ನವದೆಹಲಿ:ಮಕ್ಕಳು ಕಂಠಪಾಠ ಹೇಳದಿದ್ದರೆ, ಹೋಮ್​ವರ್ಕ್​ ಮಾಡಿಕೊಂಡು ಬರದಿದ್ದರೆ ಶಿಕ್ಷಕರು ಶಿಕ್ಷೆ ಕೊಡುವುದು ಹೊಸದೇನಲ್ಲ. ಅದರಲ್ಲೂ ಕೆಲವು ಕ್ರೂರವಾಗಿ ನಡೆದುಕೊಂಡು ಟೀಕೆಗೆ-ಆಕ್ರೋಶಕ್ಕೆ ಒಳಗಾದ ಪ್ರಕರಣಗಳೂ ಇವೆ. ಅಂಥದ್ದೇ ಇನ್ನೊಂದು ಪ್ರಕರಣ ಕಂಡುಬಂದಿದೆ.
ಇಲ್ಲಿ 9 ವರ್ಷದ ಬಾಲಕನೊಬ್ಬ ಗಣಿತದ ಸೂತ್ರವನ್ನು ಹೇಳಿಲ್ಲ ಎಂದು ಟೀಚರ್​ ಆತನ ಕೈಗೆ ಡ್ರಿಲ್ಲಿಂಗ್ ಮಷಿನ್​ ಇಟ್ಟು ದೌರ್ಜನ್ಯ ನಡೆಸಿದ ಘಟನೆಯೊಂದು ನಡೆದಿದೆ. ಉತ್ತರಪ್ರದೇಶದ ಕಾನ್ಪುರದಲ್ಲಿ ಈ ಪ್ರಕರಣ ನಡೆದಿದ್ದು, ವಿದ್ಯಾರ್ಥಿಗೆ ಗಾಯವಾಗಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
ಕಾನ್ಪುರದ ಪ್ರೇಮ್​ನಗರದಲ್ಲಿ ಈ ಪ್ರಕರಣ ನಡೆದಿದ್ದು, ಸಂಬಂಧಪಟ್ಟ ಶಿಕ್ಷಣಾಧಿಕಾರಿಯಿಂದ ಕಠಿಣ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಸುಜಿತ್​ಕುಮಾರ್ ಸಿಂಗ್ ಹೇಳಿದ್ದಾರೆ.
ಸಂಬಂಧಪಟ್ಟ ಶಿಕ್ಷಕರು ಶಾಲೆಯ ಲೈಬ್ರರಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯೊಂದರ ಪರಿಶೀಲನೆ ನಡೆಸುತ್ತಿರುವಾಗ ಈ ವಿದ್ಯಾರ್ಥಿ ಅಲ್ಲೇ ಹಾದುಹೋಗಿದ್ದನ್ನು ಗಮನಿಸಿ, ಕರೆದು ಗಣಿತದ ಟೇಬಲ್ ಹೇಳು ಎಂದಿದ್ದರು. ಆಗ ಹುಡುಗ ಹೇಳಲು ವಿಫಲನಾಗಿದ್ದಕ್ಕೆ ಈ ಶಿಕ್ಷಕರು ಅಲ್ಲೇ ಇದ್ದ ಡ್ರಿಲ್ಲಿಂಗ್ ಮಷಿನ್ ಆತನ ಕೈ ಮೇಲೆ ಇರಿಸಿ ಗಾಯಗೊಳಿಸಿದ್ದಾರೆ. ಗುರುವಾರ ಈ ಘಟನೆ ನಡೆದಿದ್ದು, ಶುಕ್ರವಾರ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಬಾಲಕನ ಪಾಲಕರು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದರು.
ಶಿಕ್ಷಕರು ಆ ಬಳಿಕ ತಮ್ಮ ದುಷ್ಕೃತ್ಯದ ಬಗ್ಗೆ ಶಾಲೆಯ ಮೇಲಧಿಕಾರಿಗಳಿಗೆ ತಿಳಿಸಿಲ್ಲ ಮತ್ತು ಬಾಲಕನಿಗೆ ಚಿಕಿತ್ಸೆಯನ್ನೂ ಕೊಡಿಸಿಲ್ಲ. ಶಾಲೆಯವರು ಪ್ರಕರಣದ ತನಿಖೆಗೆ ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ.
ಎರಡನೇ ಹೆಂಡ್ತಿಯಂತೆ ನಾಲ್ಕನೇ ಪತ್ನಿಯನ್ನೂ ಕಟ್ಟಿಗೆಯಿಂದ ಹೊಡೆದು ಕೊಂದ ಪಾನಮತ್ತ ಪತಿ!

ಬೆಲ್ಜಿಯಂ ಬೆಡಗಿ ಜತೆ ಹಂಪಿ ಆಟೋಚಾಲಕನ ಮದ್ವೆ; 3 ವರ್ಷದ ಹಿಂದೆ ಗೈಡ್​ಗೆ ಫಿದಾ ಆಗಿದ್ದ ವಿದೇಶಿ ಯುವತಿ, ಇಂದು ಲಗ್ನ..

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × two =
Remember me
