ನವದೆಹಲಿ:ರೈತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಪ್ರತಿಭಟನೆಗೆ ಮುಂದಾಗಿದ್ದು, ‘ದೆಹಲಿ ಚಲೋ’ ನಡೆಸಲು ಮಂಗಳವಾರ ರಾಷ್ಟ್ರ ರಾಜಧಾನಿ ಕಡೆಗೆ ಹೊರಟಿದ್ದ ರೈತರ ಮೇಲೆ ಪಂಜಾಬ್​-ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಪೊಲೀಸರು ಅಶ್ರುವಾಯು ಸಿಡಿಸುವ ಮೂಲಕ ರೈತರನ್ನು ಚದುರಿಸಿದ್ದಾರೆ.
ದೆಹಲಿ ಚಲೋ ಆರಂಭಿಸಲು ಕರ್ನಾಟಕ, ಹರಿಯಾಣ, ಪಂಜಾಬ್​, ಉತ್ತರಪ್ರದೇಶ, ಮಧ್ಯ ಪ್ರದೇಶ ಮುಂತಾದ ರಾಜ್ಯಗಳಿಂದ ರೈತರು ದೊಡ್ಡ ಸಂಖ್ಯೆಯಲ್ಲಿ ಹೊರಟು ಶಂಭು ಗಡಿ ತಲುಪಿದ್ದರು. ಆದರೆ, ಶಂಭು ಗಡಿಯಲ್ಲೇ ಪೊಲೀಸರು ರೈತರನ್ನು ತಡೆದಿದ್ದು, ಅಶ್ರುವಾಯು ಸಿಡಿಸುವ ಮೂಲಕ ಚದುರಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲ ಕಾಲ ಭಾರೀ ಹೈಡ್ರಾಮವೇ ನಡೆಯಿತು.
ಅಶ್ರವಾಯು ದಾಳಿಯು ಹಿಂಸಾಚಾರದ ಮೊದಲ ಚಿಹ್ನೆಗಳಾಗಿವೆ. ಒಂದೆಡೆ ಸೇರಿದ ರೈತರು ದೆಹಲಿಯತ್ತ ತಮ್ಮ ನಡಿಗೆಯನ್ನು ಪ್ರಾರಂಭಿಸಿದರು. ಅಂದಾಜು ಎರಡು ಡಜನ್ ಶೆಲ್‌ಗಳನ್ನು ಎರಡು ಸುತ್ತುಗಳಲ್ಲಿ ಪೊಲೀಸರು ಹಾರಿಸಿದರು. ಸ್ಥಳದಲ್ಲಿ ಆವರಿಸಿದ ದಟ್ಟ ಹೊಗೆಯಿಂದ ಕೆಲ ಕಾಲ ಅಸ್ಪಷ್ಟತೆ ಉಂಟಾಗಿತ್ತು. ನೂರಾರು ರೈತರು ಮತ್ತು ಅವರ ಬೆಂಬಲಿಗರು, ಹಾಗೆಯೇ ಪ್ರತಿಭಟನೆಯನ್ನು ಕವರ್ ಮಾಡುತ್ತಿದ್ದ ಮಾಧ್ಯಮದ ಸಿಬ್ಬಂದಿ ಅಶ್ರುವಾಯುವಿನಿಂದ ಸಂಕಟ ಅನುಭವಿಸಬೇಕಾಯಿತು. ಇದಕ್ಕೆ ಸಂಬಂಧಸಿದ ವಿಡಿಯೋಗಳು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿರುವುದಕ್ಕೆ ಸಾಕ್ಷಿಯಾಗಿವೆ.
ಬೆಳೆಗಳ ಕನಿಷ್ಠ ಬೆಂಬಲ ಖಾತ್ರಿಗಾಗಿ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ಸಂಯುಕ್ತ ಕಿಸಾನ್ ಮೋರ್ಚಾ, ಕಿಸಾನ್ ಮನ್ಸೂರ್ ಮೋರ್ಚಾ ಸೇರಿದಂತೆ 200ಕ್ಕೂ ಅಧಿಕ ರೈತ ಸಂಘಟನೆಗಳು ಜೊತೆಯಾಗಿ ಈ ದೆಹಲಿ ಚಲೋ ಹಮ್ಮಿಕೊಂಡಿವೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ಲಖಿಂಪುರ ಬೇರಿ ಹಿಂಸಾಚಾರ ಪ್ರಕಣದಲ್ಲಿ ದಾಖಲಾದ ಪೊಲೀಸ್ ಕೇಸುಗಳನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಈ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಹರಿಯಾಣ-ಪಂಜಾಬ್ ಗಡಿ ಪ್ರದೇಶಗಳಲ್ಲಿ ಮುಳ್ಳುತಂತಿ ಬೇಲಿ, ಕಾಂಕ್ರೀಟ್ ಬ್ಲಾಕ್ ಇತ್ಯಾದಿಗಳನ್ನು ಅಳವಡಿಸಿ ರೈತರ ಸಂಚಾರವನ್ನು ತಡೆಯಲು ಯತ್ನಿಸಲಾಗಿದ್ದು, ಸೆಕ್ಷನ್ 144 ಕೂಡ ವಿಧಿಸಲಾಗಿದೆ. ಭಾರಿ ಸಂಖ್ಯೆಯಲ್ಲಿ ರೈತರು ದೆಹಲಿಯಲ್ಲಿ ಜಮಾಯಿಸಲಿರುವುದರಿಂದ ಇಂದಿನಿಂದಲೇ ಒಂದು ತಿಂಗಳ ಕಾಲ ನಿಷೇಧಾಜ್ಞೆ ವಿಧಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯವರೆಗೂ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.(ಏಜೆನ್ಸೀಸ್​)
ಒಂದು ಕೈಯಲ್ಲಿ ಮಗು, ಇನ್ನೊಂದು ಕೈಯಿಂದ ಟ್ರಾಫಿಕ್ ಕಂಟ್ರೋಲ್; ಪೊಲೀಸ್ ವಿಡಿಯೋ ವೈರಲ್

ಲೋಕ ಸಮರ 2024: ಗಡಿನಾಡಲ್ಲಿ ಶುರುವಾಗಿದೆ ಹೈವೋಲ್ಟೇಜ್ ಪಾಲಿಟಿಕ್ಸ್! ಕುಂದಾನಗರಿಯ ಸಿಹಿ ಯಾರಿಗೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − 1 =
Remember me
