ತೆಲಂಗಾಣ:ರಾಜಕೀಯ ನಾಯಕರು ಮತದಾರರ ಗಮನ ಸೆಳೆಯಲು ಗಿಮಿಕ್​ಗಳನ್ನು ಮಾಡುತ್ತೀರುತ್ತಾರೆ.ದೇವಸ್ಥಾನಗಳಿಗೆ ಹೋಗಿ ಗೆಲ್ಲುವಂತೆ ಪ್ರಾರ್ಥಿಸುತ್ತಾರೆ.ವಿಶೇಷ ಪೂಜೆ ನೆರವೇರಿಸುತ್ತಾರೆ. ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಾರೆ. ಇದೀಗ ತೆಲಂಗಾಣದಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ.
ತೆಲಂಗಾಣದಲ್ಲಿ ಬಿಆರ್ ಎಸ್ ಸೋಲಿಸಲೇಬೇಕು ಎಂಬ ಗುರಿಯೊಂದಿಗೆ ಕಣಕ್ಕೆ ಇಳಿದಿರುವ ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಶುಭ ಸೂಚನೆಯಂತೆ ಮತ ಚಲಾಯಿಸಲು ತೆರಳುವ ಮುನ್ನ ಗೋಪೂಜೆ ನೆರವೇರಿಸಿ ಮತಯಾಚನೆ ಮಾಡಿದರು.ಕೊಡಂಗಲ್ ನಲ್ಲಿ ಪತ್ನಿಯೊಂದಿಗೆ ಗೋಪೂಜೆ ನೆರವೇರಿಸಿ ಮತಯಾಚಿಸಿದರು.
గ్యాస్ సిలిండర్ కి పూజలు చేసిన పొన్నం ప్రభాకర్ గారు
₹500 పెట్టీ అలంకరణ తో పూజలు నిర్వహించిన పొన్నం
కాంగ్రెస్ వస్తే 500/- కే సిలిండర్ వస్తుంది సందేశం పంపిన పొన్నం ప్రభాకర్#MaarpuKavaliCongressRavali#PonnamPrabhakar#Ponnam4Husnabad#RahulGandhi#PonnamVijayabheri#INCIndia…pic.twitter.com/uPQRdQF9a7
— Ponnam Prabhakar (@Ponnam_INC)November 30, 2023

ಮತ್ತೋರ್ವ ಕಾಂಗ್ರೆಸ್ ಮುಖಂಡ, ಹುಸ್ನಾಬಾದ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಸಂಸದ ಪೊನ್ನಂ ಪ್ರಭಾಕರ್ ಅವರು ತಮ್ಮ ತಾಯಿಯ ಪಾದಗಳಿಗೆ ನಮಸ್ಕರಿಸಿ ಮತಯಾಚಿಸಿದರು.ಈ ವೇಳೆ ಪೊನ್ನಂ ಅವರು ತಮ್ಮ ನಿವಾಸದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗೆ ಹಾರ ಹಾಕಿ, 500 ರೂ. ನೋಟು ಹಾಕಿ ಪೂಜೆ ಮಾಡಿದ್ದಾರೆ.ಚುನಾವಣಾ ಭರವಸೆಯ ಭಾಗವಾಗಿ ಮಹಿಳೆಯರಿಗೆ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದ್ದಾರೆ.ಸಾಂಕೇತಿಕವಾಗಿ ಕಾಂಗ್ರೆಸ್ ಮುಖಂಡ ಪೊನ್ನಂ ಪ್ರಭಾಕರ್ ಗ್ಯಾಸ್ ಸಿಲಿಂಡರ್​ಗೆ ಹಾರವನ್ನು ಹಾಕಿ ಮತದಾರರ ಗಮನ ಸೆಳೆದಿದ್ದಾರೆ.
హుస్నాబాద్ లోని ప్రభుత్వ బాలుర జూనియర్ కళాశాల లో కుటుంబ సభ్యులతో కలిసి తన ఓటు హక్కును వినియోగించుకున్న హుస్నాబాద్ కాంగ్రెస్ పార్టీ అభ్యర్థి, మాజీ ఎంపీ పొన్నం ప్రభాకర్ గారు#MaarpuKavaliCongressRavali#PonnamPrabhakar#Ponnam4Husnabad#RahulGandhi#PonnamVijayabheri#INCIndia…pic.twitter.com/GN6Rn4xdWv
— Ponnam Prabhakar (@Ponnam_INC)November 30, 2023

ಇದೇ ವೇಳೆ ಪೊನ್ನಂ ಹುಸ್ನಾಬಾದ್‌ನ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜಿನಲ್ಲಿ ಕುಟುಂಬ ಸದಸ್ಯರೊಂದಿಗೆ ಮತದಾನದ ಹಕ್ಕು ಚಲಾಯಿಸಿದರು.ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತದಾರರಿಗೆ ಧನ್ಯವಾದ ಅರ್ಪಿಸಿದರು.
ಇಂದು ಸಂಜೆ 5ರವರೆಗೆ ಮತದಾನ ನಡೆಯಲಿದೆ. 119 ಕ್ಷೇತ್ರಗಳಲ್ಲಿ 2,290 ಮಂದಿ ಸ್ಪರ್ಧಿಸಿದ್ದಾರೆ. ತೆಲಂಗಾಣದ 33 ಜಿಲ್ಲೆಗಳ 119 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಮತದಾನ ನಡೆಯುತ್ತಿದೆ. ಆದರೆ ಎಲ್ಲರೂ ಮತದಾನ ಮಾಡುತ್ತೇವೆ ಸರಿ ಆದರೆ ಬಿಗ್​ಬಾಸ್​​ ಮನೆಯಲ್ಲಿರುವವರು ಹೇಗೆ ಮತಚಲಾಯಿಸುತ್ತಾರೆ ಎಂದು ಪ್ರಶ್ನೆ ಮುನ್ನೆಲೆಗೆ ಬಂದಿದೆ.
ರಕ್ತದಾನ, ನೇತ್ರದಾನದಂತೆ ಮಲದಾನ; ಮಾನವನ ತ್ಯಾಜ್ಯವನ್ನು ಮಾರಿ ಕೋಟಿ..ಕೋಟಿ ಸಂಪಾದಿಸಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + sixteen =
Remember me
