ನವದೆಹಲಿ :ಭಾರತದಲ್ಲಿ ಕರೊನಾ ಲಸಿಕೆ ಪಡೆಯುವ ಬಗ್ಗೆ ಹಲವು ಸಲಹೆಗಳನ್ನು ಲಸಿಕೆಯ ಬಗೆಗಿನ ತಾಂತ್ರಿಕ ಸಮಿತಿಯಾದ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಷನ್ (ಎನ್​ಟಿಎಜಿಐ) ನೀಡಿದೆ. ಇದರ ಪ್ರಕಾರ ಕೋವಿಶೀಲ್ಡ್​ ಲಸಿಕೆಯ ಮೊದಲನೇ ಡೋಸ್​ ಪಡೆದ ನಂತರ 12 ರಿಂದ 16 ವಾರಗಳ ಅಂತರ ಬಿಟ್ಟು ಎರಡನೇ ಡೋಸ್​ ಕೊಟ್ಟರೆ ಆ ಲಸಿಕೆಯ ಪರಿಣಾಮಕಾರಿತ್ವ ಇನ್ನೂ ಹೆಚ್ಚಲಿದೆ ಎನ್ನಲಾಗಿದೆ.
ಹಾಲಿ ಕೋವಿಶೀಲ್ಡ್​ ಎರಡನೇ ಡೋಸ್​ ಪಡೆಯಲು ಇರುವ 4 ರಿಂದ 8 ವಾರಗಳ ಅಂತರವನ್ನು ಏರಿಸಿರುವ ಎನ್​ಟಿಎಜಿಐ, ಕೋವಾಕ್ಸಿನ್​​ಗೆ ಈ ರೀತಿಯ ಯಾವುದೇ ಬದಲಾವಣೆಯನ್ನು ಹೇಳಿಲ್ಲ. ಸಮಿತಿಯ ಇತರ ಶಿಫಾರಸುಗಳೆಂದರೆ :-
* ಕರೊನಾ ಸೋಂಕಿಗೆ ಒಳಗಾಗಿರುವವರು, ಗುಣಮುಖರಾಗಿ ಆರು ತಿಂಗಳು ಕಳೆಯುವವರೆಗೆ ಲಸಿಕೆ ಪಡೆಯುವುದನ್ನು ಮುಂದೂಡಬೇಕು.* ಗರ್ಭಿಣಿಯರು ಭಾರತದಲ್ಲಿ ಲಭ್ಯವಿರುವ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್​ ಎರಡೂ ಲಸಿಕೆಗಳಲ್ಲಿ ಯಾವುದನ್ನು ಬೇಕಾದರೂ ಪಡೆಯಬಹುದು.* ಹೆರಿಗೆಯ ನಂತರ ಮಗುವಿಗೆ ಹಾಲು ಕುಡಿಸುತ್ತಿರುವ ಬಾಣಂತಿಯರು ಯಾವುದೇ ಸಮಯದಲ್ಲಿ ಬೇಕಾದರೂ ಲಸಿಕೆ ಪಡೆಯಬಹುದು.
ಎನ್‌ಟಿಎಜಿಐನ ಈ ಶಿಫಾರಸುಗಳನ್ನು ಕೋವಿಡ್-19 ಲಸಿಕೆ ನಿರ್ವಹಣೆಗಾಗಿ ರಚಿಸಲಾಗಿರುವ ರಾಷ್ಟ್ರೀಯ ತಜ್ಞರ ಗುಂಪಿಗೆ ಕಳುಹಿಸಲಾಗುವುದು ಎನ್ನಲಾಗಿದೆ.(ಏಜೆನ್ಸೀಸ್)
ಜೂನ್ 1 ರವರೆಗೆ ಮಹಾ ಲಾಕ್​ಡೌನ್ ವಿಸ್ತರಣೆ ; ರಾಜ್ಯ ಪ್ರವೇಶಿಸಲು ನೆಗೆಟಿವ್ ವರದಿ ಕಡ್ಡಾಯ

ಲಸಿಕೆ ಪಡೆಯಲು ಹೋದ ಆಟೋ ಡ್ರೈವರ್​… ಮನೆಗೆ ವಾಪಸಾದಾಗ ಅಲ್ಮೆರಾ ಖಾಲಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 10 =
Remember me
