ಬೆಂಗಳೂರು:ಹೊಸ ಮಾದರಿಯ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಭರವಸೆ ಮೂಡಿಸಿರುವ ‘ಟೆಕ್ನೊ’ ಕಂಪನಿ ಭಾರತದಲ್ಲಿ ಮೊದಲ ಬಾರಿಗೆ ಪ್ರೀಮಿಯಂ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದ್ದು, ಟೆಕ್​ ಪ್ರಿಯರು ಇದರ ಬಗ್ಗೆ ತಿಳಿದುಕೊಳ್ಳಲು ಎದುರು ನೋಡುತ್ತಿದ್ದಾರೆ.
ಟೆಕ್ನೊ ಕಂಪನಿ ಮೂಲತಃ ಚೀನಾ ದೇಶದ ಕಂಪೆನಿಯಾಗಿದ್ದು, ಪ್ರೀಮಿಯಂ ಎಲೆಕ್ಟ್ರಾನಿಕ್​ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ. ಟೆಕ್ನೊ, PHANTOM X2 ಹೆಸರಿನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು ಅದರ ಬೆಲೆಯನ್ನು 39,999  ರೂ. ಎಂದು ನಿಗದಿ ಮಾಡಿದೆ. ಈ ಫೋನ್​ ಎಲ್ಲಾ ರಿಟೇಲ್​ ಅಂಗಡಿಗಳಲ್ಲೂ ಲಭ್ಯವಾಗಲಿದ್ದು ಅಮೆಜಾನ್​ನಲ್ಲೂ ಸಿಗಲಿದೆ. ಈ ಫೋನ್​ಗೆ ಜನವರಿ 2 ರಿಂದ ಪ್ರಿ ಬುಕ್ಕಿಂಗ್ ಆರಂಭವಾಗಿದ್ದು, ಜನವರಿ 9ರಿಂದ ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಇದೆ ಮಾರಾಟ ಆರಂಭವಾಗಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ಅಮೆಜಾನ್‌ನ ನೂರು ಹಾಗೂ ರೀಟೇಲ್ ಅಂಗಡಿಗಳಲ್ಲಿ ಈ ಫೋನ್​ ಖರೀದಿಸುವ ಇನ್ನೂರು ಅದೃಷ್ಟಶಾಲಿ ಗ್ರಾಹಕರಿಗೆ PHANTOM X3ಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಅವಕಾಶ ಪಡೆಯಲಿದ್ದಾರೆ. ಸದ್ಯ ಭಾರತದಲ್ಲಿ PHANTOM X3ಇನ್ನೂ ಬಿಡುಗಡೆ ಆಗಿಲ್ಲ. ಭಾರತದಲ್ಲಿ ಆ ಮಾಡೆಲ್​ ಬಿಡುಗಡೆ ಆಗುವವರೆಗೆ ಅದೃಷ್ಟಶಾಲಿಗಳು ಕಾಯಬೇಕಿದೆ.
ಈ ಫೋನ್​ನ ವೈಶಿಷ್ಟ್ಯಗಳು ಏನಪ್ಪಾ?ಈ ಫೋನ್ 5ಜಿ ಆಗಿದ್ದು, ಎರಡು ಸಿಮ್ ಬಳಸುವ ಸೌಲಭ್ಯ ಇದೆ. 4nm (ನ್ಯಾನೊ ಮೀಟರ್​) ಸಣ್ಣಗಿರುವ Dimensity 9000 ಪ್ರೊಸೆಸರ್ ಹೊಂದಿದೆ. ಇದರಲ್ಲಿರುವ ಬ್ಯಾಕ್​ ಕ್ಯಾಮೆರಾ 64 ಎಂಪಿ ಅಲ್ಫಾ ಕ್ಲಿಯರ್ ನೈಟ್ ಕ್ಯಾಮೆರಾ ಭಾರಿ ವಿಶೇಷ. ಇಮೇಜ್ ಸ್ಟೆಬಿಲೈಸೇಷನ್, ಡ್ಯುಯಲ್ ವಿಡಿಯೊ, ಎಚ್‌ಡಿಆರ್ ವಿಡಿಯೊ, 4ಕೆ ವಿಡಿಯೊ ಸೌಲಭ್ಯ ಇದ್ದು, ಇದು ಗ್ರಾಹಕರಿಗೆ ಉತ್ತಮ ಫೊಟೊಗ್ರಫಿಯ ಅನುಭವ ನೀಡಲಿದೆ.
6.8 ಇಂಚಿನ ಡಿಸ್‌ಪ್ಲೇ ಇದ್ದು, 5160 mAH ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 25 ದಿನಗಳ ಸ್ಟಾಂಡ್ ಬೈ, ಅಂದರೆ ಚಾರ್ಜ್​ ಮಾಡದೇ ಹಾಗೆಯೇ ಇಡಬಹುದಾದ ಸಮಯವನ್ನು ಇದು ಹೊಂದಿದ್ದು 23 ಗಂಟೆಗಳ ಕಾಲ ನಿರಂತರವಾಗಿ ಬಳಸಬಹುದು. 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಈ ಫೋನ್​ನಲ್ಲಿದೆ ಎಂದು ಕಂಪನಿ ಮಾಹಿತಿ ನೀಡಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eleven =
Remember me
