ಮಥುರಾ:ಯುವಕನೊಬ್ಬ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.ಇದನ್ನೂ ಓದಿ:ನವಜಾತ ಶಿಶುವಿನ ಪ್ರಾಣ ತೆಗೆದು ಹೂತಿಟ್ಟ ಮಹಿಳೆ: ಮೃತದೇಹವನ್ನು ಮೇಲೆತ್ತಿ ಎಳೆದಾಡಿದ ಬೀದಿ ನಾಯಿಗಳುಮೃತನನ್ನು ವಂಶ್ ಎಂದು ಗುರುತಿಸಲಾಗಿದ್ದು, ಬೆಳಿಗ್ಗೆ ತನ್ನ ಮೂವರು ಸ್ನೇಹಿತರೊಂದಿಗೆ ದ್ವಾರಕಾ ಧೀಶ್ ದೇವಸ್ಥಾನಕ್ಕೆ ಭೇಟಿ ನೀಡಲು ಹೋಗಿದ್ದರು. ಈ ವೇಳೆ ಹೋಳಿ ಗೇಟ್‌ನಲ್ಲಿ ವಾಹನ ದಟ್ಟಣೆಯಿಂದಾಗಿ ಮೂವರು ಜಮುನಾ ಪರ್ ಪ್ರದೇಶದ ತಿವಾರಿಪುರಂ ಕಡೆಗೆ ತೆರಳಿ ಅಲ್ಲಿ ಸ್ಕೂಟರ್ ನಿಲ್ಲಿಸಿ ಸೇತುವೆಯ ಮೇಲೆ ಸೆಲ್ಫಿ ತೆಗೆದುಕೊಳ್ಳಲಾರಂಭಿಸಿದರು.ಈ ವೇಳೆ ರೈಲು ಬಂದಿದ್ದು, ಎಲ್ಲರೂ ಸೇತುವೆಯ ಒಂದು ಬದಿಗೆ ತೆರಳಲು ಯತ್ನಿಸಿದ್ದಾರೆ, ಈ ಪ್ರಯತ್ನದಲ್ಲಿ ಉಳಿದವರು ಪಾರಾಗಿದ್ದು, ವಂಶ್​​ಗೆ ರೈಲು ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿದ ಎಸ್‌ಎಸ್‌ಪಿ ಶೈಲೇಶ್‌ ಕುಮಾರ್‌ ಪಾಂಡೆ, ನದಿ ದಡಗಳು ಮತ್ತು ರೈಲ್ವೆ ಹಳಿಗಳಂತಹ ಅಪಾಯಕಾರಿ ಸ್ಥಳಗಳ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​)
ಟ್ರ್ಯಾಕ್ಟರ್​​ನಡಿ ಸಿಲುಕಿ ಬಾಲಕ ಮೃತ: ರೊಚ್ಚಿಗೆದ್ದ ಗ್ರಾಮಸ್ಥರಿಂದ ಅಪ್ರಾಪ್ತ ವಯಸ್ಸಿನ ಚಾಲಕನ ಹತ್ಯೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
