ಹೈದರಾಬಾದ್​:ಕಲ್ಲಂಗಡಿ ಹಣ್ಣು ತಿಂದ ಬಾಲಕರಿಬ್ಬರು ಸಾವಿಗೀಡಾಗಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಡೆದಿದ್ದು, ಮೂವರು ಸಾವು-ಬದಕಿನ ನಡುವೆ ಹೋರಾಡುತ್ತಿದ್ದಾರೆ.
ಕಲ್ಲಂಗಡಿ ಹಣ್ಣು ತಿಂದರೆ ಸಾಯ್ತಾರಾ? ಕಲ್ಲಂಗಡಿ ಆರೋಗ್ಯಕ್ಕೆ ಒಳ್ಳಯದು ಎಂದು ವೈದ್ಯರೇ ಹೇಳ್ತರಲ್ಲ ಎಂಬ ಪ್ರಶ್ನೆ ಎಲ್ಲರಲ್ಲು ಮೂಡುವುದು ಸಹಜ. ಆದರೆ, ಕಲ್ಲಂಗಡಿ ತಿಂದ ಮಕ್ಕಳು ಮೃತಪಟ್ಟಿದ್ದು ಹೇಗೆ ಎಂದು ತಿಳಿದರೆ ನಿಜಕ್ಕೂ ಶಾಕ್​ ಆಗ್ತೀರಾ!
ಅಸಲಿಗೆ ಏನು ನಡೆಯಿತು ಅಂದರೆ, ಮಾರ್ಚ್​ 29ರ ಸೋಮವಾರ ಪೆದ್ದಪಲ್ಲಿಯ ಇಸ್ಸಾಂಪೇಟಾ ಗ್ರಾಮದ ಕುಟುಂಬ ಮನೆಗೆ ಕಲ್ಲಂಗಡಿ ಹಣ್ಣನ್ನು ಕೊಂಡು ತಂದಿದ್ದಾರೆ. ಮೊದಲು ಅರ್ಧವನ್ನು ತಿಂದು, ಉಳಿದ ಅರ್ಧವನ್ನು ಕಪ್​ಬೋರ್ಡ್​ನಲ್ಲಿ ಇಟ್ಟಿದ್ದರು. ಮತ್ತೆ ರಾತ್ರಿ ಉಳಿದ ಹಣ್ಣನ್ನು ತಿಂದಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ನಡು ರಾತ್ರಿಯಲ್ಲಿ ಇಡೀ ಕುಟುಂಬ ನೋವಿನಿಂದ ನರಳಾಡಿದೆ.
ಇದನ್ನೂ ಓದಿರಿ:ಪಬ್​ ಜೀ ಆಡಲು ಮೈದಾನಕ್ಕೆ ಹೋದ 12 ವರ್ಷದ ಬಾಲಕ ಭೀಕರ ಹತ್ಯೆ!
