ಇಂದೋರ್​:ಇತ್ತೀಚೆಗಷ್ಟೇ ಪ್ರಕಟವಾಗಿದ್ದ 12ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶೇ.74 ಅಂಕಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದ ಯುವತಿ ರೌಡಿ ರೋಮಿಯೋಗಳ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಲವು ತಿಂಗಳಿಂದ ಈಕೆಯ ಬೆನ್ನು ಬಿದ್ದಿದ್ದ ಇಬ್ಬರು ರೌಡಿ ರೋಮಿಗಳು ತಮ್ಮಿಬ್ಬರಲ್ಲಿ ಯಾರಾದರೂ ಒಬ್ಬರನ್ನು ಮದುವೆಯಾಗಬೇಕು ಎಂದು ಯುವತಿಯನ್ನು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಈತ ನೇಣಿನ ಕುಣಿಕೆಗೆ ಕತ್ತು ಕೊಟ್ಟಿದ್ದನ್ನು ಕಂಡು ಕಂಗಾಲಾಗಾಗಿದ್ದ ಈಕೆಯ ಪಾಲಕರು ಬಹುಶಃ 12ನೇ ತರಗತಿ ಫಲಿತಾಂಶದ ಬಗ್ಗೆ ಅಸಮಾಧಾನಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೇ ಭಾವಿಸಿದ್ದರು. ಆದರೆ, ಮೃತಳ ಸಹೋದರ ಮನೆಗೆ ಮರಳಿದ ಬಳಿಕವಷ್ಟೇ ನಿಜವಾದ ಕಾರಣ ಗೊತ್ತಾಗಿದೆ.
ಇದನ್ನೂ ಓದಿ:ಭಾನುವಾರ ಲಾಕ್​ಡೌನ್ ಇರಲ್ಲ
ಇಂದೋರ್​ನಲ್ಲಿ ಯುವತಿ ಮತ್ತು ಆಕೆಯ ಕುಟುಂಬದವರು ವಾಸವಿದ್ದ ಬಡಾವಣೆಯಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದು, ರೌಡಿಶೀಟರ್​ಗಳಾಗಿದ್ದ ಸನ್ನಿ ಮತ್ತು ಭೈಯ್ಯು ಎಂಬ ಇಬ್ಬರು ಯುವಕರು ಯುವತಿಯ ಬೆನ್ನು ಬಿದ್ದಿದ್ದರು. ತಮ್ಮಲ್ಲಿ ಯಾರಾದರೂ ಒಬ್ಬರನ್ನು ಪ್ರೇಮಿಸಿ, ಮದುವೆಯಾಗುವಂತೆ ಯುವತಿಯನ್ನು ಒತ್ತಾಯಿಸುತ್ತಿದ್ದರು. ಆಕೆ ಹೋದಲ್ಲಿ ಬಂದಲ್ಲಿ ಹಿಂಬಾಲಿಸುತ್ತಿದ್ದರು. ಇದರಿಂದ ಬೇಸತ್ತಿದ್ದ ಆಕೆ ಇವರಿಬ್ಬರ ಕಿರುಕುಳದ ಬಗ್ಗೆ ತನ್ನ ಸಹೋದರನಲ್ಲಿ ಹೇಳಿಕೊಂಡು, ಇವರಿಬ್ಬರ ಕಾಟ ತಪ್ಪಿಸುವಂತೆ ಕೇಳಿಕೊಂಡಿದ್ದಳು. ಆತ ಇದಕ್ಕೆ ಪರಿಹಾರ ಕಂಡು ಹಿಡಿಯುವಷ್ಟರಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಕೆಲವೇ ಗಂಟೆಗಳ ಮೊದಲು ಸ್ನೇಹಿತರನ್ನು ಭೇಟಿಯಾಗಲು ತೆರಳಿದ್ದಳು. ಆ ಸಂದರ್ಭದಲ್ಲೂ ಆಕೆಯನ್ನು ಬೆನ್ನಟ್ಟಿ ಬಂದಿದ್ದ ಸನ್ನಿ ಮತ್ತು ಭೈಯ್ಯು ಮದುವೆಯಾಗುವಂತೆ ಯುವತಿಯನ್ನು ಸಾರ್ವಜನಿಕವಾಗಿ ಒತ್ತಾಯಿಸಿದ್ದರು. ಇದಕ್ಕೆ ಆಕೆ ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಅವರಿಬ್ಬರೂ ನಮ್ಮಲ್ಲಿ ಯಾರಾದರೂ ಒಬ್ಬರನ್ನು ಮದುವೆಯಾಗದಿದ್ದರೆ, ನಿನ್ನ ಕುಟುಂಬದ ಸದಸ್ಯರಲ್ಲಿ ಯಾರೊಬ್ಬರನ್ನೂ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಯುವತಿ ಆತ್ಮಹತ್ಯೆ ಮಾಡಿಕೊಂಡ ನಂತರ ಯುವತಿಯ ಸ್ನೇಹಿತೆಯರು ಮೃತಳ ಕುಟುಂಬದವರಿಗೆ ಈ ವಿಷಯ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ದೂರು ದಾಖಲಿಸಿಕೊಂಡಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.
ಲವರ್​ ತಲೆ ಕತ್ತರಿಸಿದ ಮಹಿಳೆ: ಪ್ರೇಮ ವೈಫಲ್ಯವಲ್ಲ, ಕಾರಣ ಕೇಳಿದ್ರೆ ಶಾಕ್​ ಆಗೋದು ಖಂಡಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 15 =
Remember me
