ಕೊಚ್ಚಿ:ಶಿಕ್ಷಕಿಯೊಬ್ಬಳ ಆತ್ಮಹತ್ಯೆ ಪ್ರಕರಣ ಸಂಬಂಧ ಅದೇ ಶಾಲೆಯ ಮತ್ತೊಬ್ಬ ಶಿಕ್ಷಕನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಡೆತ್​ನೋಟ್​ನಲ್ಲಿ ಶಿಕ್ಷಕನ ಹೆಸರು ಉಲ್ಲೇಖವಾಗಿದ್ದರಿಂದ ಆತನನ್ನು ಬಂಧಿಸಲಾಗಿದೆ.
ಬಂಧಿತನನ್ನು ರಾಮದಾಸ್​​ ಎಂದು ಗುರುತಿಸಲಾಗಿದೆ. ಈತ ಮಲಪ್ಪುರಂ ಜಿಲ್ಲೆಯ ವೆಂಗಾರಾ ಮಾಡೆಲ್​ ಟೌನ್​ನ ಪ್ರೌಢಶಾಲೆಯ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಾಮದಾಸ್​ನಲ್ಲಿ ಬಂಧಿಸಲಾಗಿದೆ.
ಮೃತ ಟಿ ಬೈಜು ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಸೆ. 17ರಂದು ಆಕೆಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಬೈಜು ಮತ್ತು ರಾಮದಾಸ್​ ವಿದ್ಯಾರ್ಥಿ ಪೊಲೀಸ್​​ ಕೆಡೆಟ್​ನ ಉಸ್ತುವಾರಿಯಾಗಿದ್ದರು.
ಬೈಜು ಬರೆದಿದ್ದ ಡೆತ್​ನೋಟ್‌ನಲ್ಲಿ ರಾಮದಾಸ್​ ಹೆಸರನ್ನು ನಮೂದಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸಾಕ್ಷಿಗಳ ಹೇಳಿಕೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳು ರಾಮದಾಸ್ ವಿರುದ್ಧ ಇವೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ನ್ಯಾಯಾಲಯವು ಪೊಲೀಸರಿಗೆ ಒಪ್ಪಿಸಿದೆ.
ಇನ್ನು ಬೈಜು ಮತ್ತು ರಾಮದಾಸ್​ ನಡುವೆ ತುಂಬಾ ಕ್ಲೋಸ್​ನೆಸ್​ ಇತ್ತು. ಅದನ್ನೇ ದುರುಪಯೋಗ ಪಡಿಸಿಕೊಂಡ ಆತ, ಶಿಕ್ಷಕಿಯನ್ನು ಮಾನಸಿಕ ಹಿಂಸೆಗೆ ದೂಡಿದ್ದ ಎಂಬುದು ಡೆತ್​ನೋಟ್​ನಿಂದ ತಿಳಿದುಬಂದಿದೆ. ಲೈಂಗಿಕ ಕಿರುಕುಳಕ್ಕೆ ಬೇಸತ್ತು ಬೈಜು ಸೆ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್​ನೋಟ್​ ಪತ್ತೆಯಾದ ಹಿನ್ನೆಲೆಯಲ್ಲಿ ರಾಮದಾಸ್​ನನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)

ಬಿಜೆಪಿ ಭದ್ರಕೋಟೆಯಲ್ಲಿ ಭಾರತ್​ ಜೋಡೋ ಯಾತ್ರೆ: ರಾಹುಲ್​ ಜತೆ ಕೈಜೋಡಿಸಿದ ಸಹೋದರಿ ಪ್ರಿಯಾಂಕಾ

ಎಲ್ಲ ಮುಸ್ಲಿಮರನ್ನು ಕೊಂದು ಹಿಂದು ರಾಷ್ಟ್ರ ನಿರ್ಮಾಣ ಮಾಡಿ: ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲಿದ್ ಆಕ್ರೋಶ

ವಿಚ್ಛೇದಿತ ಉದ್ಯಮಿ ಜತೆ ಮಾನುಷಿ ಚಿಲ್ಲರ್​ ಡೇಟಿಂಗ್​! ಸಂಬಂಧ ಗುಟ್ಟಾಗಿ ಇಡುವ ವಿಶ್ವ ಸುಂದರಿಯ ಪ್ರಯತ್ನ ವಿಫಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
