ಕೋಲ್ಕತ:ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ವಿಚಿತ್ರ ರೀತಿಯಲ್ಲಿ ಸತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹದಿಹರೆಯದ ಈ ಈ ಹುಡುಗ ಮಹಿಳೆಯ ಒಳ ಉಡುಪು, ಸೀರೆ, ಬಿಂದಿ, ಬಳೆ ಧರಿಸಿದ್ದು, ಮನೆಯೊಳಗೆ ಶವವಾಗಿ ನೇತಾಡುವ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಪಶ್ಚಿಮ ಬಂಗಾಳದಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ವರದಿಯಾಗಿದೆ.
ಪಶ್ಚಿಮ ಬಂಗಾಳದ ಸಿಲಿಗುರಿಯ ಶಾಂತಿನಗರ ಎಂಬ ಪ್ರದೇಶದಲ್ಲಿನ ಮನೆಯೊಂದರಲ್ಲಿ ಸೋಮವಾರ ರಾತ್ರಿ ಬಾಲಕನೊಬ್ಬ ಕಿರುಚಿಕೊಂಡ ಸದ್ದು ಕೇಳಿ ನೆರೆಮನೆಯವರು ಧಾವಿಸಿ ಹೋಗಿ ನೋಡಿದ್ದರು. ಆಗ ಹುಡುಗನೊಬ್ಬ ನೇಣು ಹಾಕಿಕೊಂಡು ಸಾವಿಗೀಡಾಗಿದ್ದುದು ಕಂಡುಬಂದಿತ್ತು. ವಿಚಿತ್ರವೆಂದರೆ ಆತ ಸೀರೆ, ಬಿಂದಿ, ಬಳೆ ಧರಿಸಿದ್ದಲ್ಲದೆ, ಮಹಿಳೆಯ ಒಳ ಉಡುಪನ್ನೂ ಹಾಕಿಕೊಂಡಿರುವುದು ಗಮನಕ್ಕೆ ಬಂದಿತ್ತು. ಈತ ಸಿಲಿಗುರಿಯ ಬರದಕಂಠ ವಿದ್ಯಾಪೀಠದಲ್ಲಿ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದವ ಎಂಬುದು ತಿಳಿದು ಬಂದಿದೆ.
ಸಾವಿಗೀಡಾದ ವಿದ್ಯಾರ್ಥಿಯನ್ನು ಈ ಹಿಂದೆ ನೋಡಿದ್ದರೂ ಆತ ಹುಡುಗಿಯ ಥರ ವರ್ತಿಸಿದ್ದನ್ನು ಎಂದೂ ಕಂಡಿರಲಿಲ್ಲ. ಸಭ್ಯನಂತೆಯೇ ಇದ್ದಿದ್ದ ಈ ಹುಡುಗ ಯಾವತ್ತೂ ಮದ್ಯಪಾನ ಅಥವಾ ಇನ್ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿದ್ದನ್ನೂ ನೋಡಿರಲಿಲ್ಲ ಎಂದು ಪಕ್ಕದ ಮನೆಯ ಬಿಸ್ವಜೀತ್ ದಾಸ್ ಎಂಬಾತ ಹೇಳಿಕೊಂಡಿದ್ದಾನೆ.
ಸ್ಥಳೀಯರು ಸಾವಿನ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಹುಡುಗ ಮನೆಯಲ್ಲಿ ಒಂಟಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಯುವಕನ ಅಣ್ಣ ಕೆಲವು ವರ್ಷಗಳ ಹಿಂದೆ ಹೀಗೆ ಹಠಾತ್ ಆಗಿ ಸಾವಿಗೀಡಾಗಿದ್ದ ಎಂದೂ ಸ್ಥಳೀಯರು ಹಾಗೂ ಕುಟುಂಬಸ್ಥರು ನೆನಪಿಸಿಕೊಂಡಿದ್ದಾರೆ. –ಏಜೆನ್ಸೀಸ್
ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + one =
Remember me
