ತೆಲಂಗಾಣ:ಎಷ್ಟೇ ಜಾಗೃತಿ ಮೂಡಿಸಿದರು, ಕಠಿಣ ನಿಯಮ ಹೇರಿದರೂ ನಗರದ ಬೀದಿ ಬದಿ ಮೂತ್ರ ಮಾಡಿ ಬೇಜವಾಬ್ದಾರಿ ಮೆರೆಯುತ್ತಾರೆ ಜನರು. ‘ಇಲ್ಲಿ ಮೂತ್ರ ಮಾಡಿದರೆ ದಂಡ ವಿಧಿಸಲಾಗುವುದು’ ಎಂಬ ಬೋರ್ಡ್​ ಇದ್ದರೂ, ಕ್ಯಾರೇ ಎನ್ನದ ಕೆಲವು ಮಂದಿ ಅಲ್ಲಿಯೇ ಮೂತ್ರ ಮಾಡಿ ಬರುತ್ತಾರೆ! ಇಂತಹ ಬೇಜವಾಬ್ದಾರಿತನಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಿದ್ದೂ ಮೂಕ ಪ್ರಾಣಿಗಳಿಗೆ ನಿಯಮ ಹೇರಲು ವ್ಯವಸ್ಥೆ ಮುಂದಾದಂತಿದೆ!
ತೆಲಂಗಾಣದ ಭದ್ರಾದಿ ಕೊತ್ತಗುಡೆಂ ಜಿಲ್ಲೆಯ ಎಸ್​​ಸಿಸಿಎಲ್​​ ಕಲ್ಲಿದ್ದಲು ಕಂಪೆನಿ ಕಚೇರಿ ಮುಂದೆ ಎತ್ತು ಮೂತ್ರ ಮಾಡಿದೆ ಎಂದು, ಅದರ ಮಾಲೀಕನಿಗೆ ನೂರು ರೂಪಾಯಿ ದಂಡ ವಿಧಿಸಲಾಗಿದೆ.
ರೈತ ಸುಂದರ್​ ಲಾಲ್ ಎಂಬಾತನ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಎಸ್​​ಸಿಸಿಎಲ್​​ ಕಲ್ಲಿದ್ದಲು ಕಂಪೆನಿ ಇನ್ನೂ ಪರಿಹಾರವನ್ನು ನೀಡಿಲ್ಲ ಎಂದು ಆರೋಪಿಸಿ, ಕಂಪೆನಿಯ ಮುಂದೆ ಪ್ರತಿಭಟನೆ ಮುಂದಾಗಿದ್ದ. ಈತ ತನ್ನ ಊರಿನಿಂದ ಎತ್ತಿನ ಗಾಡಿಯಲ್ಲಿ ಪ್ರಯಾಣಿಸಿ ಬಂದಿದ್ದ. ಹೀಗಾಗಿ ರೈತ ಪ್ರತಿಭಟನೆ ನಡೆಸುವಾಗ ಎತ್ತಿನ ಗಾಡಿಯೂ ಅಲ್ಲೇ ಇತ್ತು. ಈ ವೇಳೆ ಎತ್ತು ಕಂಪೆನಿಯ ಗೇಟಿನ ಬಳಿ ಮೂತ್ರ ಮಾಡಿದೆ.
ಪ್ರತಿಭಟನೆ ಮಾಡಿದ್ದ ರೈತನಿಗೆ ಸರಿಯಾದ ಶಾಸ್ತಿ ಮಾಡಬೇಕೆಂಬ ಹಠದಲ್ಲಿದ್ದ ಕಂಪೆನಿ, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಎತ್ತು ಮೂತ್ರ ಮಾಡುವ ದೃಶ್ಯವನ್ನು ಕೋರ್ಟ್​ಗೆ ಸಲ್ಲಿಸಿದೆ. ನಂತರ ರೈತನಿಗೆ ದಂಡ ವಿಧಿಸುವಂತೆ ಮನವಿ ಮಾಡಿದೆ ಎಂದು ವರದಿಯಾಗಿದೆ.
ಇದಾಗುತ್ತಿದ್ದಂತೆ ಪರಿಶೀಲಿಸಿದ ಕೋರ್ಟ್​, ಕಂಪೆನಿಯ ಮುಂದಿನ ಸ್ವಚ್ಛವಾದ ರಸ್ತೆಯಲ್ಲಿ ಎತ್ತು ಮೂತ್ರ ಮಾಡಿರುವುದು ತಪ್ಪು. ಇದಕ್ಕೆ ಎತ್ತಿನ ಮಾಲೀಕನೇ ಹೊಣೆಯಾಗಿದ್ದೇನೆ ಎಂದು ಹೇಳಿ ನೂರು ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿರುವುದು ವರದಿಯಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
