ಉತ್ತರಕಾಶಿ:ಸಿಲ್ಕಾ್ಯರಾ ಸುರಂಗದೊಳಗೆ ಸಿಲುಕಿರುವ 41 ಕಾರ್ವಿುಕರ ರಕ್ಷಣಾ ಕಾರ್ಯಕ್ಕೆ ಶನಿವಾರ ಕೂಡ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಕಾರ್ವಿುಕರು ಇನ್ನಷ್ಟು ದಿನ ಸುರಂಗದಲ್ಲೇ ಇರಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರದ ಕಾರ್ಯಾಚರಣೆಯಲ್ಲಿ ಆಗರ್ ಯಂತ್ರವು ಪದೆ ಪದೇ ಕೈಕೊಟ್ಟ ಕಾರಣ ಡ್ರಿಲ್ಲಿಂಗ್ ಸ್ಥಗಿತ ಮಾಡಲಾಗಿದೆ. ರಕ್ಷಣಾ ಸಿಬ್ಬಂದಿಯೇ ಸುರಂಗದ ಒಳಗೆ ತೆರಳಿ ಭೌತಿಕವಾಗಿ ಅವಶೇಷಗಳನ್ನು ಅಗೆಯುವ ಕೆಲಸ ಭಾನುವಾರದಿಂದ ಆರಂಭವಾಗಲಿದೆ. ಲಂಬವಾಗಿ ಕೊಳವೆ ಕೊರೆಯುವುದು ಸಹಿತ ಇತರ ಮಾರ್ಗಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಂಗದ ಕುಸಿದ ಭಾಗದಲ್ಲಿ ಡ್ರಿಲ್ಲಿಂಗ್ ಕೆಲಸ ಶುಕ್ರವಾರ ರಾತ್ರಿ ಸ್ಥಗಿತಗೊಂಡಿತು. ಆಗರ್ ಡ್ರಿಲ್ಲಿಂಗ್ ಯಂತ್ರಕ್ಕೆ ಅಡಚಣೆ ಎದುರಾಯಿತು. ಶುಕ್ರವಾರದ ಕೊರೆಯುವಿಕೆ ಸ್ಥಗಿತವಾದಾಗ 800 ಎಂಎಂ ಅಗಲದ ಉಕ್ಕಿನ ಪೈಪ್ ಮೂಲಕ 46.8 ಮೀಟರ್​ಗಳನ್ನು ಕೊರೆಯಲಾಗಿತ್ತು. ಸುಮಾರು 60 ಮೀಟರ್ ದೂರದಲ್ಲಿ ಕಾರ್ವಿುಕರು ಸಿಲುಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಇನ್ನೂ ಸುಮಾರು 14 ಅಡಿ ಕೊರೆಯಬೇಕಿದೆ. ತಾಂತ್ರಿಕ ಸಮಸ್ಯೆ ಕಾರಣ ಈಗ ಉಳಿದಿರುವ ದೂರವನ್ನು ಸಿಬ್ಬಂದಿ ಭೌತಿಕವಾಗಿ ಅಗೆಬೇಕಿದೆ. ಮ್ಯಾನ್ಯುವಲ್ ಡ್ರಿಲ್ಲಿಂಗ್ ಎಂದು ಇದಕ್ಕೆ ಕರೆಯಲಾಗುತ್ತಿದ್ದರೆ. ಯಂತ್ರಕ್ಕಿಂತ ಹೆಚ್ಚಿನ ಸಮಯವನ್ನು ಇದು ತೆಗೆದುಕೊಳ್ಳುತ್ತದೆ. ಈ ಕಾರಣಕ್ಕಾಗಿ ರಕ್ಷಣಾ ಕಾರ್ಯ ವಿಳಂಬವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ವಿುಕರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಸಲು ಆರು ಇಂಚು ಅಗಲದ ಟ್ಯೂಬ್ ಅಳವಡಿಕೆ ಮಾಡಲಾಗಿದೆ.
ಕುಟುಂಬಸ್ಥರ ಅಸಮಾಧಾನ: ತಾಂತ್ರಿಕ ಅಡೆತಡೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಕಾರ್ವಿುಕರ ಸಂಬಂಧಿಕರು ಇದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾರ್ವಿುಕರು ಶೀಘ್ರದಲ್ಲೇ ಸುರಂಗದಿಂದ ಹೊರಬರಲಿದ್ದಾರೆ ಎಂದು ಕಳೆದ ಎರಡು ದಿನಗಳಿಂದ ನಮಗೆ ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಆದರೆ ಪ್ರಕ್ರಿಯೆ ವಿಳಂಬವಾಗುತ್ತಲೇ ಇದೆ ಎಂದು ಕಾರ್ವಿುಕರ ಸಂಬಂಧಿಕರು ನಿರಾಸೆ ಹೊರಹಾಕುತ್ತಿದ್ದಾರೆ.
ಸಂಕೀರ್ಣವಾದ ಪ್ರಕ್ರಿಯೆ: ಶನಿವಾರ ಬೆಳಗ್ಗೆ ದೊಡ್ಡ ಡ್ರಿಲ್ಲಿಂಗ್ ಯಂತ್ರವನ್ನು ಸುರಂಗದ ಮೇಲಿನ ಬೆಟ್ಟದ ಕಡೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಲಂಬವಾಗಿ ಕೊರೆಯುವಿಕೆಗಾಗಿ ತಜ್ಞರು ಎರಡು ಸ್ಥಳಗಳನ್ನು ಗುರುತಿಸಿದ್ದಾರೆ. ಸುರಂಗದ ಮೇಲ್ಭಾಗದಲ್ಲಿ 1.5 ಕಿಮೀ ಪ್ರವೇಶ ರಸ್ತೆಯನ್ನು ಬಾರ್ಡರ್ ರೋಡ್ಸ್ ಆರ್ಗನೈಸೇಷನ್ (ಬಿಆರ್​ಒ) ಈಗಾ ಗಲೇ ನಿರ್ವಿುಸಿದೆ. ಲಂಬ ಕೊರೆಯುವಿಕೆಯು ಹೆಚ್ಚು ಸಮಯ ತೆಗೆದುಕೊಳ್ಳುವ ಮತ್ತು ಸಂಕೀರ್ಣವಾದ ಪ್ರಕ್ರಿಯೆಯಾಗಿದೆ. ಸುರಂಗದ ಮೇಲ್ಭಾಗದಲ್ಲಿ ಲಭ್ಯವಿರುವ ಕಿರಿದಾದ ಸ್ಥಳದಿಂದಾಗಿ ಹೆಚ್ಚು ನಿಖರತೆ ಮತ್ತು ಎಚ್ಚರಿಕೆಯಿಂದ ಕೊರೆಯುವ ಅಗತ್ಯವಿದೆ. ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಈ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 3 =
Remember me
