ಖಮ್ಮಂ:ಜಿಮ್‌ನಲ್ಲಿ ವರ್ಕೌಟ್ ಮಾಡಿದ ಬಳಿಕ ಎದೆಯಲ್ಲಿ ನೋವು ಕಾಣಿಸಿಕೊಂಡು ಹಠಾತ್ ಹೃದಯಾಘಾತದಿಂದ ಯುವಕ ಮೃತಪಟ್ಟಿರುವ ಘಟನೆ ತೆಲಂಗಾಣದ ಖಮ್ಮಂ ಬಳಿ ನಡೆದಿದೆ.ಇದನ್ನೂ ಓದಿ:ಒತ್ತೆಯಾಳಾಗಿಟ್ಟು ಬಲವಂತವಾಗಿ ಮೂತ್ರ ಕುಡಿಸಿದ್ದಾರೆಂದು ಆರೋಪಿಸಿ ಸಿಕ್ಕಿ ಬಿದ್ದ!
ಶ್ರೀಧರ(31) ಎಂಬಾತನೇ ಮೃತ ಯುವಕನಾಗಿದ್ದು, ಖಮ್ಮಂ ಕೃಷಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾಜಿ ಕಾಂಗ್ರೆಸ್ ಮುಖಂಡ ರಾಧಾ ಕಿಶೋರ್​​ರ ಪುತ್ರನಾಗಿದ್ದಾನೆ. ಶ್ರೀಧರ್ ಬೆಳಿಗ್ಗೆ ಜಿಮ್‌ನಿಂದ ಮನೆಗೆ ಹಿಂದಿರುಗಿದ ಕೂಡಲೇ ಅಸ್ವಸ್ಥಗೊಂಡಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಶ್ರೀಧರ್‌ ಭಾನುವಾರ ಮನೆಯಲ್ಲಿ ತಮ್ಮ ಸಹೋದರನ ಮಗಳ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು. ಆತ ಹಿಂದಿನ ದಿನದ ಯಾವುದೇ ರೀತಿಯಾಗಿ ಅಸ್ವಸ್ಥಗೊಂಡಿರುವ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಹೀಗಾಗಿ ಆತ ಸೋಮವಾರ ಎಂದಿನಂತೆ ಜಿಮ್‌ಗೆ ಹೋಗಿದ್ದ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.ಇದನ್ನೂ ಓದಿ:ಜೈಲಿನಿಂದ ಜೈಲಿನಿಂದ ಹೊರ ಬಂದ ನಂತರ ಹೆಂಡತಿಯ ಕತ್ತು ಸೀಳಿದ ಗಂಡ…ತೆಲಂಗಾಣ ಮತ್ತು ಆಂಧ್ರದ ಇತ್ತೀಚಿಗೆ ಹಠಾತ್ ಹೃದಯಾಘಾತಕ್ಕೆ ಬಲಿಯಾದ ಘಟನೆಗಳ ಸರಣಿಗೆ ಸಾಕ್ಷಿಯಾಗಿದೆ. ಕಳೆದ ತಿಂಗಳು, ಜಗ್ತಿಯಾಲ್ ಪಟ್ಟಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಹೃದಯ ಸ್ತಂಭನದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.ಮಾರ್ಚ್‌ನಲ್ಲಿ ಆಂಧ್ರಪ್ರದೇಶದ ಬಪಟ್ಲಾದಲ್ಲಿ ಶಾಲಾ ಶಿಕ್ಷಕರೊಬ್ಬರು ತರಗತಿಯಲ್ಲಿ ಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟಿದ್ದರು. ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
