ಇಂದೋರ್​:ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಮನೆಯಲ್ಲಿ ಬೈಯುತ್ತಾರೆ ಎಂಬ ಕಾರಣಕ್ಕೆ 17ವರ್ಷದ ಬಾಲಕಿ ಒಬ್ಬಳು ಪಾಲಕರ ಬಳಿ ಕಟ್ಟುಕತ್ತೆ ಹೇಳುವ ಮೂಲಕ ಸಿಕ್ಕಿಹಾಕಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.
ಬಿಎ ವ್ಯಾಸಂಗ ಮಾದುತ್ತಿರುವ ಬಾಲಕಿಯೂ ಪರೀಕ್ಷೆಯಲ್ಲಿ ಫೇಲ್​ ಆದ ಕಾರಣ ತನ್ನನ್ನು ಅಪಹರಣ ಮಾಡಿದ್ದಾರೆ ಎಂದು ಅಪರಿಚಿತ ನಂಬರ್​ನಿಂದ ಕರೆ ಮಾಡಿ ತನ್ನ ಪಾಲಕರಿಗೆ ಹೇಳಿದ್ದಳು.
17 ವರ್ಷದ ಬಾಲಕಿಯೂ ಇಂದೋರ್​ನ ಖಾಸಗಿ ಕಾಲೇಜ್​ ಒಂದರಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಮೇ 12 ಶುಕ್ರವಾರದಂದು ಪರೀಕ್ಷೆಯ ರಿಸಲ್ಟ್​ ಹೊರಬಿದಿದ್ದು ಇದರಲ್ಲಿ ಅನುತ್ತೀರ್ಣಳಾಗಿದ್ದಾಳೆ.
ತಾನು ಪರೀಕ್ಷೆಯಲ್ಲಿ ಫೇಲ್​ ಆಗಿರುವ ವಿಚಾರ ಮನೆಯವರಿಗೆ ತಿಳಿದರೆ ಎಲ್ಲಿ ಬೈಯುತ್ತಾರೋ ಎಂದು ಬೆದರಿದ ಬಾಲಕಿ ಶುಕ್ರವಾರ ಕಾಲೇಜಿನಿಂದ ಮನೆಗೆ ವಾಪಸ್​ ಆಗುತ್ತಿದ್ದ ವೇಳೆ ತನ್ನನ್ನು ಯಾರೋ ಅಪಹರಿಸಿದ್ದಾರೆ ಎಂದು ಅಪರಿಚಿತರ ನಂಬರ್​ನಿಂದ ಕರೆ ಮಾಡಿ ತನ್ನ ಪಾಲಕರಿಗೆ ಹೇಳಿದ್ದಾಳೆ.
ಇದನ್ನು ನಂಬಿದ ಪಾಲಕರು ತಕ್ಷಣವೇ ಹತ್ತಿರದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ ಮತ್ತು ತಮ್ಮ ಮಗಳನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಖಡ್ಗ ಪ್ರದರ್ಶಿಸಿ ಯತ್ನಾಳ್​ ಗೆಲುವು ಸಂಭ್ರಮಿಸಿದ ಬೆಂಬಲಿಗ!
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಕಾಣೆಯಾದ ಸ್ಥಳದ ಸುತ್ತಮುತ್ತ ಇರುವ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆಕೆ ಹೇಳಿರುವುದು ಕಟ್ಟು ಕಥೆ ಎಂದು ಸಾಬೀತಾಗಿದೆ.
ಬಾಲಕಿಯ ಫೋಟೋವನ್ನು ರಾಜ್ಯದ ಬೇರೆ ಬೇರೆ ಪೊಲೀಸ್​ ಠಾಣೆಗಳಿಗೆ ಕಳುಹಿಸಿ ಕೊಟ್ಟಿದ್ಧಾರೆ. ಈ ವೇಳೆ ಉಜ್ಜಯಿನಿಯಿಂದ ಪೊಲೀಸರಿಗೆ ಆಕೆ ಒಂದು ರೆಸ್ಟೋರೆಂಟ್​ನಲ್ಲಿ ಕುಳಿತಿರುವ ಬಗ್ಗೆ ಮಾಹಿತಿ ದೊರೆತ್ತಿದ್ದು ವಶಕ್ಕೆ ಪಡೆದು ಪಾಲಕರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಂಗಾಂಗ ಪೊಲೀಸ್​ ಠಾಣಾಧಿಕಾರಿ ರಾಜೇಂದ್ರ ಸೋನಿ ಪರೀಕ್ಷೆಯಲ್ಲಿ ಫೇಲ್​ ಆಗಿರುವ ಕಾರಣ ಮನೆಯಲ್ಲಿ ಬೈಯುತ್ತಾರೆ ಎಂಬ ಕಾರಣಕ್ಕೆ ಬಾಲಕಿ ಅಪಹರಣದ ಕುರಿತು ಕಟ್ಟುಕಥೆಯನ್ನು ಹೇಳಿದ್ದಾಳೆ.
ಆಕೆಯ ಜೊತೆ ಮನೋ ವೈದ್ಯರು ಆಪ್ತ ಸಮಾಲೋಚನೆ ನಡೆಸಿದ್ದು ಈ ರೀತಿ ಮಾಡದಂತೆ ಬುದ್ದಿವಾದ ಹೇಳಿ ಪಾಲಕರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
