ಜೈಪುರ:ಪ್ರತಿಯೊಬ್ಬರಿಗೂ ಶಿಕ್ಷಣ ಅತಿಮುಖ್ಯ. ಶಿಕ್ಷಣ ನೀಡಲು ಶಿಕ್ಷಕ ಕೂಡ ಅಷ್ಟೇ ಮುಖ್ಯ. ಶಿಕ್ಷಣ ನೀಡಿ, ಉತ್ತಮ ಮನುಷ್ಯರನ್ನಾಗಿ ಮಾಡಬೇಕಾದ ಶಿಕ್ಷಕನೇ ಮೃಗನಾಗಿಬಿಟ್ಟರೆ? ಆ ಶಿಕ್ಷಕನೇ ವಿದ್ಯಾರ್ಥಿಗಳ ಜತೆ ಅಸಭ್ಯವಾಗಿ ವರ್ತಿಸಲಾರಂಭಿಸಿದರೆ?
ಇದನ್ನೂ ಓದಿ:ಚಿನ್ನಾಭರಣ ಪ್ರಿಯರಿಗೆ ಬಿಗ್​ ಶಾಕ್​! ಒಂದೇ ವಾರದಲ್ಲಿ ಶೇ. 2 ಏರಿದ ಗೋಲ್ಡ್​ ರೇಟ್​!
ಪಾಠ ಹೇಳಿಕೊಡಬೇಕಾದ ಶಿಕ್ಷಕನೊಬ್ಬ, ಮಾರ್ಕ್ಸ್​ ಬೇಕೆಂದರೆ ನನ್ನ ಬಳಿ ಸೆಕ್ಸ್​ ಮಾಡುವ ರೀತಿ ಇರಬೇಕು ಎಂದು ವಿದ್ಯಾರ್ಥಿನಿಯರ ಎದುರು ಬೇಡಿಕೆ ಇಟ್ಟಿರುವ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ. ಮೇಲಧಿಕಾರಿಯ ಎದುರು ವಿದ್ಯಾರ್ಥಿನಿಯರು ಶಿಕ್ಷಕನ ಕಾಮದಾಸೆಗಳನ್ನು ಬಿಚ್ಚಿಟ್ಟಿದ್ದು, ಇದೀಗ ಶಿಕ್ಷಕ ಜೈಲು ಪಾಲಾಗಿದ್ದಾನೆ.
ನೀಮ್ರಾನಾದ ಸರ್ಕಾರಿ ಶಾಲಾ ಶಿಕ್ಷಕ ದೇವ್​ ಪ್ರಕಾಶ್​ ಯಾದವ್​ (45) ಆರೋಪ ಎದುರಿಸುತ್ತಿರುವ ಶಿಕ್ಷಕ. ಈತ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ವಿದ್ಯಾರ್ಥಿನಿಯರ ಗುಪ್ತಾಂಗ ಮುಟ್ಟುವುದು, ಅಸಭ್ಯ ರೀತಿಯಲ್ಲಿ ವರ್ತನೆ ಮಾಡುತ್ತಿದ್ದನಂತೆ. ಒಳ್ಳೆಯ ಮಾರ್ಕ್ಸ್​ ಬೇಕಾದರೆ, ನನ್ ಜತೆ ದೈಹಿಕವಾಗಿ ಹೊಂದಿಕೊಳ್ಳಿ ಎಂದು ಹೇಳುತ್ತಿದ್ದನಂತೆ.
ಇದನ್ನೂ ಓದಿ:ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಏಮ್ಸ್​ ಆಸ್ಪತ್ರೆಗೆ ದಾಖಲು!
ಶಿಕ್ಷಕನ ಈ ನೀತಿಯಿಂದ ಬೇಸತ್ತಿದ್ದ ವಿದ್ಯಾರ್ಥಿನಿಯರು, ಮೇಲಧಿಕಾರಿ ಶಾಲೆಯ ಮೇಲ್ವಿಚಾರಣೆಗೆ ಬಂದಾಗ, ಅವರ ಎದುರು ಶಿಕ್ಷಕನ ಬಗ್ಗೆ ದೂರುಗಳನ್ನು ಇಟ್ಟಿದ್ದಾರೆ. ಸೂಕ್ಷ್ಮತೆಯನ್ನು ಅರಿತ ಅಧಿಕಾರಿಗಳು ಶಿಕ್ಷಣ ಇಲಾಖೆ ವಿಚಾರ ಮುಟ್ಟಿಸಿದ್ದು, ಪೊಲೀಸ್​ ಪ್ರಕರಣ ದಾಖಲಿಸಲಾಗಿದೆ. ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ವಿಚಾರವಾಗಿ ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. (ಏಜೆನ್ಸೀಸ್​)
21 ವರ್ಷ ರೇಪ್​ ಮಾಡಿ ಕೊನೆಗೂ ಕೊಂದೇ ಬಿಟ್ಟ ಪಾಗಲ್​ ಪ್ರೇಮಿ! ಅಮ್ಮನ ಬಾಯಿಯಿಂದಲೇ ಹೊರಬಿತ್ತು ಮಗಳ ನೋವಿನ ಕಥೆ

ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:9 − 5 =
Remember me
