ನ್ಯೂಯಾರ್ಕ್​:ಕಪ್ಪು ವರ್ಣೀಯ ಜಾರ್ಜ್‌ ಫ್ಲಾಯ್ಡ್‌ ಹತ್ಯೆಯ ನಂತರ ಅಮೆರಿಕದಲ್ಲಿ ಹೊತ್ತಿ ಉರಿಯುತ್ತಿರುವ ಕಿಚ್ಚು ಇನ್ನೂ ಶಮನವಾಗಿಲ್ಲ. ಈತನನ್ನು ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಕೋರಿ ಒಂದಿಷ್ಟು ಕಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಆದರೆ ಈ ನಡುವೆಯೇ 18 ವರ್ಷದ ಯುವಕನಿಗೆ ಮಾತ್ರ ಕಾರು, ಸ್ಕಾಲರ್​ಷಿಪ್​ನ ಭರ್ಜರಿ ಗಿಫ್ಟ್​ ಸಿಕ್ಕಿದೆ!
ಇಂಥದ್ದೊಂದು ಅಚ್ಚರಿ ನಡೆಯಲು ಕಾರಣ ಏನು ಗೊತ್ತೆ? ಈ ಯುವಕನ ನಿಸ್ವಾರ್ಥ ಸೇವೆ. ತನ್ನ ಸೇವೆಯ ಮೂಲಕವೇ ಇದೀಗ ಈತ ಅಮೆರಿಕದ ಮನೆಮನೆಯ ಮಾತಾಗಿರುವುದು ಮಾತ್ರವಲ್ಲದೇ, ರಾತ್ರೋರಾತ್ರಿ ಸ್ಟಾರ್​ ಕೂಡ ಆಗಿಬಿಟ್ಟಿದ್ದಾನೆ.
ಇದನ್ನೂ ಓದಿ:ಜನಾಂಗೀಯ ಕಿಚ್ಚಿಗೆ ಹೊತ್ತಿ ಉರಿಯುತ್ತಿರುವ ಅಮೆರಿಕ
18 ವರ್ಷದ ಈ ಯುವಕನ ಹೆಸರು ಆಂಟೋನಿಯೋ ಜ್ವಿನ್‌ ಜ್ಯೂನಿಯರ್‌. ಜಾರ್ಜ್‌ ಫ್ಲಾಯ್ಡ್‌ ಹತ್ಯೆಯ ನಂತರ ಮೊದಲ ದಿನ ಉಂಟಾಗಿದ್ದ ಉದ್ವಿಗ್ನ ವಾತಾವರಣದಲ್ಲಿ ಪ್ರತಿಭಟನಾಕಾರರು ಮಾಡಿರುವ ಅನಾಹುತಗಳು ಒಂದೆರಡಲ್ಲ. ಪ್ರತಿಭಟನೆಯ ನಂತರ ಎಲ್ಲೆಲ್ಲೂ ಕಸದ ರಾಶಿ. ಗಾಜಿನ ಚೂರುಗಳು ಇತ್ಯಾದಿಗಳಿಂದ ರಸ್ತೆ ತುಂಬಾ ಕೊಳಕಾಗಿ ಹೋಗಿತ್ತು. ನಡೆದುಕೊಂಡು ಹೋಗುವುದು ಕೂಡ ಕಷ್ಟ ಎನ್ನುವಂಥ ಪರಿಸ್ಥಿತಿ ಇತ್ತು. ಆದರೆ ಯಾರೂ ಇತ್ತ ಗಮನವನ್ನೇ ಹರಿಸಲಿಲ್ಲ.
ಆಗ ಈ ಕಸದ ರಾಶಿಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಎಚ್ಚೆದ್ದುಕೊಂಡ ಯುವಕನೇ ಆಂಟೋನಿಯೋ ಜ್ವಿನ್‌ ಜ್ಯೂನಿಯರ್‌. ನ್ಯೂಯಾರ್ಕ್‌ನಲ್ಲಿರುವ ಬಫೆಲೋ ನಗರದಲ್ಲಿ ಇರುವ ತನ್ನ ಮನೆಯಿಂದ ಪೊರಕೆ, ಒಂದಿಷ್ಟು ಕಸದ ಚೀಲಗಳನ್ನು ಹಿಡಿದು ಸತತ 10 ಗಂಟೆಗಳ ಕಾಲ ರಸ್ತೆಯನ್ನು ಸ್ವಚ್ಛಗೊಳಿಸಿದ್ದಾನೆ. ನಸುಕಿನ 2 ಗಂಟೆಗೆ ಸ್ವಚ್ಛತಾ ಕಾರ್ಯ ಆರಂಭಿಸಿದ ಈತ, ಸತತ 10 ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ನಡೆಸಿದ್ದಾನೆ.
ಇದನ್ನೂ ಓದಿ:ಯುಎಸ್​​ನಲ್ಲಿ ಜನಾಂಗೀಯ ದ್ವೇಷದ ವಿರುದ್ಧ ರೊಚ್ಚಿಗೆದ್ದ ಪ್ರತಿಭಟನಾಕಾರರಿಗೆ ಅಧ್ಯಕ್ಷ ಟ್ರಂಪ್​ ಪುತ್ರಿಯ ಬೆಂಬಲ
ಈತನ ಕಾರ್ಯ ಕ್ಷಣ ಮಾತ್ರದಲ್ಲಿ ಇಡೀ ನ್ಯೂಯಾರ್ಕ್​ ನಗರವನ್ನು ತಲುಪಿದೆ. ಯುವಕನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೇ, ಈತನ ಕಾರ್ಯಕ್ಕೆ ಮನಸೋತ ವ್ಯಕ್ತಿಯೊಬ್ಬರು ದುಬಾರಿ ಬೆಲೆಯ ರೆಡ್‌ ಮಸ್ಟಾಂಗ್‌ ಕಾರನ್ನು ಈತನಿಗೆ ಗಿಫ್ಟ್​ ಕೊಟ್ಟಿದ್ದಾರೆ. ಅದರ ಜತೆಗೆ ಅನೇಕ ಮಂದಿ ಉಡುಗೊರೆಗಳನ್ನು ನೀಡುತ್ತಿದ್ದಾರೆ.
ಅಷ್ಟೇ ಅಲ್ಲದೇ, ಬಫೆಲೋ ನಗರದ ಕಾಲೇಜೊಂದು ಒಂದು ಸ್ಕಾಲರ್‌ಷಿಪ್‌ ನೀಡಲು ಮುಂದಾಗಿದೆ. ಇನ್ನು, ಸ್ಥಳೀಯ ಉದ್ಯಮಿಯೊಬ್ಬರು ಆಟೋ ಇನ್ಸೂರೆನ್ಸ್‌ನ್ನು ಒಂದು ವರ್ಷ ವಿಸ್ತರಿಸಿದ್ದಾರೆ!(ಏಜೆನ್ಸೀಸ್​)

ಕರೊನಾದ ಬಗ್ಗೆ ಬಾಯಿ ಬಿಟ್ಟ ಚೀನಾ ಶ್ವೇತ ಪತ್ರ ಬಿಡುಗಡೆ ಮಾಡಿ ಹೇಳಿದ್ದೇನು?
.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 18 =
Remember me
