ತಿರುವನಂತಪುರಂ:ತವರಿನಲ್ಲಿ ನಡೆಯುತ್ತಿರುವ ಭಾರತ – ಸೌತ್​ ಆಫ್ರಿಕಾ ನಡುವಣ ಪಂದ್ಯ ಮುಂಬರುವ ಟಿ-20 ವಿಶ್ವಕಪ್​ ದೃಷ್ಠಿಯಿಂದ ಭಾರತಕ್ಕೆ ಈ ಸರಣಿ ನಿರ್ಣಾಯಕ. ಭಾರತ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಗೆದ್ದುಕೊಂಡರು, ಎದುರಾಳಿ ತಂಡಕ್ಕೆ ಪರಿಣಾಮಕಾರಿಯಾಗಿ ಪ್ರತಿಸ್ಪರ್ಧೆ ಒಡ್ಡುವಲ್ಲಿ ಸೋತಿತ್ತು. ಹೀಗಾಗಿ ತಂಡದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಈ ಸರಣಿ ನಿರ್ಣಾಯಕವಾಗಿದೆ.
ಭಾರತ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಕೆ.ಎಲ್. ರಾಹುಲ್ ಇನ್ನಿಂಗ್ಸ್​ ಆರಂಭಿಸುತ್ತಿದ್ದಾರೆ. ತಂಡಕ್ಕೆ ಉತ್ತಮ ಆರಂಭಿಕ ಮೊತ್ತ ಕಲೆ ಹಾಕಿದರೂ, ದೊಡ್ಡ ಮೊತ್ತದ ರನ್​ ಆಗಿ ಪರಿವರ್ತಿಸಲು ಸಾಧ್ಯವಾಗುತ್ತಿಲ್ಲ. ಶತಕ ಸಿಡಿಸುತ್ತಿಲ್ಲ ಎಂದು ಟೀಕೆಗೆ ಗುರಿಯಾಗುತ್ತಿದ್ದ ವಿರಾಟ್ ಕೊಹ್ಲಿ ಏಷ್ಯಾಕಪ್​ನಿಂದ ಮರಳಿ ಫಾರ್ಮ್​ಗೆ ಬಂದಿದ್ದಾರೆ. ಇನ್ನು ನಾಲ್ಕನೇ ವಿಕೆಟ್​ಗೆ ಸೂರ್ಯಕುಮಾರ್ ಯಾದವ್ ಫಿಕ್ಸ್. ಸಿಕ್ಕ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿರುವ ಸೂರ್ಯಕುಮಾರ್ ತಂಡದ ಟ್ರಂಪ್ ಕಾರ್ಡ್. ಇನ್ನು ದಿನೇಶ್​ ಕಾರ್ತಿಕ್ ಮ್ಯಾಚ್​ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಾ ಟಿ-20 ತಂಡಕ್ಕೆ ಹೇಳಿ ಮಾಡಿಸಿದ ಆಟಗಾರ. ಒಂದು ವೇಳೆ ರಿಷಬ್ ಪಂತ್ ಅವಕಾಶ ಪಡೆದರೂ ಮಿಡಲ್ ಆರ್ಡರ್​ನಲ್ಲಿ ಮಿಂಚಬಲ್ಲರು. ಹೀಗಾಗಿ ಭಾರತ ತಂಡದ ಬ್ಯಾಟಿಂಗ್ ಲೈನ್​​ಅಪ್ ಬಲಿಷ್ಠವಾಗಿದೆ.
ಭಾರತ ತಂಡಕ್ಕೆ ಬೌಲಿಂಗ್​ನದ್ದೇ ಚಿಂತೆ!
ಸದ್ಯಕ್ಕೆ ಭಾರತ ತಂಡಕ್ಕೆ ಬೌಲಿಂಗ್​ನದ್ದೇ ಚಿಂತೆಯಾಗಿದೆ. ಈ ಸರಣಿಯಲ್ಲಿ ತಂಡದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಆಡುತ್ತಿಲ್ಲವಾದರೂ ಹಿಂದಿನ ಸರಣಿಯಾಗಿ ಡೆತ್ ಓವರ್​ ಬೌಲಿಂಗ್​ ಮಾಡಿ ದುಬಾರಿಯಾಗಿದ್ದರು. ಜೊತೆಗೆ ಡೆತ್​ ಓವರ್ ಸ್ಪೆಷಲಿಸ್ಟ್​ ಹರ್ಷಲ್ ಪಟೇಲ್​ ದುಬಾರಿಯಾಗಿದ್ದರು. ಇದೀಗ ಬುಮ್ರಾ ಕಂಬ್ಯಾಕ್​​ನ್ನೇ ಭಾರತ ಹೆಚ್ಚು ಅವಲಂಬಿಸಿದೆ. ಶಮಿ ಅಲಭ್ಯತೆಯಿಂದಾಗಿ ಉಮೇಶ್ ಯಾದವ್ ತಂಡ ಕೂಡಿಕೊಂಡಿದ್ದಾರೆ. ಇದೀಗ ಆರ್ಶದೀಪ್ ಡೆತ್​ ಓವರ್​​ನಲ್ಲಿ ಎದುರಾಳಿ ತಂಡದ ರನ್​ಗೆ ಕಡಿವಾಣ ಹಾಕಬೇಕಿದೆ. ಹೀಗಾಗಿ ಮುಂಬರುವ ವಿಶ್ವಕಪ್​ ಸರಣಿಯ ದೃಷ್ಟಿಯಿಂದ ಭಾರತದ ಬೌಲರ್​ಗಳು ಫಾರ್ಮ್​ಗೆ ಮರಳಲು ಈ ಸರಣಿ ನಿರ್ಣಾಯಕ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five × three =
Remember me
