ನವದೆಹಲಿ:ಶಿಕ್ಷಕಿಯೊಬ್ಬಳು 5ನೇ ತರಗತಿಯ ವಿದ್ಯಾರ್ಥಿನಿಯ ತಲೆಗೆ ಕತ್ತರಿಯಿಂದ ಹೊಡೆದಿದ್ದಾಳೆ. ಇಷ್ಟಕ್ಕೇ ಸುಮ್ಮನಾಗದೆ ವಿದ್ಯಾರ್ಥಿನಿಯನ್ನು ಶಾಲೆಯ ಒಂದನೇ ಮಹಡಿಯಿಂದ ಕೆಳಗೆ ತಳ್ಳಿ, ಅಮಾನುಷವಾಗಿ ವರ್ತಿಸಿದ್ದಾಳೆ. ಈ ಘಟನೆ ದೆಹಲಿಯ ರಾಣಿ ಝಾನ್ಸಿ ರಾಣಿ ರಸ್ತೆ ಬಳಿಯ ಮಾಡೆಲ್ ಬಸ್ತಿ ಎದುರು ಇರುವ ಪ್ರಾರ್ಥಿಕ್ ವಿದ್ಯಾಲಯದಲ್ಲಿ ಸಂಭವಿಸಿದೆ.
ಘಟನೆ ಸಂಭವಿಸುತ್ತಿದ್ದಂತೆ, ಕೂಡಲೇ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
A teacher of Prathmik Vidyalaya in Model Basti started hitting a student with a pair of scissors & pushed her off the 1st floor of school. We've taken actions against the teacher. I had come to do a survey of school. The child is currently safe: Shweta Chauhan, DCP, Central Delhipic.twitter.com/oYawbqU03v— ANI (@ANI)December 16, 2022
A teacher of Prathmik Vidyalaya in Model Basti started hitting a student with a pair of scissors & pushed her off the 1st floor of school. We've taken actions against the teacher. I had come to do a survey of school. The child is currently safe: Shweta Chauhan, DCP, Central Delhipic.twitter.com/oYawbqU03v
ಬೆಳಗ್ಗೆ 11.15ರ ಸುಮಾರಿಗೆ ಶಿಕ್ಷಕಿಯೊಬ್ಬಳು ವಿದ್ಯಾರ್ಥಿನಿ ಹಲ್ಲೆ ಮಾಡಿ, ಒಂದನೇ ಮಹಡಿಯಿಂದ ಕೆಳಗೆ ತಳ್ಳಿದ್ದಾಳೆ ಎಂಬ ಮಾಹಿತಿ ಫೋನ್ ಕರೆಯ ಮೂಲಕ ಪೊಲೀಸ್ ಠಾಣೆಗೆ ಬಂದಿದೆ. ಕೂಡಲೇ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಅದಾಗಲೇ ಗಾಯಗೊಂಡ ವಿದ್ಯಾರ್ಥಿನಿಯನ್ನು ನಗರದ ಹಿಂದೂರಾವ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಡಿ.ಬಿ.ಜಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಾಹಿತಿ ನೀಡಿರುವುದು ವರದಿಯಾಗಿದೆ.
ಸದ್ಯ ಆರೋಪಿ ಶಿಕ್ಷಕಿ ಗೀತಾ ದೇಶ್ವಾಲ್​​ಳನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಈಕೆಯ ಮೇಲೆ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿನಿಯನ್ನು ಹಲ್ಲೆ ಮಾಡಿ, ಮಹಡಿಯಿಂದ ತಳ್ಳಿ ಹಾಕಲು ಕಾರಣವೇನು ಎಂಬುದು ಇನ್ನಷ್ಟೇ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
