ಹೈದರಾಬಾದ್​:ಹಾಸ್ಟೆಲ್​ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದ ಮಗಳನ್ನು ನೋಡಲು ಮತ್ತೊಬ್ಬ ಮಗಳೊಂದಿಗೆ ಬೈಕ್​ನಲ್ಲಿ ಹೊರಟ ದಂಪತಿ ದುರಂತ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ರಂಗಾರೆಡ್ಡಿ ಜಿಲ್ಲೆ ಶಮ್ಶಾಬಾದ್​ ಮಂಡಲದ ಪೆದ್ದಾಶಪುರ್​ನಲ್ಲಿರುವ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ.
ಈ ಬಗ್ಗೆ ಪೆದ್ದಾಶಪುರ್​ ಠಾಣಾ ಇನ್ಸ್​ಪೆಕ್ಟರ್​ ಶ್ರೀಧರ್​ಕುಮಾರ್​ ಮಾಹಿತಿ ನೀಡಿದ್ದು, ಫರೂಖ್​ನಗರ ಮಂಡಲದ ಕಾದಿ ಯಲಕುಂಟ ಗ್ರಾಮದ ಗೋಪಾಲ್​ (47) ಮತ್ತು ಅಂಜಲಿ (42) ದಂಪತಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನಿದ್ದಾನೆ.
ಮೂರನೇ ಮಗಳು ಮಧುಲತಾ, ಛಂಪಾಪೇಟೆ ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ನಲ್ಲಿ ವಿದ್ಯಾಭಾಸ ಮಾಡುತ್ತಿದ್ದಾಳೆ. ಆಕೆಯನ್ನು ನೋಡಲೆಂದು ಗೋಪಾಲ್​ ಮತ್ತು ಅಂಜಲಿ ತಮ್ಮ ಕಿರಿಯ ಮಗಳು ಸ್ವಾತಿ (9) ಜೊತೆಗೆ ಬೈಕ್​ನಲ್ಲಿ ತೆರಳಿದ್ದರು. ಈ ವೇಳೆ ಪೆದ್ದಾಶಪುರ್ ಪಟ್ಟಣದಲ್ಲಿ ಕ್ಯಾಂಟರ್​ ಒಂದು ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿ ಹೊಡೆದು, ದಂಪತಿ ತೆರಳುತ್ತಿದ್ದ ಬೈಕ್​ಗೆ ಗುದ್ದಿದೆ. ಪರಿಣಾಮ ಮಗಳ ಸಮೇತ ದಂಪತಿ ಕೆಳಗೆ ಬಿದ್ದು, ದುರಂತ ಸಾವಿಗೀಡಾಗಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹಗಳನ್ನು ಹೈದರಾಬಾದ್​ನ ಒಸ್ಮಾನಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕ್ಯಾಂಟರ್​ ವಾಹನದ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಮತ್ತು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಕಲಬುರಗಿ ಕಮಿಷನರ್ ಮತ್ತು ಪತ್ನಿ ವಿರುದ್ಧ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ದೂರು, ಎಫ್​ಐಆರ್​ ದಾಖಲು

ರಸ್ತೆ ತಿರುವಿನಲ್ಲಿ ಲಗೇಜ್​ ಆಟೋ ಪಲ್ಟಿ: ಮಂಡ್ಯ ಮೂಲದ ಮೂವರು ಸ್ಥಳದಲ್ಲೇ ದುರ್ಮರಣ, ಮೂವರ ಸ್ಥಿತಿ ಚಿಂತಾಜನಕ

ಹೃದಯಾಘಾತ: ಎಎಸ್​ಬಿ ಕಾಲೇಜು ಪ್ರಾಂಶುಪಾಲ ಮಾರ್ಟಿನ್ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 17 =
Remember me
