ತೆಲಂಗಾಣ:ಆಸ್ಪತ್ರೆಗೆ ದಾಖಲಾಗಿದ್ದ ಕರೊನಾ ಸೋಂಕಿತನೋರ್ವ ಬೆಡ್​​ನಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ.
70 ವರ್ಷದ ಇವರಿಗೆ ಕೊವಿಡ್​-19 ಸೋಂಕು ತಗುಲಿತ್ತು. ತೆಲಂಗಾಣದ ಕರೀಂನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಡ್​ ಮೇಲೆ ಮಲಗಿದ್ದ ಅವರು ಆಕಸ್ಮಿಕವಾಗಿ ಕೆಳಗೆ ಬಿದ್ದು, ಅಲ್ಲೇ ಕೊನೆಯುಸಿರೆಳೆದಿದ್ದಾರೆ.ಇವ್ರು ಗಾಂಧಾರ ಮಂಡಲ್​​ನಲ್ಲಿರುವ ವೆಂಕಟಯ್ಯಪಲ್ಲಿ ನಿವಾಸಿ. ಜು.22ರಂದು ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ತೊಂದರೆ ಇರುವುದರಿಂದ ಆಕ್ಸಿಜನ್​ ಸಪೋರ್ಟ್​​ನಲ್ಲಿ ಇಡಲಾಗಿತ್ತು. ಭಾನುವಾರ ಅದೇನಾಯಿತೋ ಬೆಡ್​ನಿಂದ ಕೆಳಗೆ ಬಿದ್ದರು. ಅವರಿಗೆ ಕೊಟ್ಟಿದ್ದ ಆಕ್ಸಿಜನ್​ ಕೂಡ ಕಳಚಿಬಿತ್ತು. ಕೂಡಲೇ ವೃದ್ಧ ಮೃತಪಟ್ಟರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.ಇದನ್ನೂ ಓದಿ:ಕ್ವಾರಂಟೈನ್‌ನಲ್ಲಿರುವವರಿಗೆ ಢವಢವ; 15 ದಿನವಾದರೂ ಸಿಕ್ಕಿಲ್ಲ ಪರೀಕ್ಷಾ ವರದಿ
ಇನ್ನು ಅವರ ಅಕ್ಕಪಕ್ಕ ಮಲಗಿದ್ದ ಬೇರೆ ಇತರ ರೋಗಿಗಳು ವೈದ್ಯರನ್ನು ದೂರಿದ್ದಾರೆ. ನಾವು ಕೂಡಲೇ ವೈದ್ಯರು, ನರ್ಸ್​ಗಳನ್ನು ಕರೆದರೂ ಬಂದು ನೋಡಲಲ್ಲಿ. 70 ವರ್ಷದ ವೃದ್ಧ ಕೆಳಗೆ ಬಿದ್ದು, ಉಸಿರಾಟಕ್ಕೆ ತೀವ್ರ ಕಷ್ಟಪಡುತ್ತಿದ್ದರು. ವೈದ್ಯರು ಬೇಗ ಬಂದರೆ ಉಳಿಸಬಹುದಿತ್ತು ಎಂದು ಹೇಳಿದ್ದಾರೆ.
ವೃದ್ಧ ಕೆಳಗೆ ಬಿದ್ದಿರುವ ವಿಡಿಯೋ ಮತ್ತು ಉಳಿದ ರೋಗಿಗಳು ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ದೂರುತ್ತಿರುವ ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿವೆ. (ಏಜೆನ್ಸೀಸ್)
ನಿಗಮ- ಮಂಡಳಿಗೆ ಶಾಸಕರ ನೇಮಕ: ಇಲ್ಲಿದೆ ಡಿಟೇಲ್ಸ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