ತಕ್ಷಣ ಅವರನ್ನು ಕರೀಮ್​ನಗರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಚಿಕಿತ್ಸೆ ನಡುವೆಯೇ ಫಲಕಾರಿಯಾಗದೇ ಬಾಲಕರಾದ ದರವೇಣಿ ಸಿವಾನಂದು (12) ಮತ್ತು ಚರಣ್​ (10) ಏಪ್ರಿಲ್​ 2ರಂದು ಮೃತಪಟ್ಟಿದ್ದಾರೆ. ಕುಟುಂಬ ಉಳಿದ ಸದಸ್ಯರಾದ ಶ್ರೀಶೈಲಂ, ಗುಣವತಿ ಮತ್ತು ಅಜ್ಜಿ ಸರಮ್ಮಲ್​ ಅವರಿಗೆ ಚಿಕಿತ್ಸೆ ಮುಂದುವರಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ನಿಗೂಢ ಸಾವಿನ ಪ್ರಕರಣದ ತನಿಖೆ ಬೆನ್ನತ್ತಿದ ಪೊಲೀಸರಿಗೆ ಸತ್ಯಾಂಶ ತಿಳಿದು ಶಾಕ್​ ಆಗಿದೆ. ಏಕೆಂದರೆ, ಮಕ್ಕಳು ಸಾವು ಮತ್ತು ಕುಟುಂಬದ ನೋವಿಗೆ ಮೂಲ ಕಾರಣವೇ ಇಲಿ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಅಷ್ಟಕ್ಕೂ ನಡೆದಿದ್ದೇನೆಂದರೆ, ಮನೆಯಲ್ಲಿ ಇಲಿ ಕಾಟ ಹೆಚ್ಚಾಗಿದ್ದರಿಂದ ಅವುಗಳನ್ನು ಕೊಲ್ಲಲು ಇಲಿ ಪಾಶಾಣವನ್ನು ಮನೆಗೆ ತಂದಿದ್ದರು. ಇಲಿ ಪಾಶಾಣವನ್ನು ಸಿಂಪಡಿಸಿ ಉಳಿದದ್ದನ್ನು ಒಂದು ಕಪ್​ಬೋರ್ಡ್​ನಲ್ಲಿ ಇಟ್ಟಿದ್ದರು. ಇಲಿ ಮನೆಯಲ್ಲೆ ಓಡಾಗಿ ಪಾಶಾಣ ಸೇವಿಸಿ, ಅದೇ ಬಾಯಿಯಲ್ಲಿ ಮನೆಯಲ್ಲಿದ್ದ ಕಲ್ಲಂಗಡಿ ಹಣ್ಣನ್ನು ಸಹ ತಿಂದಿದೆ. ಇದು ತಿಳಿಯದೇ ಹಣ್ಣನ್ನು ತಿಂದು ಇಡೀ ಕುಟುಂಬ ಅನಾರೋಗ್ಯಕ್ಕೀಡಾಯಿತು ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿರಿ:ಪ್ರಿಯಕರನ ಮರ್ಮಾಂಗ ಕತ್ತರಿಸಿ ಟಾಯ್ಲೆಟ್​ ಕಮೋಡ್​ನಲ್ಲಿ ಬೀಸಾಡಿ ಪೊಲೀಸರಿಗೆ ಶರಣಾದ ಪ್ರೇಯಸಿ!
ಜಿರಳೆ, ಹಲ್ಲಿ ಮತ್ತು ಇಲಿ ಸೇರಿದಂತೆ ಯಾವುದೇ ಜೀವಿಗಳನ್ನು ಸಾಯಿಸಲು ಅಥವಾ ಅವುಗಳನ್ನು ಓಡಿಸಲು ಮನೆಗೆ ತರುವ ಔಷಧಿಗಳ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಸ್ವಲ್ಪ ಮೈಮರೆತರು ಮುಂದೇನಾಗಬಹುದು ಎಂಬುದಕ್ಕೆ ಪೆದ್ದಪಲ್ಲಿಯಲ್ಲಿ ನಡೆದ ಈ ಘಟನೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.(ಏಜೆನ್ಸೀಸ್​)
ನಕ್ಸಲ್​ರ ವಿರುದ್ಧದ ಕಾರ್ಯಾಚರಣೆ ನಡೆದಾಗಿನಿಂದ ಈವರೆಗೂ ಪತ್ತೆಯಾಗದ 21 ಯೋಧರು..!

ಕನ್ನಡಕ್ಕಾಗಿ ಕೊರಳೆತ್ತಿ!; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೊದಲ ಹೆಜ್ಜೆ

ಪ್ರಿಯಕರನ ಮರ್ಮಾಂಗ ಕತ್ತರಿಸಿ ಟಾಯ್ಲೆಟ್​ ಕಮೋಡ್​ನಲ್ಲಿ ಬೀಸಾಡಿ ಪೊಲೀಸರಿಗೆ ಶರಣಾದ ಪ್ರೇಯಸಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
