ಬೆಂಗಳೂರು:ಬೆಂಗಳೂರು ದಕ್ಷಿಣ ಸಂಸದ ಹಾಗೂ ಸ್ವತಃ ವಕೀಲರು ಕೂಡ ಆಗಿರುವ ತೇಜಸ್ವಿ ಸೂರ್ಯ ಶುಕ್ರವಾರ ರಾಜ್ಯ ಹೈಕೋರ್ಟ್‌ನಲ್ಲಿ ಶ್ರೀಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್‌ನ ಸುಮಾರು 45,000 ಠೇವಣಿದಾರರ ಪರವಾಗಿ ವಾದ ಮಂಡಿಸಿ ಗಮನ ಸೆಳೆದರು.
ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಯಾಗಿರುವ ಅರ್ಜಿದಾರ ಡಾ.ಎನ್.ಆರ್. ರವಿ ಪರವಾಗಿ ತೇಜಸ್ವಿ ಸೂರ್ಯ ಹಾಜರಾಗಿ ವಾದ ಮಂಡಿಸಿದ್ದು, ಸಂಸದರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಕೋರ್ಟ್ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಚಿರು ಸಾವಿನ ಬೆನ್ನಲ್ಲೇ ಅರ್ಜುನ್​ ಸರ್ಜಾ ಕಟ್ಟಿಸಿದ ಆಂಜನೇಯ ದೇವಸ್ಥಾನದ ಸ್ಥಿತಿ ಹೀಗಾಗಬಾರದಿತ್ತು?
ಡಾ. ರವಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಈ ಬ್ಯಾಂಕ್‌ಗೆ ಆಡಳಿತಾಧಿಕಾರಿ ನೇಮಕ ಮಾಡಿ ಹೊರಡಿಸಿರುವ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿಯವರು ಆಡಳಿತಾಧಿಕಾರಿ ನೇಮಕವನ್ನು ವಜಾಗೊಳಿಸಲು ಕೋರಿದ್ದಾರೆ.
ಬ್ಯಾಂಕ್‌ನ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಸುಮಾರು 2 ಲಕ್ಷ ನಾಗರಿಕರಿಗೆ ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಹಾನಿಯುಂಟಾಗಿದ್ದು, ಆ ಎಲ್ಲ ಕುಟುಂಬಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರೆಲ್ಲರ ಪರವಾಗಿ ಇಂದು ವಾದ ಮಂಡಿಸಿದ್ದೇನೆ ಎಂದು ಕಲಾಪದ ನಂತರ ತೇಜಸ್ವಿ ಸೂರ್ಯ ತಿಳಿಸಿದರು.
ಈಗ ರಿಸರ್ವ್ ಬ್ಯಾಂಕಿನ ನಿಗಾದಲ್ಲಿ ರಾಘವೇಂದ್ರ ಬ್ಯಾಂಕು ಇದೆ. ರಾಘವೇಂದ್ರ ಬ್ಯಾಂಕಿನ ನಿರ್ದೇಶಕರು ಠೇವಣಿದಾರರ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಠೇವಣಿದಾರರು ಜೀವನಪೂರ್ತಿ ದುಡಿದು ಗಳಿಸಿದ ಹಣವನ್ನು ಈ ಬ್ಯಾಂಕಿನಲ್ಲಿ ಇರಿಸಿದ್ದರು.
ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಾಸುದೇವ ಮಯ್ಯ ಮತ್ತು ಅಧ್ಯಕ್ಷರಾದ ರಾಮಕೃಷ್ಣ ಅವರೂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ ಆಡಳಿತಾಧಿಕಾರಿ ನೇಮಕ ಪ್ರಸ್ತಾವನೆಯನ್ನು ವಜಾಗೊಳಿಸುವಂತೆ ಕೋರಿದ್ದಾರೆ. ವಾದವನ್ನು ಆಲಿಸಿದ ನ್ಯಾಯಾಧೀಶರು ಈ ಪ್ರಕರಣದ ಕಲಾಪವನ್ನು ಮುಂದಿನ ಶುಕ್ರವಾರಕ್ಕೆ ಮುಂದೂಡಿದರು.
ಕೋರ್ಟ್ ಕಲಾಪದ ಬಳಿಕ ತೇಜಸ್ವಿ ಸೂರ್ಯ ಅವರು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅವರೊಂದಿಗೆ ಸಭೆ ನಡೆಸಿದರು. ಈ ಬ್ಯಾಂಕಿನ ಠೇವಣಿದಾರರ ಹಿತ ರಕ್ಷಿಸುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
ಕೆಲವು ತಿಂಗಳ ಹಿಂದೆ ಬ್ಯಾಂಕಿನ ಅವ್ಯವಹಾರ ಬೆಳಕಿಗೆ ಬಂದ ತಕ್ಷಣದಿಂದಲೇ ಠೇವಣಿದಾರರ ಹಿತ ರಕ್ಷಿಸಲು ಮುಂದಾಗಿರುವ ತೇಜಸ್ವಿಸೂರ್ಯ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿಗೆ ಠೇವಣಿದಾರರ ನಿಯೋಗವನ್ನೂ ಕೊಂಡೊಯ್ದಿದ್ದರು.
ಬ್ಯಾಂಕನ್ನು ನೂತನ ನಿರ್ದೇಶಕ ಮಂಡಳಿಯೊಂದಿಗೆ ಒಂದು ವರ್ಷದಲ್ಲಿ ಪುನರುಜ್ಜೀವನಗೊಳಿಸಲು ನಿರ್ಧರಿಸಲಾಗಿದ್ದು, ಈ ದಿಸೆಯಲ್ಲಿ ತೇಜಸ್ವಿಸೂರ್ಯ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ ಎಂದು ಸಂಸದರ ಕಚೇರಿಯ ಪ್ರಕಟಣೆ ತಿಳಿಸಿದೆ.
ಮಗ, ಸೊಸೆಯೊಂದಿಗೆ ಕೊಡಗಿನ ರೆಸಾರ್ಟ್‌ನಲ್ಲಿ ಎಚ್‌ಡಿಕೆ ವಾಸ್ತವ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 1 =
Remember me
