ಕೋಲ್ಕತ್ತಾ:ರಾಜಕೀಯ ವ್ಯಕ್ತಿಗಳು ಏನೇ ಮಾಡಿದರೂ ನಡೆಯುತ್ತೆ ಎಂಬ ಕಾಲ ಈಗಿಲ್ಲ. ಯಾರು ಏನೇ ಮಾಡಿದರೂ ತಪ್ಪು ಕ್ಷಣ ಮಾತ್ರದಲ್ಲಿ ಬೆಳಕಿಗೆ ಬಂದುಬಿಡುತ್ತದೆ.
ಇತ್ತೀಚೆಗೆ ಕರ್ನಾಟಕದಲ್ಲೂ ಸಹ ಪಿಎಸ್​ಐ ಹಗರಣ ಭಾರೀ ಸದ್ದು ಮಾಡಿತ್ತು. ಇಂತಹದ್ದೇ ಹಗರಣವೊಂದು ಪಶ್ಚಿಮ ಬಂಗಾಳದಲ್ಲಿ ಬಯಲಾಗಿದ್ದು, ಆದರೆ ಇದು ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಹಗರಣವಾಗಿದೆ. ಸರ್ಕಾರಿ ಕೆಲಸ ಅರ್ಹತೆಗನುಗುಣವಾಗಿ ಪಡೆದುಕೊಳ್ಳಬೇಕೆ ಹೊರತು ಅಡ್ಡದಾರಿಯಿಂದಲ್ಲ ಎಂಬುದಕ್ಕೆ ಮತ್ತೊಂದು ಪ್ರಕರಣ ನಿದರ್ಶನವಾಗಿದೆ.
ಪಶ್ಚಿಮ ಬಂಗಾಳದ ಸಚಿವರೊಬ್ಬರು ತನ್ನ ಮಗಳಿಗೆ ಸರ್ಕಾರಿ ಕೆಲಸ ಕೊಡಿಸಿ, ಇಕ್ಕಟ್ಟಿಗೆ ಸಿಲುಕಿದ್ದಾರೆ. ಶಿಕ್ಷಣ ಸಚಿವ ಪರೇಶ್​ ಅಧಿಕೇರಿ ಎಂಬುವರು ತನ್ನ ಪುತ್ರಿ ಅಂಕಿತಾ ಅಧಿಕೇರಿ ಅವರಿಗೆ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ನೇಮಕ ಮಾಡಿದ್ದಾರೆ. ಆಕೆ ಶಿಕ್ಷಕಿಯಾಗಿ ಕಾರ್ಯ ಕೂಡ ನಿರ್ವಹಿಸಿದ್ದಳು.
ಇದ್ದಕ್ಕಿದ್ದಂತೆ ಈಕೆ ನೇಮಕಾತಿ ಕುರಿತ ಆರೋಪಗಳು ಕೇಳಿಬಂದಿದ್ದವು. ಶಿಕ್ಷಕರ ನೇಮಕಾತಿಗೆ ಬರೆದ ಪ್ರವೇಶ ಪರೀಕ್ಷೆಯಲ್ಲಿ ಈಕೆಗಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿ ಇದನ್ನು ಪ್ರಶ್ನಿಸಿ ಕೋಲ್ಕತ್ತಾ ಹೈ ಕೋರ್ಟ್​ ಮೆಟ್ಟಿಲೇರಿದ್ದರು. ಪ್ರಕರಣ ಕುರಿತು ತನಿಖೆಗೆ ನ್ಯಾಯಾಲಯ ಆದೇಶಿಸಿತ್ತು. ತನಿಖೆಯಲ್ಲಿ ಸತ್ಯಾಂಶ ಬಯಲಾಗಿದೆ.
ಇತರೆ ಅಭ್ಯರ್ಥಿಗಳಿಗೆ ತನ್ನ ಪುತ್ರಿಗಿಂತಲೂ ಹೆಚ್ಚು ಅಂಕ ಬಂದಿದ್ದರೂ ಅವರನ್ನು ಆಯ್ಕೆ ಮಾಡದಿರುವುದಕ್ಕೆ ಸಚಿವರನ್ನು ಪ್ರಶ್ನಿಸಲಾಗಿದೆ. ಇನ್ನೂ ಈಕೆಯನ್ನು ಕೆಲಸದಿಂದ ವಜಾ ಮಾಡಿರುವ ನ್ಯಾಯಾಲಯ 41 ತಿಂಗಳುಗಳ ಕಾಲ ಕೆಲಸ ನಿರ್ವಹಿಸಿರುವ ಈಕೆಯ ಸಂಬಳವನ್ನೂ ಹಿಂಪಡೆಯುವಂತೆ ಆದೇಶಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ಮೂರು ದಿನಗಳಿಂದ ಸಚಿವನನ್ನು ಸಿಬಿಐ ವಿಚಾರಣೆಗೊಳಪಡಿಸಿ, ಮಾಹಿತಿ ಕಲೆ ಹಾಕುತ್ತಿದೆ.(ಏಜೆನ್ಸೀಸ್​)
ಸೋಮಣ್ಣ ಅವರಿಗೆ ನನ್ನ ಆರೋಗ್ಯದ ಬಗ್ಗೆ ಕಾಳಜಿ ಬೇಡ, ಅದಕ್ಕೆಂದೇ ವೈದ್ಯರಿದ್ದಾರೆ: ಎಚ್​​ಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − six =
Remember me
