ಉತ್ತರಪ್ರದೇಶ: ಶಿಕ್ಷಕರಿಂದ ಜಾತಿ ಆಧಾರಿತ ತಾರತಮ್ಯ ಮತ್ತು ಮಾನಸಿಕ ಹಿಂಸೆಗೆ ಒಳಗಾಗಿ 14 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
14 ವರ್ಷದ ಸಾನಿಯಾ ಮೃತ ಬಾಲಕಿ. ಈಕೆ ಅಜಿಮುದ್ದೀನ್ ಅಶ್ರಫ್ ಇಸ್ಲಾಮಿಯಾ ಇಂಟರ್ ಕಾಲೇಜಿನಲ್ಲಿ ಓದುತ್ತಿದ್ದಳು. ಬಾಲಕಿ ತನ್ನ ಇಬ್ಬರು ಶಿಕ್ಷಕರಿಂದ ಮಾನಸಿಕ ಹಿಂಸೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾನಿಯಾಳ ತಂದೆ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದು, ಬಡತನದಿಂದಲೇ ಆಕೆಯ ತಾಯಿ ಶಾಲೆಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ.
ಸಾನಿಯಾ 1,100 ರೂಪಾಯಿಗಳನ್ನು ಶಾಲಾ ಫೀಸ್ ಆಗಿ ಪಾವತಿಸಿದ್ದಳು. ಆದರೆ ಆಕೆಗೆ ಅದಕ್ಕಿಂತ ಸಣ್ಣ ಮೊತ್ತದ ರಸೀದಿಯನ್ನು ನೀಡಲಾಗಿತ್ತು. ಈ ಬಗ್ಗೆ ಬಾಲಕಿ ಆಕೆಯ ಶಿಕ್ಷಕಿ ವಾಸ್ಪಿ ಖತೂನ್ ಬಳಿ ಪ್ರಶ್ನಿಸಿದಾಗ, ಬಾಲಕಿಯ ಜಾತಿ ಹಾಗೂ ಬಡತನವನ್ನು ಹಂಗಿಸಿದ ಶಿಕ್ಷಕಿ, “ಬಡ ಹಾಗೂ ಕೆಳ ಜಾತಿಯವಳಾದ ನೀನು ಮೇಲ್ಜಾತಿಯವರಿಗೆ ಸಮಾನಳಂತೆ ವರ್ತಿಸುತ್ತಿದ್ದೀಯಾ” ಎಂದು ಹೇಳಿದ್ದಾರೆ. ಮತ್ತೋರ್ವ ಶಿಕ್ಷಕ ಕೂಡಾ ಆಗಾಗ ಇತರ ವಿದ್ಯಾರ್ಥಿಗಳೆದುರು ಬಾಲಕಿಯ ಜಾತಿಯನ್ನು ಹಂಗಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಆಗಸ್ಟ್ 4 ರಂದು ನೇಣಿಗೆ ಶರಣಾಗಿದ್ದಳು. ಶಿಕ್ಷಕರು ಹಂಗಿಸುತ್ತಿದ್ದುದರಿಂದ ತಾನು ಆತ್ಮಹತ್ಯೆ ಮಾಡಿರುವುದಾಗಿ ಬಾಲಕಿ ಸೂಸೈಡ್ ನೋಟ್ ಬರೆದಿಟ್ಟಿದ್ದಾಳೆ.
ಆತ್ಮಹತ್ಯೆ ಪತ್ರದಲ್ಲಿ, ತನ್ನ ಜಾತಿ ಮತ್ತು ನನ್ನ ಆರ್ಥಿಕ ಪರಿಸ್ಥಿತಿಗಾಗಿ ಕಾಲೇಜಿನಲ್ಲಿ ಪುರುಷ ಮತ್ತು ಮಹಿಳಾ ಶಿಕ್ಷಕರಿಂದ ನಿರಂತರ ಸಾರ್ವಜನಿಕ ಅವಮಾನವನ್ನು ಎದುರಿಸಿದ ನಂತರ ನಾನು ಈ ನಿರ್ಧಾರ ಕೈಗೊಂಡಿದ್ದೇನೆಂದು ಹುಡುಗಿ ಉಲ್ಲೇಖಿಸಿದ್ದಾಳೆ. ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಶಿಕ್ಷಕರ ವಿರುದ್ಧ ಬಾಲಕಿಯ ತಾಯಿ ದೂರು ನೀಡಿದ್ದು, ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
VIDEO | 295 ಅಡಿ ಎತ್ತರದಲ್ಲಿ ನೇತಾಡುವ ಟೇಬಲ್ ಮೇಲೆ ಕುಳಿತು ಡಿನ್ನರ್ ಮಾಡಿದ ಜೋಡಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + eight =
Remember me
