ನವದೆಹಲಿ:ಬಿರಿಯಾನಿ ತಿನ್ನಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತ ವಯಸ್ಕನೋರ್ವ 17 ವರ್ಷದ ಅಪರಿಚಿತನನ್ನು 55ಕ್ಕೂ ಹೆಚ್ಚು ಬಾರಿ ಬರ್ಬರವಾಗಿ ಇರಿದು ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಕುರಿತು ಸಾರ್ವಜನಿಕರು ಆತಂಕ ಹೊರಹಾಕುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕ 17 ವರ್ಷದವನನ್ನು ಇರಿದು ಆ ನಂತರ ಆತನ ಮೃತದೇಹವನ್ನು ರಸ್ತೆಯ ತುಂಬಾ ಎಳೆದಾಡುತ್ತ ಕುಣಿದು ಸಂಭ್ರಮಿಸುತ್ತಿರುವುದನ್ನು ನೋಡಬಹುದಾಗಿದೆ. ಘಟನೆ ಮಂಗಳವಾರ ತಡರಾತ್ರಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
गले पर चाकू से 60 बार प्रहार…मर्डर के बाद किया डांसदिल्ली के वेलकम इलाके में 21 नवंबर की रात 17 वर्षीय यूसुफ की हत्या कर दी गई। हत्यारोपी भी नाबालिग है। इसने बिरयानी के लिए 350 रुपए मांगे। यूसुफ ने मना किया तो चाकू से गोदा।Courtesy :@SachinGuptaUP#Delhi#murder…pic.twitter.com/lDGt9iWtTe
ಇದನ್ನೂ ಓದಿ:ವ್ಹಾವ್​ ಚೆಂಡು ಹೂವಿನಿಂದ ತಯಾರಾಯ್ತು ತಣ್ಣನೆಯ ಐಸ್​ಕ್ರೀಂ; ಒಮ್ಮೆಯಾದರೂ ಟೇಸ್ಟ್​ ಮಾಡಬೇಕೆಂದ ನೆಟ್ಟಿಗರು
ಈ ಕುರಿತು ಪ್ರತಿಕ್ರಿಯಿಸಿರುವ ಈಶಾನ್ಯ ದೆಹಲಿಯ ಡಿಸಿಪಿ ಜಾಯ್ ಟಿರ್ಕಿ, ಬಿರಿಯಾನಿ ತಿನ್ನಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಅಪರಿಚತನ ಬಳಿ ತೆರಳಿ ತನಗೆ ತಿನ್ನಲು ಬಿರಿಯಾನಿ ಕೊಡಿಸುವಂತೆ ಕೇಳಿದ್ದಾನೆ. ಆತ ಒಪ್ಪದೇ ಇದ್ದಾಗ ಸಿಟ್ಟಿಗೆದ್ದ ಆರೋಪಿ ಆತನ ಜತೆ ವಾಗ್ವಾದ ನಡೆಸಿದ್ದು, ತನ್ನ ಬಳಿ ಇದ್ದ ಚಾಕುವಿನಿಂದ 55ಕ್ಕೂ ಹೆಚ್ಚು ಬಾರಿ ಇರಿದು ಬಳಿಕ ಆತನ ದೇಹವನ್ನು ರಸ್ತೆಯ ತುಂಬೆಲ್ಲಾ ಎಳೆದಾಡಿ ಕುಣಿದು ಕುಪ್ಪಳಿಸಲು ಶುರು ಮಾಡಿದ್ದಾನೆ.
ಶಬ್ದ ಕೇಳಿ ಸ್ಥಳೀಯರು ಆಗಮಿಸಿದನ್ನು ಗಮನಿಸಿದ ಆರೋಪಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಮಾರ್ಗ ಮಧ್ಯೆ ಮೃತಪಟ್ಟಿದ್ಧಾಗಿ ವೈದ್ಯರು ಘೋಷಿಸಿದ್ದಾರೆ. ಘಟನೆ ನಡೆದ ವೇಳೆ ಆರೋಪಿ ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಈಶಾನ್ಯ ದೆಹಲಿಯ ಡಿಸಿಪಿ ಜಾಯ್ ಟಿರ್ಕಿ ತಿಳಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + 16 =
Remember me
