ಹೈದರಾಬಾದ್:ಹಿರಿಯ ನಿರ್ಮಾಪಕ ಮತ್ತು ಹೈದರಾಬಾದ್ ಫಿಲ್ಮ್‌ಸಿಟಿ ಮುಖ್ಯಸ್ಥ ಮತ್ತು ಈಟಿವಿ ನೆಟ್‌ವರ್ಕ್‌ನ ಮಾಲೀಕ ರಾಮೋಜಿ ರಾವ್ ನಿಧನಕ್ಕೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಅವರು ಶನಿವಾರ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:ಪೋರ್ಷೆ ಕಾರು ಅಪಘಾತ ಆರೋಪಿ ವೇದಾಂತ್ ಸಂಬಂಧಿಗೆ ಸೇರಿದ ರೆಸಾರ್ಟ್​ ಅಕ್ರಮ ಭಾಗ ಧ್ವಂಸ!
“ರಾಮೋಜಿ ರಾವ್ ಅವರ ನಿಧನದಿಂದ ದುಃಖವಾಗಿದೆ. ತೆಲುಗು ಮಾಧ್ಯಮ ಮತ್ತು ಪತ್ರಿಕೋದ್ಯಮಕ್ಕೆ ಅವರ ಗಮನಾರ್ಹ ಕೊಡುಗೆ ಶ್ಲಾಘನೀಯ. ಅವರ ನಿಧನಕ್ಕೆ ನನ್ನ ಸಂತಾಪಗಳು. ಓಂ ಶಾಂತಿ” ಎಂದು ರೆಡ್ಡಿ ಎಕ್ಸ್ ನಲ್ಲಿ ಪೋಸ್ಟ್​ ಮಾಡಿದ್ದಾರೆ.
మీడియా మేరునగధీరుడిగా, సమాచార రంగంలో విలువలతో కూడిన నూతన ఒరవడులకు, ఎన్నో సంస్కరణలకు శ్రీకారం చుట్టిన మహనీయుడు శ్రీ రామోజీరావు గారు ఇక లేరని తెలిసి తీవ్ర విచారం వ్యక్తం చేస్తున్నాను.
నిబద్ధత, క్రమశిక్షణ, పట్టుదలతో పనిచేస్తూ.. ఎందరోమంది జీవితాల్లో వెలుగులు నింపిన రామోజీరావుగారి…pic.twitter.com/ck6doI8iqz
— G Kishan Reddy (Modi Ka Parivar) (@kishanreddybjp)June 8, 2024

ತೆಲಂಗಾಣದ ಹೈದರಾಬಾದ್‌ನ ಸ್ಟಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶನಿವಾರ ಬೆಳಗ್ಗೆ ರಾವ್‌ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ಆಗಿತ್ತು. ರಾವ್ ಅವರು ಹಲವಾರು ಯಶಸ್ವಿ ವ್ಯಾಪಾರ ಉದ್ಯಮಗಳು ಮತ್ತು ಮಾಧ್ಯಮ ಸಂಸ್ಥೆಗಳನ್ನು ಹೊಂದಿದ್ದರು . ಅವರ ನಾಯಕತ್ವದಲ್ಲಿ ಈನಾಡು ತೆಲುಗು ಮಾಧ್ಯಮದಲ್ಲಿ ಪ್ರಮುಖ ಶಕ್ತಿಯಾಯಿತು.

ಅವರ ಇತರ ವ್ಯಾಪಾರ ಉದ್ಯಮಗಳಲ್ಲಿ ಚಲನಚಿತ್ರ ನಿರ್ಮಾಣ ಸಂಸ್ಥೆ ಉಷಾ ಕಿರಣ್ ಮೂವೀಸ್, ಚಲನಚಿತ್ರ ವಿತರಣಾ ಕಂಪನಿ ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್, ಹಣಕಾಸು ಸೇವಾ ಸಂಸ್ಥೆ ಮಾರ್ಗದರ್ಶಿ ಚಿಟ್ ಫಂಡ್ ಮತ್ತು ಹೋಟೆಲ್ ಸರಪಳಿ ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್ ಸೇರಿವೆ. ಅವರು ದೂರದರ್ಶನ ಚಾನೆಲ್‌ಗಳ ETV ನೆಟ್‌ವರ್ಕ್‌ನ ಮುಖ್ಯಸ್ಥರೂ ಆಗಿದ್ದರು.
2016 ರಲ್ಲಿ, ಅವರು ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾವ್ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಸದ್ಯ ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇರುವ ಅವರ ಮನೆಗೆ ರವಾನೆ ಮಾಡಲಾಗಿದೆ. ರಾಮೋಜಿ ರಾವ್ ಅವರ ನಿವಾಸದಲ್ಲೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ರಾಮೋಜಿ ರಾವ್ ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.
ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಗ್ರಾಮದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ಅವರು, ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ ಮತ್ತು ಫಿಲ್ಮ್ ಸ್ಟುಡಿಯೋ, ರಾಮೋಜಿ ಫಿಲ್ಮ್ ಸಿಟಿಯನ್ನು ಸ್ಥಾಪಿಸಿದರು. ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್‌ವರ್ಕ್, ರಮಾದೇವಿ ಪಬ್ಲಿಕ್ ಸ್ಕೂಲ್, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್‌ಗಳು ರಾಮೋಜಿ ರಾವ್ ಒಡೆತನದ ಕಂಪನಿಗಳಾಗಿವೆ.
ಜಮ್ಮು-ಕಾಶ್ಮೀರ ವಿಧಾನಸಭೆಗೆ ಶೀಘ್ರ ಚುನಾವಣೆ: ಚುನಾವಣಾ ಆಯೋಗ ಸುಳಿವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − one =
Remember me
