ಹೈದರಾಬಾದ್:ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತೆಲಂಗಾಣದಲ್ಲಿ ಮಹತ್ವದ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ್ದು, ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಸಂಗಾರೆಡ್ಡಿ ಜಿಲ್ಲೆಯ ಕೊಂಡಕಲ್ ಗ್ರಾಮದಲ್ಲಿ 1000 ಕೋಟಿ ರೂ. ಮೌಲ್ಯದ ರೈಲು ಕೋಚ್ ಕಾರ್ಖಾನೆಯನ್ನು ಕೆಸಿಆರ್ ಗುರುವಾರ ಉದ್ಘಾಟಿಸಿದರು. ಪತಂಚೆರುವಿನ ಕೊಲ್ಲೂರು ಪ್ರದೇಶದಲ್ಲಿ ಸರ್ಕಾರಿ ಅನುದಾನಿತ ವಸತಿ ಯೋಜನೆಗೆ ಚಾಲನೆ ನೀಡಿದರು. ಜತೆಗೆ ಅಲ್ಲಿಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಕೆಸಿಆರ್, ಮುಂದಿನ ಚುನಾವಣೆಯಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಹೈದರಾಬಾದ್ ಮೆಟ್ರೋ ರೈಲು ಮಾರ್ಗವನ್ನು ಪತಂಚೆರು ಕೈಗಾರಿಕಾ ಪ್ರದೇಶಕ್ಕೆ ವಿಸ್ತರಿಸಲಾಗುವುದು. ನಮ್ಮ ಸರ್ಕಾರದ ಸಂಘಟಿತ ಪ್ರಯತ್ನಗಳು ರಾಜ್ಯ ಸಮಗ್ರವಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತಿವೆ. ಮೆಟ್ರೋ ಮಾರ್ಗ ವಿಸ್ತರಣೆ ಮಾಡಿ ನಗರದ ಪ್ರಮುಖ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ಇದು ನಿರಂತರವಾಗಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸುತ್ತದೆ ಎಂದರು.
ಪತಂಚೆರುವಿನ ಕೊಲ್ಲೂರು ಪ್ರದೇಶದಲ್ಲಿ ತಲೆ ಎತ್ತಿರುವ ಏಷ್ಯಾದ ಅತಿ ದೊಡ್ಡ ಸರ್ಕಾರಿ ಅನುದಾನಿತ ವಸತಿ ಯೋಜನೆ 111 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗಿದೆ. ವಸತಿ ಪ್ರದೇಶದಲ್ಲಿ 15660 ಮನೆಗಳಿದ್ದು, 1489.29 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತಿವೆ. ಜತೆಗೆ ಜನರ ಕಲ್ಯಾಣ ಕಾರ್ಯಗಳಲ್ಲಿ ಪ್ರಗತಿ ಸಾಧಿಸಿದ್ದೇವೆ. ನಮ್ಮ ಸರ್ಕಾರ ಕೈಗೊಂಡ ಹಲವು ಪ್ರಗತಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಇತರ ರಾಜ್ಯಗಳು ಅನುಕರಿಸುತ್ತಿವೆ. ಯೋಜನಾಬದ್ಧ ಕಾರ್ಯಕ್ರಮಗಳೊಂದಿಗೆ ರಾಜ್ಯವು ಬೆಳವಣಿಗೆ ಸಾಧಿಸುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ರೈಲು ಬೋಗಿ ನಿರ್ಮಾಣ ಕಾರ್ಖಾನೆ ನಿರ್ಮಿಸುವ ಕುರಿತು ಮೇಧಾ ಸರ್ವೋ ಡ್ರೈವ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತೆಲಂಗಾಣ ರಾಜ್ಯ ಕೈಗಾರಿಕಾ ಮೂಲಸೌಕರ್ಯ ನಿಗಮ (ಟಿಎಸ್‌ಐಐಸಿ) ಮೂಲಕ ತೆಲಂಗಾಣ ಸರ್ಕಾರವು ರೈಲು ಮತ್ತು ಮೆಟ್ರೋ ಬೋಗಿಗಳನ್ನು ತಯಾರಿಸಲು 100 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. 805 ಕೋಟಿ ರೂ. ಹೂಡಿಕೆ ಮಾಡಲಾಗಿದ್ದು, ಈಗಾಗಲೇ 558 ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ. ಅಲ್ಲದೆ ಪರೋಕ್ಷವಾಗಿ ಸುಮಾರು 500 ಮಂದಿಗೆ ಕೆಲಸ ಸಿಕ್ಕಿದೆ. ಸದ್ಯದಲ್ಲಿಯೇ ಸುಮಾರು 1000 ಮಂದಿ ಯೋಜನೆಯ ಭಾಗವಾಗಿ ಉದ್ಯೋಗ ಪಡೆದುಕೊಳ್ಳಲಿದ್ದಾರೆ ಎಂದು ಕೆ. ಚಂದ್ರಶೇಖರರಾವ್ ಹೇಳಿದರು.
ಈ ಕಾರ್ಯಕ್ರಮಗಳಲ್ಲಿ ಸಚಿವರಾದ ಕೆ.ಟಿ. ರಾಮರಾವ್, ಹರೀಶ್‌ರಾವ್, ಪ್ರಶಾಂತ್ ರೆಡ್ಡಿ, ಸವಿತಾ ಇಂದ್ರಾ ರೆಡ್ಡಿ, ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ, ಸಂಸದ ರಂಜಿತ್ ರೆಡ್ಡಿ, ಪ್ರಭಾಕರ ರೆಡ್ಡಿ, ಶಾಸಕರಾದ ಪಲ್ಲ ರಾಜೇಶ್ವರರೆಡ್ಡಿ, ಪಟ್ನಂ ಮಹೇಂದ್ರ ರೆಡ್ಡಿ, ಗುಡೆಂ ಮಹಿಪಾಲ ರೆಡ್ಡಿ, ಮೇಯರ್ ವಿಜಯಲಕ್ಷ್ಮೀ ಮುಂತಾದವರು ಭಾಗವಹಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 1 =
Remember me
