ವಿಕರಬಾದ್:ಶನಿವಾರ ಬೆಳಗ್ಗೆ ತೆಲಂಗಾಣದ ವಿಕರಬಾದ್​ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೊಮಿನ್​ಪೇಟಾ ವಲಯದ ಇಜರಾಚಿಟ್ಟಂಪಲ್ಲಿ ಏರಿಯಾ ಬಳಿ ದುರಂತ ನಡೆದಿದ್ದು, ಆರ್​ಟಿಸಿ ಬಸ್​-ಲಾರಿ-ಆಟೋ ನಡುವೆ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಅನೇಕ ಮಂದಿಗೆ ಗಂಭೀರ ಗಾಯಳಾಗಿವೆ. ರಸ್ತೆ ಪಕ್ಕದಲ್ಲಿ ಆರ್​ಟಿಸಿ ಬಸ್​ ಪಾರ್ಕ್​ ಮಾಡಲಾಗಿತ್ತು. ಅದೇ ಸಮಯದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಆಟೋ ಸೈಡಿಗೆ ಹಾಕಲು ಹೋಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಹಾರಿ ಬಿದ್ದಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಲಾರಿಯು ಸಹ ಉರುಳಿಬಿದ್ದಿರುವುದರಿಂದ ಚಾಲಕನಿಗೆ ಗಂಭೀರ ಗಾಯವಾಗಿದೆ.
ಇದನ್ನೂ ಓದಿ:ಇಂಥಾ ಕಳ್ಳನನ್ನು ನೀವು ನೋಡಿರುವುದಕ್ಕೆ ಸಾಧ್ಯನೇ ಇಲ್ಲ: ಈತನ ಕತೆ ಕೇಳಿದ್ರೆ ನಿಮ್ಮ ಹುಬ್ಬೇರುವುದು ಗ್ಯಾರೆಂಟಿ!
ಬೆಳಗಿನ ಜಾವ ಮಸುಕಾಗಿದ್ದರಿಂದ ರಸ್ತೆ ಕಾಣದೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತರ ದೇಹಗಳನ್ನು ಹೊರ ತೆಗೆಯಲಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಇನ್ನು ಹೆಚ್ಚಿನ ಮಾಹಿತಿ ತನಿಖಾ ನಂತರವಷ್ಟೇ ತಿಳಿಯಲಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿ:ಶೂಟಿಂಗ್​ ಬಿಡುವಿನ ವೇಳೆ ಸ್ನಾನಕ್ಕೆಂದು ಹೋದ ಮಲಯಾಳಂ ಖ್ಯಾತ ನಟ ದುರಂತ ಸಾವು!
ಮಹಿಳಾ ಸಚಿವೆಯ ಆನ್​ಲೈನ್​ ಭಾಷಣದ ವೇಳೆ ನೋಡಬಾರದ್ದನ್ನು ನೋಡಿ ಸಿಕ್ಕಿಬಿದ್ದ ಸಂಸದ!

ಸಿಎಂ ಕೆಸಿಆರ್​ ದತ್ತು ಪುತ್ರಿಯ ವಿವಾಹಕ್ಕೆ ಭರದ ಸಿದ್ಧತೆ: ಕ್ರಿಶ್ಚಿಯನ್​ ಸಂಪ್ರದಾಯದಂತೆ ಮದುವೆ!

ಲವ್‌ ಜಿಹಾದಿಗಳಿಗೆ ಪಾಠ ಕಲಿಸಲು ರೆಡಿಯಾಯ್ತು ಇನ್ನೊಂದು ರಾಜ್ಯ: ಧರ್ಮ ಮುಚ್ಚಿಟ್ಟರೆ ಇನ್ನೂ ಕಠಿಣ ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + two =
Remember me
