ಹೈದರಾಬಾದ್:ರಾಜ್ಯ ಸರ್ಕಾರದ ನಿರಂತರ ಪ್ರಯತ್ನಗಳ ಫಲವಾಗಿ ಭತ್ತ ಉತ್ಪಾದನೆಯಲ್ಲಿ ತೆಲಂಗಾಣ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಸೋಮವಾರ ಹೇಳಿದ್ದಾರೆ.
ರಂಗಾ ರೆಡ್ಡಿ ಜಿಲ್ಲೆಯ ಮಹೇಶ್ವರಂ ಮಂಡಲದ ತುಮ್ಮಲೂರು ಗ್ರಾಮದಲ್ಲಿ ನಡೆದ ಹರಿತೋತ್ಸವ ಕಾರ್ಯಕ್ರಮದ ಅಂಗವಾಗಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೆಇಆರ್, ದೇಶದಲ್ಲಿ ಭತ್ತ ಉತ್ಪಾದನೆಯಲ್ಲಿ ರಾಜ್ಯ ಈ ಮುಂಚೆ 17ನೇ ಸ್ಥಾನದಲ್ಲಿತ್ತು ಎಂದರು. ಈಗ ಇಂಜಿನಿಯರಿಂಗ್ ಅದ್ಭುತವಾದ ಕಾಳೇಶ್ವರಂ ಯೋಜನೆ ನಿರ್ವಣದ ಮೂಲಕ ತೆಲಂಗಾಣವು ಭಾರತದ ಬೀಜದ ಕಣಜವಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಈ ಯೋಜನೆಯು ಸಾರ್ವಜನಿಕರಿಗೆ ಒಂದು ವರವಾಗಿ ಪರಿಣಮಿಸಿದ್ದು ಕೃಷಿ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಗಿದೆ ಎಂದು ವಿವರಿಸಿದರು.

ಗೋದಾವರಿ ಜಲಾನಯನ ಪ್ರದೇಶದಲ್ಲಿ ಕಾಳೇಶ್ವರಂ ಏತ ನೀರಾವರಿ ಯೋಜನೆಯನ್ನು ನಿರ್ವಿುಸಲಾಗಿದೆ. ಕೃಷ್ಣಾ ನದಿಯಂತೆ ಗೋದಾವರಿ ನೆರೆಹೊರೆ ರಾಜ್ಯಗಳೊಂದಿಗೆ ಯಾವುದೇ ಅಂತಾರಾಜ್ಯ ಜಲ ವಿವಾದಗಳನ್ನು ಹೊಂದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಿಚಾರದಲ್ಲಿ ತೆಲಂಗಾಣ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದರು. ಪ್ರತಿ ಮನೆಗೆ ಕುಡಿಯುವ ನೀರು ಸರಬರಾಜು, ತಲಾ ಆದಾಯ ಮತ್ತು ತಲಾ ಇಂಧನ ಬಳಕೆಯಲ್ಲೂ ತೆಲಂಗಾಣ ಅಗ್ರ ಸ್ಥಾನದಲ್ಲಿದೆ ಎಂದು ವಿವರಿಸಿದರು.
ರಾಜ್ಯದ ಕೃಷಿ ಕ್ಷೇತ್ರದ ಮುನ್ನಡೆಯನ್ನು ಇತರ ರಾಜ್ಯಗಳೂ ಮೆಚ್ಚಿಕೊಂಡಿವೆ. ನಿರಂತರ ನೀರಾವರಿ ಸೌಲಭ್ಯ ಮತ್ತು ತಡೆರಹಿತ ವಿದ್ಯುಚ್ಛಕ್ತಿ ಪೂರೈಕೆ ಈ ಪ್ರಗತಿಗೆ ಕಾರಣ ಎಂದು ಸಿಎಂ ಹೇಳಿದರು. ಸಚಿವರಾದ ಸಬಿತಾ ಇಂದ್ರ ರೆಡ್ಡಿ ಮತ್ತು ಇಂದ್ರಾಕರನ್ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಕೆಸಿಆರ್ ತುಮ್ಮಲೂರು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಫಾರೆಸ್ಟ್ ಬ್ಲಾಕ್​ನಲ್ಲಿ ಗಿಡಗಳನ್ನು ನೆಟ್ಟರು.
ನಿಮ್ಮ ಒತ್ತಡ, ಕಿರುಕುಳ ನಿಭಾಯಿಸುವ ಶಾಂತಿ ಮಂತ್ರ ಕಲಿತು ಬರುತ್ತೇನೆ: ರಜೆ ಕೋರಿ ಪೊಲೀಸ್​ ಅಧಿಕಾರಿ ಬರೆದ ಪತ್ರ ವೈರಲ್​

ಅಮೆರಿಕದಲ್ಲಿ ಚೆನ್ನಾಗಿ ಬದುಕಬಹುದೆಂದು ಭಾರತ ತೊರೆದ ಯುವದಂಪತಿಗೆ ಮಾರ್ಗಮಧ್ಯೆ ಕಾದಿತ್ತು ಶಾಕ್!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
