ತಮಿಳುನಾಡು:ಇತ್ತೀಚೆಗೆ ಶಾಲೆಯಲ್ಲಿ ಮಕ್ಕಳನ್ನು ದಂಡಿಸುವುದೇ ದೊಡ್ಡ ಅಪರಾಧ ಎಂಬಂತಾಗುತ್ತಿದೆ. ಮಾತ್ರವಲ್ಲ, ಮಕ್ಕಳನ್ನು ಶಿಕ್ಷಿಸಿದರೆ ಪಾಲಕರು ಪ್ರಶ್ನಿಸುವ ಪರಿಪಾಠವೂ ಬೆಳೆದಿದೆ. ಅಂಥದ್ದೇ ಒಂದು ಪ್ರಕರಣ ತಮಿಳುನಾಡಿನಲ್ಲಿ ನಡೆದಿದೆ. ಇಲ್ಲಿ ಪಾಲಕರು ಶಿಕ್ಷಕನಿಗೇ ಬಾರಿಸಿದ್ದಾರೆ.
ತಮಿಳುನಾಡಿನ ಟೂಟಿಕೊರಿನ್​ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕ ಆರ್​. ಭರತ್​ ಹಲ್ಲೆಗೊಳಗಾದವ. ಏಳನೇ ತರಗತಿಯ ವಿದ್ಯಾರ್ಥಿನಿಯ ಪಾಲಕರು ಈ ಕೃತ್ಯ ಎಸಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲನ್ನೂ ತಲುಪಿದೆ.
ಇದನ್ನೂ ಓದಿ:ನಿದ್ರಾಹೀನತೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ; ನಿದ್ರಾಹೀನತೆಗೆ ಪ್ರಮುಖ ಕಾರಣವೇ ಇದು!
ವಿದ್ಯಾರ್ಥಿನಿ ಪಾಠದ ಕಡೆಗೆ ಗಮನ ಕೊಡುತ್ತಿಲ್ಲ, ಇತರ ವಿದ್ಯಾರ್ಥಿನಿಯರ ಜತೆ ಜಗಳ ಆಡುತ್ತಿದ್ದಳು ಎಂಬ ಕಾರಣಕ್ಕೆ ಆಕೆಯ ಕುಳಿತುಕೊಳ್ಳುವ ಸ್ಥಳ ಬದಲಿಸಲು ಸೂಚಿಸಿದ್ದೆ. ಹೀಗೆ ಬೇರೆ ಬೆಂಚ್​ನಲ್ಲಿ ಕುಳಿತುಕೊಳ್ಳುವ ಸಂದರ್ಭದಲ್ಲಿ ಆಕೆ ಬಿದ್ದಿದ್ದಳು ಎಂದು ಶಿಕ್ಷಕ ತಿಳಿಸಿದ್ದಾನೆ.
ಇದನ್ನೂ ಓದಿ:ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..
ಇದೇ ಕಾರಣಕ್ಕೆ ವಿದ್ಯಾರ್ಥಿನಿ ಪಾಲಕರು ಶಾಲೆಗೆ ಧಾವಿಸಿ ಶಿಕ್ಷಕನಿಗೆ ಬಾರಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿನಿ ತಾಯಿ ಸೆಲ್ವಿ ಎಂಬಾಕೆ, ‘ಮಕ್ಕಳನ್ನು ಹೊಡೆಯವುದು ಕಾನೂನುಬಾಹಿರ, ಹೊಡೆಯುವ ಹಕ್ಕು ಕೊಟ್ಟಿದ್ಯಾರು? ನಾನು ನಿನಗೆ ಚಪ್ಪಲಿಯಲ್ಲಿ ಬಾರಿಸುತ್ತೇನೆ’ ಎಂದು ಅಬ್ಬರಿಸಿದ್ದಾಳೆ. ಪೊಲೀಸರು ವಿದ್ಯಾರ್ಥಿನಿ ಪಾಲಕರು ಹಾಗೂ ಅಜ್ಜನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಕೈಗೊಂಡಿದ್ದಾರೆ.
ಹತ್ತು ವರ್ಷಗಳಿಗೂ ಅಧಿಕ ಕಾಲ ಒಂದಾದ ಮೇಲೊಂದು ಹೆರಿಗೆ; 28ನೇ ವಯಸ್ಸಿನಲ್ಲೇ 9 ಮಕ್ಕಳ ಮಹಾತಾಯಿ!

ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 5 =
Remember me
