ನವದೆಹಲಿ:ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಇನ್​ಸ್ಟಾಗ್ರಾಮ್​ನಲ್ಲಿ ದಾಖಲೆ ಬರೆದಿದ್ದಾರೆ. 50 ಮಿಲಿಯನ್​ ಫಾಲೋವರ್ಸ್​ನ್ನು ಹೊಂದುವ ಮೂಲಕ ಭಾರತದಲ್ಲಿ ಅತೀ ಹೆಚ್ಚು ಫಾಲೋವರ್ಸ್​ ​ ಹೊಂದಿರುವ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ.
2019ರಲ್ಲಿ ಭಾರತದ ಸೆಲೆಬ್ರಿಟಿಗಳ ಪೈಕಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿ ಎಂಬ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದರು. ಇದೀಗ ಅವರ ಇನ್​ಸ್ಟಾಗ್ರಾಮ್​ಖಾತೆಯಲ್ಲಿ ಫಾಲೋವರ್ಸ್​ ಸಂಖ್ಯೆ 5 ಕೋಟಿಯನ್ನು ದಾಟಿದೆ. ಇನ್​ಸ್ಟಾಗ್ರಾಮ್​​ನಲ್ಲಿ ಹೆಚ್ಚು ಫ್ಯಾನ್​ ಫಾಲೋವರ್ಸ್​ ಹೊಂದಿರುವ ಪೈಕಿ 49.9 ಮಿಲಿಯನ್​ನೊಂದಿಗೆ ಬಾಲಿವುಡ್​ ನಟಿ ಪ್ರಿಯಾಂಕ ಚೋಪ್ರಾ ಎರಡನೇ ಸ್ಥಾನದಲ್ಲಿದ್ದು, 44.1 ಮಿಲಿಯನ್​ನೊಂದಿಗೆ ದೀಪಿಕಾ ಪಡುಕೋಣೆ ಮೂರನೇ ಸ್ಥಾನದಲ್ಲಿದ್ದಾರೆ.
ಈ ಕುರಿತಾಗಿ ಸಂತಸ ಹಂಚಿಕೊಂಡಿರುವ ಕೊಹ್ಲಿ ತಮ್ಮ ಫೋಟೋವೊಂದನ್ನು ಹಾಕಿ “ಇನ್​ಸ್ಟಾಗ್ರಾಮ್​​ನಲ್ಲಿ 50ಮಿಲಿಯನ್​ ಸ್ಟ್ರಾಂಗ್​ ಆಗಿದ್ದೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು” ಎಂದು ಹೇಳಿಕೊಂಡಿದ್ದಾರೆ.
ಇನ್​ಸ್ಟಾಗ್ರಾಮ್​​ನಲ್ಲಿ ಆ್ಯಕ್ಟಿವ್​ ಇರುವ ವಿರಾಟ್​ ಕೊಹ್ಲಿ ಸದಾ ಒಂದಿಲ್ಲೊಂದು ಪೋಸ್ಟ್​ ಹಾಕುತ್ತಲೇ ಇರುತ್ತಾರೆ. ಪತ್ನಿ ಅನುಷ್ಕಾ ಶರ್ಮಾ ಮತ್ತು ತನ್ನ ಟೀಂ ಸದಸ್ಯರೊಂದಿಗೆ ಇರುವ ಫೋಟೋಗಳನ್ನು ಹಾಕಿ ಅಭಿಮಾನಿಗಳ ಮೆಚ್ಚುಗೆ ಪಡೆಯುತ್ತಿರುತ್ತಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
