. ಆನ್​ಲೈನ್​ ತರಗತಿಗಳನ್ನು ರೆಕಾರ್ಡ್​ ಮಾಡಿ ನಂತರ ಶಾಲಾ ಆಡಳಿತ ಮತ್ತು ಪಾಲಕರ ಸಂಘದ ಸದಸ್ಯರು ಅವನ್ನು ಆಗಾಗ್ಗೆ ಪರಾಮರ್ಶಿಸುವುದು ಈ ನಿಟ್ಟಿನಲ್ಲಿ ತೆಗೆದುಕೊಂಡಿರುವ ಒಂದು ಕ್ರಮವಾಗಿದೆ.(ಏಜೆನ್ಸೀಸ್)
ಲಾಕ್​ಡೌನ್ ವೇಳೆ ಸೀಜ್ ಆದ ವಾಹನಗಳ ರಿಲೀಸ್ ಪ್ರಕ್ರಿಯೆ ಶುರು

ಮಕ್ಕಳ ಮೇಲೆ ಕೋವಾಕ್ಸಿನ್ ಟ್ರಯಲ್ಸ್​ಗೆ ದೆಹಲಿ ಏಮ್ಸ್​ ಸಜ್ಜು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
