ಹೈದರಾಬಾದ್​:ಸೋಮವಾರ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ 16 ವರ್ಷದ ಮಗಳ ದುಃಖದಲ್ಲಿದ್ದ ತಂದೆಗೆ ತೆಲಂಗಾಣ ಪೊಲೀಸರು ಕಾಲಿನಿಂದ ಒದ್ದು, ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜನರ ಮನಸ್ಸನ್ನು ಕದಡಿದೆ.
ವಿಡಿಯೋದಲ್ಲಿ ಹೆಣ್ಣು ಮಗಳ ಶವವಿರುವ ಪೆಟ್ಟಿಗೆಯನ್ನು ಪೊಲೀಸರು ಎಳೆದು ತರುವಾಗ ಓಡಿ ಬಂದ ತಂದೆ ಶವಪೆಟ್ಟಿಗೆಯನ್ನು ಹಿಡಿದುಕೊಂಡು ದುಃಖಿಸುತ್ತಾರೆ. ಶವಪೆಟ್ಟಿಗೆಯನ್ನು ಬಿಡಿಸಲು ಪೊಲೀಸರು ಪ್ರಯತ್ನಿಸಿದಾಗ ಬಿಡಲೊಪ್ಪದ ತಂದೆ ಮಗಳ ಶವವನ್ನು ನೋಡಿ ಕಣ್ಣೀರಿಡುತ್ತಾ ಗೋಳಾಡುತ್ತಿರುತ್ತಾರೆ. ಆದರೆ, ಇದನ್ನು ಲೆಕ್ಕಿಸದ ಪೊಲೀಸರು ಅಮಾನವೀಯವಾಗಿ ಕಾಲಿನಿಂದ ಒದ್ದು, ಎಳೆದು ಪಕ್ಕಕ್ಕೆ ಎಸೆಯುತ್ತಾರೆ. ಇದೇ ವೇಳೆ ಆತನ ಪತ್ನಿ ನೆರವಿಗೆ ಧಾವಿಸಿ ಪೊಲೀಸರ ಬಳಿ ಬೇಡಿಕೊಳ್ಳುತ್ತಾಳೆ.
ಈ ಎಲ್ಲಾ ದೃಶ್ಯ ಕಂಡುಬಂದಿದ್ದು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ. ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಶವ ಪರೀಕ್ಷೆಗೆಂದು ಕೊಂಡೊಯ್ಯುತ್ತಿದ್ದಾಗ ಪೊಲೀಸ್​ ಕಸ್ಟಡಿಯಿಂದ ಶವವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಮೃತ ಹುಡುಗಿಯ ಕುಟುಂಬ ಮತ್ತು ಪ್ರತಿಭಟನಾಕಾರರು ಯತ್ನಿಸಿದಾಗ ಈ ಸನ್ನಿವೇಶ ಜರುಗಿತು ಎಂದು ಪೊಲೀಸ್​ ಅಧಿಕಾರಿ ಚಂದನಾ ದೀಪ್ತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಮೃತಪಟ್ಟಿರುವ ಹುಡುಗಿ ಖಾಸಗಿ ಜ್ಯೂನಿಯರ್​ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಪ್ರಕರಣದ ಬಗ್ಗೆ ಇನ್ನು ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಆದರೆ, ಕಾಲೇಜಿನ ಶೌಚಗೃಹದಲ್ಲಿ ಆಕೆಯ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಸದ್ಯ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಹುಡುಗಿಯ ಪಾಲಕರು ನೀಡಿರುವ ದೂರಿನ ಆಧಾರದ ಮೇಲೆ ಖಾಸಗಿ ಕಾಲೇಜಿನ ಮ್ಯಾನೇಜ್​ಮೆಂಟ್​ ವಿರುದ್ಧ ಅಪರಾಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಲಾಗಿದೆ.
ತಮ್ಮ ಮಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜ್ವರದಿಂದ ಬಳಲುತ್ತಿದ್ದಳು. ಅಲ್ಲದೆ, ಖಿನ್ನತೆಗೂ ಒಳಗಾಗಿದ್ದಳು. ಇದೇ ಆಕೆಯ ಸಾವಿಗೆ ಕಾರಣವಾಗಿರಬಹುದು. ಆದರೆ, ಕಾಲೇಜು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ. ಆಲ್ಲದೆ, ಆಕೆಯ ಸಾವಿನ ವಿಚಾರ ತಿಳಿಸಲು ವಿಳಂಬ ಮಾಡಿದರು ಎಂತಲೂ ದೂರಿದ್ದಾರೆ.(ಏಜೆನ್ಸೀಸ್​)
Very disturbing… Body of 16-year-old girl who died under suspicious circumstances at private junior college in#Patancherubeing shifted at breakneck speed by@TelanganaPolice; girl's father who wanted to stop & ask questions is kicked by the policeman; where is empathy??@ndtvpic.twitter.com/QcoUsnBuY1
— Uma Sudhir (@umasudhir)February 26, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
