ಪುಣೆ:ಇಎಂಐ ಕಟ್ಟಲು ಪ್ರಿಯಕರ ನಿರಾಕರಿಸಿದ್ದಕ್ಕೆ ಮನನೊಂದು ಯುವ ಟೆಕ್ಕಿಯೊಬ್ಬಳು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಮೃತ ಟೆಕ್ಕಿಯನ್ನು ರಸಿಕಾ ರವೀಂದ್ರ ದಿವಟೆ (25) ಎಂದು ಗುರುತಿಸಲಾಗಿದೆ. ಈಕೆ ಪುಣೆಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ 8 ತಿಂಗಳಿಂದ ರಸಿಕಾ ಮತ್ತು ಆಕೆಯ ಬಾಯ್​ಫ್ರೆಂಡ್​ ಆದರ್ಶ್​ ಅಜಯ್​ ಕುಮಾರ್​ ಮೆನನ್​ ಪ್ರೀತಿಸುತ್ತಿದ್ದರು. ಇಬ್ಬರು ಒಂದೇ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ:ಹೈಪರ್‌ಥೈಮೀಸಿಯಾ ಸುತ್ತ ದ್ವಂದ್ವ; ಪೊಲಿಟಿಕಲ್ ಡ್ರಾಮ, ಸೈನ್ಸ್ ಫಿಕ್ಷನ್ ಟ್ರೇಲರ್ ಬಿಡುಗಡೆ
ತನ್ನ ಪ್ರಿಯಕರನಿಗಾಗಿ ಸಾಲ ಮಾಡಿ ಏಪ್ರಿಲ್‌ನಲ್ಲಿ ಕಾರು ಖರೀದಿಸಿದ್ದಳು. ಯುವತಿಯೇ ಡೌನ್​ ಪೇಮೆಂಟ್ ಮೊತ್ತವನ್ನು ಪಾವತಿಸಿದ್ದಾಳೆ. ಇಎಂಐ ಪಾವತಿಸುವುದಾಗಿ ಆದರ್ಶ್ ಭರವಸೆ ನೀಡಿದ್ದನಂತೆ. ಆಕೆಯ ಕ್ರೆಡಿಟ್ ಕಾರ್ಡ್‌ನಿಂದ ಒಟ್ಟು 3 ಲಕ್ಷ ರೂಪಾಯಿ ಸಾಲ ತೆಗೆದುಕೊಳ್ಳಲಾಗಿದೆ. 2.75 ಲಕ್ಷ ರೂ. ವೈಯಕ್ತಿಕ ಸಾಲವನ್ನೂ ತೆಗೆದುಕೊಳ್ಳಲಾಗಿದೆ. ಸಾಲದ ಆ್ಯಪ್ ಮೂಲಕ ಸಾಲವನ್ನೂ ಪಡೆದಿದ್ದಳು.
ಆದರೆ, ಇಎಂಐ ಪಾವತಿಸಲು ವಿಫಲವಾದಾಗ ಒತ್ತಡಕ್ಕೆ ಒಳಗಾಗಿದ್ದಳು ಎಂದು ಆಕೆಯ ತಾಯಿ ಹೇಳಿದ್ದಾರೆ. ಈ ಬಗ್ಗೆ ರಸಿಕಾ ಆದರ್ಶ್ ಜೊತೆ ಜಗಳವಾಡಿದ್ದಳು. ಆದರೆ, ಇಎಂಐ ಕಟ್ಟಲು ಮೆನನ್​ ಮಾತ್ರ ಒಪ್ಪಲೇ ಇಲ್ಲ. ಇದರಿಂದ ಮನನೊಂದ ರಸಿಕಾ, ಮೆನನ್ ಫ್ಲಾಟ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ತಾಯಿ ದೂರಿನ ಮೇರೆಗೆ ಪೊಲೀಸರು ಆದರ್ಶ್‌ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.(ಏಜೆನ್ಸೀಸ್​)
ತೂಕ ನನಗೆ ಯಾವ ಲೆಕ್ಕ?; 33 ಕೆಜಿ ಇಳಿಸಿಕೊಂಡ ಗೀತಾ ಭಾರತಿ ಭಟ್

ಶಾಸನ ಸಭೆಗೆ 33% ನಾರಿಶಕ್ತಿ: ಮಹಿಳಾ ಮೀಸಲಾತಿ ಭರವಸೆ ಈಡೇರಿಸುವತ್ತ ನರೇಂದ್ರ ಮೋದಿ ಸರ್ಕಾರ

ಕಾವೇರಿ ವಿವಾದಕ್ಕೆ ರಾಜಕೀಯ ಕೆಸರು: ಬೊಮ್ಮಾಯಿ-ಡಿಕೆಶಿ ನಡುವೆ ತೀವ್ರ ಜಟಾಪಟಿ; ಮಂಡ್ಯದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eighteen =
Remember me
