ನವದೆಹಲಿ:ಟಿಕ್​ಟಾಕ್​ ಜಾಲತಾಣದಲ್ಲಿ ತಾನು ಹಾಕಿದ್ದ ವಿಡಿಯೋಕ್ಕೆ ಹೆಚ್ಚಿನ ಲೈಕ್ಸ್​ ಬರಲಿಲ್ಲ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ನೋಯ್ಡಾದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಲಾರ್​ಪುರ ಗ್ರಾಮದ ನೂರ್​ ಇಕ್ಬಾಲ್​ (18) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವ.
ನೂರ್​ ಇಕ್ಬಾಲ್​ಗೆ ಮೊದಲಿನಿಂದಲೂ ಟಿಕ್​ಟಾಕ್​ ಜಾಲತಾಣದಲ್ಲಿ ವಿಡಿಯೋಗಳನ್ನು ಅಪ್​ಲೋಡ್​ ಮಾಡುವ ಹವ್ಯಾಸ ಇತ್ತು. ಆದರೆ ಆ ವಿಡಿಯೋಗಳನ್ನು ನೋಡಿ, ಹೆಚ್ಚಿನ ಜನರು ಲೈಕ್​ ಕೊಡುತ್ತಿರಲಿಲ್ಲ. ಇದರಿಂದ ಆತ ಖಿನ್ನತೆಗೆ ಒಳಗಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಟಿಕ್​ಟಾಕ್​ನಲ್ಲಿ ವಿಡಿಯೋ ಹಾಕುತ್ತಿದ್ದಂತೆ ತನ್ನ ನೆರೆಹೊರೆಯವರಿಗೆಲ್ಲ ಕರೆ ಮಾಡುತ್ತಿದ್ದ ನೂರ್​ ಇಕ್ಬಾಲ್​, ವಿಡಿಯೋವನ್ನು ಲೈಕ್​ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದ. ಆತ ಸನ್ನಡತೆ ಹೊಂದಿದ್ದ ಎಂದು ಅಕ್ಕಪಕ್ಕದ ಮನೆಯವರು ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ.
ಮೈಸೂರಿನಲ್ಲಿ ನಾಲ್ಕು ಕೋತಿಗಳ ಶಂಕಾಸ್ಪದ ಸಾವು, ಮಂಗನ ಕಾಯಿಲೆ ವದಂತಿ ಹಿನ್ನೆಲೆ ಮಂಗಗಳ ದೇಹದ ಪರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 7 =
Remember me
