ಸಾಣಂಬಟ್ಲ:ತನ್ನ ತಾಯಿಯ ಕೆಟ್ಟ ನಡವಳಿಕೆಯಿಂದ ನೊಂದ ಬಾಲಕಿಯು ಗ್ರಾಮದ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಆಂಧ್ರದ ತಿರುಪತಿಯ ಸಾಣಂಬಟ್ಲಾ ಗ್ರಾಮದಲ್ಲಿ ನಡೆದಿದೆ. ಆರೋಪಿ ಬಾಲಕಿಯನ್ನು ಕೀರ್ತಿ(19) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ವಿಂಡೋ ಗ್ಲಾಸ್​ಗೆ ಬಾಲಕಿ ಕತ್ತು ಸಿಲುಕಿ ಮೃತ್ಯು
ಗ್ರಾಮದಿಂದ ತನ್ನ ಕುಟುಂಬವನ್ನು ಸ್ಥಳಾಂತರಿಸುವ ಉದ್ದೇಶದಿಂದ ಸುಮಾರು ಒಂದು ತಿಂಗಳಿನಿಂದ ಯಾರಿಗೂ ತಿಳಿಯದಂತೆ 12 ಸ್ಥಳಗಳಲ್ಲಿ ಬೆಂಕಿ ಹಚ್ಚಿರುವುದಾಗಿ ಹೇಳಿದ್ದಾಳೆ. ಈ ತರಹದ ಸರಣಿ ಬೆಂಕಿಗಳಿಂದ ತನ್ನ ಕುಟುಂಬವನ್ನು ಮೂಢನಂಬಿಕೆಗೆ ತಳ್ಳವುದರ ಜತೆಗೆ ತನ್ನ ತಾಯಿಯ ಕೆಟ್ಟ ನಡವಳಿಕೆಯನ್ನು ಸುಧಾರಿಸಲು ಗ್ರಾಮವನ್ನು ಖಾಲಿ ಮಾಡಬಹುದೆಂದು ಬಾಲಕಿ ಯೋಚಿಸಿದ್ದಳು.
ಹಾಗಾಗಿ ಊರಿನಲ್ಲಿನ ಬಣವೆಗಳು, ನೆರೆಹೊರೆಯವರು ಮನೆ ಹೊರಗಡೆ ಹಾಕಿದ್ದ ಬಟ್ಟೆ ಹಾಗೂ ಎಲ್ಲೆಂದರಲ್ಲಿ ಯಾರಿಗೂ ಗೊತ್ತಾಗದಂತೆ ಬೆಂಕಿ ಹಾಕಿ ಸುಡುತ್ತಿದ್ದಳು. ಇದರಿಂದ ಗ್ರಾಮದ ಜನರು ಭೀತಿಗೆ ಒಳಗಾಗಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿದ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
