ಆಂಧ್ರಪ್ರದೇಶ:ಯಾದಾದ್ರಿ ಭುವನಗಿರಿ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಇಲಿಗಳು ಮೃತದೇಹವನ್ನು ಕಚ್ಚಿ ತಿಂದಿರುವ ಈ ಭಯಾನಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಕಲುಷಿತ ನೀರು ಕುಡಿದು ಓರ್ವ ಮಹಿಳೆ ಮೃತ್ಯು; 30ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಎಡ್ಲಪಾಡು ಮಂಡಲದ ಬಯಪಾಲೆಂ ಗ್ರಾಮದ ಪೆರಿಕಲ ರವಿಕುಮಾರ್ (38) ಮೃತ. ಈತ ಚಾಲಕನಾಗಿ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದನು. ರವಿಕುಮಾರ್ ಕುಡಿತದ ಚಟಕ್ಕೆ ಬಿದ್ದಿದ್ದಾನೆ. ಭಾನುವಾರ ರಾತ್ರಿ ಕುಡಿದು ಮನೆಗೆ ಬಂದು ಪೋಷಕರೊಂದಿಗೆ ಜಗಳವಾಡಿದ್ದಾನೆ. ಕುಡಿದ ಅಮಲಿನಲ್ಲಿದ್ದ ರವಿಕುಮಾರ್ ಜತೆ ಜಗಳ ಮಾಡಲಾರದೆ ಪೋಷಕರು, ಮಕ್ಕಳು ಸಮೀಪದ ಪರಿಚಯಸ್ಥರ ಮನೆಗೆ ತೆರಳಿದ್ದರು. ರವಿಕುಮಾರ್ ರಾತ್ರಿ 11:30ರ ಸುಮಾರಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಆಸ್ಪತ್ರೆಯಲ್ಲಿ ಶವಾಗಾರದ ಕೊಠಡಿಯ ಫ್ರೀಜರ್‌ನಲ್ಲಿ ಇಡುವ ಬದಲು ಶವವನ್ನು ಹೊರಗೆ ಇಡಲಾಗಿದೆ.
ಇದನ್ನೂ ಓದಿ:LPG Cylinder Price; ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ
ರವಿಕುಮಾರ್ ಅವರ ಮೃತದೇಹವನ್ನು ನೋಡಲು ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ಸೋಮವಾರ ಬೆಳಿಗ್ಗೆ ಶವಾಗಾರಕ್ಕೆ ಬಂದರು. ಆದರೆ ಮೃತದೇಹದ ಮುಖ, ಕೆನ್ನೆ ಹಾಗೂ ಹಣೆಯ ಮೇಲೆ ಇಲಿ ಕಚ್ಚಿದ ಗುರುತುಗಳನ್ನು ನೋಡಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಯಿತು. ಇನ್ನೊಂದೆಡೆ ಮೃತದೇಹವನ್ನು ಇಲಿ ತಿಂದು ಹಾಕಿದೆ ಎಂಬ ಪ್ರಚಾರ ಸಂಪೂರ್ಣ ಸುಳ್ಳು ಎಂದು ಆಸ್ಪತ್ರೆ ಅಧೀಕ್ಷಕ ಚಿನ್ನಾನಾಯಕ್ ಹೇಳಿದ್ದಾರೆ.
ಇದನ್ನೂ ಓದಿ:ಮೊಬೈಲ್ ಚಾರ್ಜರ್ ಕೊಡಲಿಲ್ಲವೆಂದು ಪ್ರಾಣ ಬಿಟ್ಟ ಯುವಕ
ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಇಲಿಗಳು ಕಚ್ಚಿರುವ ಘಟನೆಗಳು ಈ ಹಿಂದೆ ಹಲವು ಸರಕಾರಿ ಆಸ್ಪತ್ರೆಗಳಲ್ಲಿ ನಡೆದಿವೆ. ಇಂತಹ ಘಟನೆಗಳು ನಡೆದಾಗ ಅಧಿಕಾರಿಗಳು ದೌಡಾಯಿಸುತ್ತಾರೆ ಏನೋ ಒಂದು ಹೇಳಿ ಹೋಗುತ್ತಾರೆ. ಆದರೆ ಸಿಬ್ಬಂದಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಲಿ ಕಡಿತದಿಂದ ಮಕ್ಕಳು ಸಾಯುತ್ತಿರುವ ಪ್ರಕರಣಗಳು ಸರಕಾರಿ ಆಸ್ಪತ್ರೆಗಳಲ್ಲೂ ನಡೆಯುತ್ತಿವೆ. ಆದರೂ ಆಸ್ಪತ್ರೆಗಳಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳು ನಡೆಯುತ್ತಲೇ ಇವೆ ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.
VIDEO | ತರಕಾರಿ ಬೆಲೆ ಏರಿಕೆ ಬೆನ್ನಲ್ಲೇ ಮಾರುಕಟ್ಟೆಗೆ ಭೇಟಿ ನೀಡಿದ ರಾಹುಲ್​ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
