ಹೈದರಾಬಾದ್​:ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್​, ತೆಲಂಗಾಣದಲ್ಲಿಯೂ ಇದೇ ತಂತ್ರವನ್ನು ಬಳಸಿ ಆಡಳಿತ ಚುಕ್ಕಾಣಿ ಹಿಡಿದಿದೆ. ಇದೀಗ ಕರ್ನಾಟಕದಂತೆ ತೆಲಂಗಾಣದಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವಿದೆ. ಆದರೆ, ಉಚಿತ ಬಸ್​ ಪ್ರಯಾಣ ಆಟೋ ಚಾಲನೆ ಮಾಡಿ ಬದುಕು ನಡೆಸುತ್ತಿರುವ ಸಾವಿರಾರು ಆಟೋ ಡ್ರೈವರ್​ಗಳ ಮೇಲೆ ಪರಿಣಾಮ ಬೀರಿದ್ದು, ಉಚಿತ ಪ್ರಯಾಣದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕದಲ್ಲೂ ಆಟೋ ಚಾಲಕರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಪ್ರತಿಭಟನೆ ಸಹ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಅದೇ ರೀತಿ ತೆಲಂಗಾಣದಲ್ಲೂ ಆಟೋ ಚಾಲಕರು, ಮಹಿಳೆಯರ ಉಚಿತ ಬಸ್​ ಪ್ರಯಾಣದ ವಿರುದ್ಧ ಬೇಸರ ಹೊರಹಾಕಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ತೆಲಂಗಾಣ ರಾಜ್ಯ ರಸ್ತೆ ಸಾರಿಗೆ (ಟಿಎಸ್​ಆರ್​ಟಿಸಿ) ಬಸ್​ಗಳನ್ನು ಏರಿ ಪ್ರಯಾಣಿಕರ ಬಳಿ ಭಿಕ್ಷೆ ಬೇಡುವ ಮೂಲಕ ಧರಣಿ ನಡೆಸಿದ್ದಾರೆ. ಯೂನಿಫಾರ್ಮ್​ ಧರಿಸಿ, ಕೈಯಲ್ಲಿ ಬಟ್ಟಲು ಹಿಡಿದು ಪ್ರಯಾಣಿಕರ ಬಳಿ ಚಿಲ್ಲರೆ ಕಾಸಿಗಾಗಿ ಭಿಕ್ಷೆ ಬೇಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
బిక్షం అడుక్కుంటూ ఆటో డ్రైవర్ల నిరసన
మహిళలకు బస్సుల్లో ఉచిత ప్రయాణంతో ఆటో డ్రైవర్ల బ్రతుకుతెరువు కష్టంగా మారిందని ఆవేదన వ్యక్తం చేస్తూ, మేడ్చల్‌లో ఆటో డ్రైవర్లు బిక్షం అడుక్కుంటూ నిరసన తెలిపారు.pic.twitter.com/eWcPnALvny
— Telugu Scribe (@TeluguScribe)January 4, 2024

ಅಂದಹಾಗೆ ಮಹಿಳೆಯ ಉಚಿತ ಬಸ್​ ಪ್ರಯಾಣ ಯೋಜನೆಗೆ ಕರ್ನಾಟಕದಲ್ಲಿ ಶಕ್ತಿ ಯೋಜನೆ ಎಂಬ ಹೆಸರಿದ್ದರೆ, ತೆಲಂಗಾಣದಲ್ಲಿ ಮಹಾಲಕ್ಷ್ಮೀ ಯೋಜನೆ ಎಂದು ಕರೆಯಲಾಗುತ್ತದೆ.
ಸಿಎಂ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯಾದ್ಯಂತ ಮಹಿಳೆಯರಿಗೆ ನಿಗದಿತ TSRTC ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಘೋಷಿಸಿತು. ಈ ಯೋಜನೆಯು ಕಾಂಗ್ರೆಸ್‌ನ ಚುನಾವಣಾ ಭರವಸೆಯ ಭಾಗವಾಗಿತ್ತು ಮತ್ತು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಾರಿ ಮಾಡಲಾಗಿದೆ. ಆದರೆ, ಇದರ ವಿರುದ್ಧ ತೆಲಂಗಾಣ ಆಟೋ ಯೂನಿಯನ್ ಆಕ್ರೋಶ ಹೊರಹಾಕಿದ್ದು, ಇಂದು (ಜ.7) ರಾಜ್ಯಾದ್ಯಂತ ಮಹಾಧರಣಿ ನಡೆಸಿದೆ.
ತೆಲಂಗಾಣ ಸರ್ಕಾರವು ಆಟೋ ರಿಕ್ಷಾ ಚಾಲಕರು ಸೇರಿದಂತೆ ವಿವಿಧ ವರ್ಗದ ಕಾರ್ಮಿಕರಿಗೆ 5 ಲಕ್ಷ ರೂ. ಅಪಘಾತ ವಿಮೆ ಮತ್ತು 10 ಲಕ್ಷ ರೂ. ಆರೋಗ್ಯ ವಿಮೆಯನ್ನು ಘೋಷಿಸಿದೆ. ಆದರೆ, ಟಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವು ತಮ್ಮ ಮೇಲೆ ಪರಿಣಾಮ ಬೀರಿದೆ ಎಂದು ಆಟೋ ಚಾಲಕರು ತುಂಬಾ ಬೇಸರ ಹೊರಹಾಕಿದ್ದಾರೆ. ಉದ್ಯೋಗಸ್ಥ ಮಹಿಳೆಯರು ತಮ್ಮ ಪ್ರಾಥಮಿಕ ಆದಾಯದ ಮೂಲವಾಗಿದ್ದಾರೆ. ನೂರಾರು ರೂಪಾಯಿ ಖರ್ಚು ಮಾಡಿ ಆಟೋರಿಕ್ಷಾಗಳಲ್ಲಿ ಪ್ರಯಾಣಿಸುವ ಬದಲು ಇದೀಗ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಆದಾಯದ ಮೇಲೆ ಪರಿಣಾಮ ಬೀರಿದ್ದು, ಕುಟುಂಬ ನಡೆಸುವುದು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.(ಏಜೆನ್ಸೀಸ್​)
ಪ್ರಿಯಾಂಕಾ ಬೆಡ್​ರೂಮ್​​ ಸೀನ್ ನೋಡಿ ಥಿಯೇಟರ್​ಗೆ ಹೋದವರಿಗೆ ಕಾದಿತ್ತು ಅಚ್ಚರಿ! ನಟಿಯ ಮೇಲೆಯೇ ಸಂಶಯ

ಪ್ರಧಾನಿ ಮೋದಿ ನಿಂದಿಸಿದ ಮೂವರು ಮಾಲ್ಡೀವ್ಸ್ ಸಚಿವರು ಸಸ್ಪೆಂಡ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + eighteen =
Remember me
