ಚೆನ್ನೈ:ಟೆಕ್ಕಿಯೊಬ್ಬ ತನ್ನ ಸಲಿಂಗ ಸಂಗಾತಿಯನ್ನು ಕೊಂದು ತಾನು ಕೂಡ ಸಾವಿಗೆ ಶರಣಾಗಿರುವ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನ ಮೊಗಪ್ಪೈರ್ ವೆಸ್ಟ್​ನಲ್ಲಿರುವ ಲಾಡ್ಜ್​ ಒಂದರಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಸಂಬಂಧ ಮುಂದುವರಿಸಲು ಬಲವಂತ ಮಾಡಿದ್ದಕ್ಕೆ ಸಂಗಾತಿಯನ್ನು ಕೊಲೆ ಮಾಡಿ ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.
ತೊರೈಪಾಕ್ಕಂನ ಐಟಿ ಸಂಸ್ಥೆಯೊಂದರೆಲ್ಲಿ ಕೆಲಸ ಮಾಡುತ್ತಿದ್ದ ಅಂಬತ್ತೂರು ಮೂಲದ ಟೆಕ್ಕಿ ವಂಜಿನಾಥನ್ (24) ಮತ್ತು ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಅಮಿಂಜಿಕರೈ ಮೂಲದ ಲೋಕೇಶ್ (25) ಒಂದು ವರ್ಷದ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಪರಿಚಿತರಾಗಿ ತಮ್ಮ ಸಂಬಂಧವನ್ನು ಪ್ರಾರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಈ ಸಂಬಂಧಕ್ಕೆ ಇಬ್ಬರು ಕುಟುಂಬದವರ ವಿರೋಧ ಇತ್ತು. ಇದರ ನಡುವೆ ಕಳೆದ ತಿಂಗಳು ವಾಂಜಿನಾಥನ್, ಪಾಲಕರ ಮಾತಿಗೆ ಒಪ್ಪಿ ಯುವತಿಯೊಬ್ಬಳ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ, ಸಂಬಂಧವನ್ನು ಮುಂದುವರಿಸಲು ಲೋಕೇಸ್​ ಒತ್ತಾಯಿಸಿದ್ದ. ಇದು ವಾಂಜಿನಾಥನ್​ಗೆ ಇಷ್ಟವಿರಲಿಲ್ಲ. ಹೀಗಾಗಿ ಲೋಕೇಶ್‌ನಿಂದ ಅಂತರ ಕಾಯ್ದುಕೊಂಡಿದ್ದ. ಅಲ್ಲದೆ, ಕಳೆದ ಎರಡು ವಾರಗಳಿಂದ ಇಬ್ಬರೂ ನಿರಂತರವಾಗಿ ಫೋನ್‌ನಲ್ಲಿ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ತಡರಾತ್ರಿ ಲೋಕೇಶ್‌ ಕೆಲಸ ಮುಗಿಸಿ ಮನೆಗೆ ಬಂದಿಲ್ಲ. ಅಲ್ಲದೆ, ಆತನ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿದೆ ಎಂದು ಆತನ ಪಾಲಕರು ಅಮ್ಮಿಂಜಿಕರೈ ಪೊಲೀಸರಿಗೆ ದೂರು ನೀಡಿದ್ದರು. ಇತ್ತ ವಾಂಜಿನಾಥನ್ ಕೂಡ ನಾಪತ್ತೆಯಾಗಿದ್ದರಿಂದ ಆತನ ಪಾಲಕರು ಲೋಕೇಶ್ ಕುಟುಂಬವನ್ನು ಸಂಪರ್ಕಿಸಿದ್ದಾರೆ. ಇದಾದ ಬಳಿಕ ವಾಂಜಿನಾಥನ್ ಅವರ ಸಹೋದರಿಗೆ ವಾಯ್ಸ್​ ಮೆಸೇಜ್​ ಬಂದಿದ್ದು, ಅದನ್ನು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಮೆಸೇಜ್​ನಲ್ಲಿ ಕೊಲೆ ಮಾಡಿರುವ ಬಗ್ಗೆ ಮತ್ತು ತನ್ನ ಜೀವನವನ್ನು ಕೊನೆಗೊಳಿಸಲು ಕಾರಣ ಏನು ಎಂಬುದನ್ನು ತಿಳಿಸಿದ್ದನು.
ಬಳಿಕ ಪೊಲೀಸರು ಮೊಬೈಲ್ ನಂಬರ್​ ಲೊಕೇಶನ್​ ಪತ್ತೆಹಚ್ಚಿ ಪಶ್ಚಿಮ ಮೊಗಪ್ಪೈರ್‌ನ ಪನೀರ್ ನಗರದ ಲಾಡ್ಜ್‌ ಒಂದಕ್ಕೆ ತೆರಳಿದರು. ಬಳಿಕ ಕೋಣೆಯನ್ನು ಪ್ರವೇಶಿಸಿದಾಗ ವಾಂಜಿನಾಥನ್ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿದ್ದು, ಲೋಕೇಶ್ ಹಾಸಿಗೆಯ ಮೇಲೆ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಮೃತದೇಹಗಳನ್ನು ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಕೆಎಂಸಿಎಚ್) ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ವಾಂಜಿನಾಥನ್‌ ತನ್ನ ಶೂ ಲೇಸ್​ನಿಂದ ಲೋಕೇಶ್‌ನ ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ತನ್ನ ಸಹೋದರಿಗೆ ಧ್ವನಿ ಸಂದೇಶ ಕಳುಹಿಸಿ, ತಾನು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಅಯ್ಯೋ ಏನಾಯಿತು ರವೀಂದರ್​ಗೆ? ಗಂಡನ ಸ್ಥಿತಿ ನೋಡಿ ನಟಿ ಮಹಾಲಕ್ಷ್ಮಿ ಕಣ್ಣೀರು!

ಈ ರೀತಿಯ ಕರೆ, ಮೆಸೇಜ್​ಗಳು ನಿಮಗೂ ಬರಬಹುದು ಎಚ್ಚರ! UPI ವಂಚಕರ ಬಗ್ಗೆ ನಿಮಗೆ ತಿಳಿದಿರಲಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
