ನವದೆಹಲಿ:ಅಮರನಾಥ ಗುಹೆ ಬಳಿ ಸಂಭವಿಸಿರುವ ಮೇಘಸ್ಫೋಟದಿಂದಾಗಿ ಭಾರೀ ಹಾನಿ ಉಂಟಾಗಿದ್ದು, ಈವರೆಗೆ 16ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಈ ಮಧ್ಯೆ ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್​​ ಹಾಗೂ ಅವರ ಕುಟುಂಬ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಮೇಘಸ್ಫೋಟವಾದ ಕೆಲವೇ ಕ್ಷಣಗಳ ಮುಂಚೆ ತೆಗೆದುಕೊಂಡ ನಿರ್ಧಾರದಿಂದ ಶಾಸಕ ಸೇರಿ ಇಡೀ ಕುಟುಂಬವೇ ಸುರಕ್ಷಿತವಾಗಿದೆ.
ಅಮರನಾಥ ಗುಹೆ ಬಳಿ ತೆರಳಲು 40 ಕ್ಕೂ ಅಧಿಕ ಕಿಮೀ ವರೆಗೂ ಕಾಲ್ನಡಿಗೆ ಹಾಗೂ ಹೆಲಿಕಾಪ್ಟರ್​​ ಮೂಲಕವೂ ಹೋಗಬಹುದು. ವೈಪರೀತ್ಯ ಹವಾಮಾನದಿಂದಾಗಿ ಹೆಲಿಕಾಪ್ಟರ್​ನಲ್ಲಿ ಹೋಗುವ ನಿರ್ಧಾರವನ್ನು ಕೈ ಬಿಟ್ಟಿದ್ದರಿಂದ ಶಾಸಕ ಹಾಗೂ ಕುಟುಂಬಸ್ಥರು ಮುಂದಾಗಬಹುದಾದ ಅನಾಹುತದಿಂದ ಪಾರಾಗಿದ್ದಾರೆ.
ಹೆಲಿಕಾಪ್ಟರ್​​ ಸೇವೆಯನ್ನು ಕೂಡ ಇದೇ ನಿಲ್ಲಿಸಲಾಯಿತು, ಇದು ನಮಗೆ ವರದಾನವಾಯಿತು. ಇಲ್ಲವಾದಲ್ಲಿ ಇಂದು ನಾವೇನಾಗುತ್ತಿದ್ದೆವೋ ಎಂದು ಶಾಸಕ ರಾಜಾ ಸಿಂಗ್​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್​)
ಅಮರನಾಥದಲ್ಲಿ ಕನ್ನಡಿಗರು ಸುರಕ್ಷಿತ: 24 ಗಂಟೆ ಸಹಾಯವಾಣಿ ಆರಂಭ, ಇಲ್ಲಿದೆ ವಿವರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
