ಹೈದರಾಬಾದ್​:ಕರೊನಾ ವೈರಸ್​ ಲಾಕ್​ಡೌನ್​ ಸಮಯದಲ್ಲಿ ಇಂಧನ ಇಲಾಖೆ ಕಳುಹಿಸಿರುವ ವಿದ್ಯುತ್​ ಬಿಲ್​ ನೋಡಿ ತೆಲಂಗಾಣ ರೈತನೋರ್ವ ಕಂಗಾಲಾಗಿರುವ ಘಟನೆ ನಡೆದಿದೆ.
ಒಂದಲ್ಲ ಎರಡಲ್ಲ ಬರೋಬ್ಬರಿ 7 ಲಕ್ಷ ರೂ. ವಿದ್ಯುತ್​ ಬಿಲ್​ ಅನ್ನು ತಾಂತ್ರಿಕ ದೋಷದಿಂದ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಇರ್ಸೋಜಿವಾಡಿ ಗ್ರಾಮದ ಸಣ್ಣ ರೈತನಿಗೆ ಕಳುಹಿಸಲಾಗಿದೆ. ವಿದ್ಯುತ್​ ಬಿಲ್​ ಸ್ವೀಕರಿಸುತ್ತಿದ್ದಂತೆ ರೈತ ಜಿ. ಶ್ರೀನಿವಾಸ್​ ಶಾಕ್​ಗೆ ಒಳಗಾದ ಪ್ರಸಂಗ ಜರುಗಿದೆ.ಇದನ್ನೂ ಓದಿ:VIDEO| ಸಿಲಿಕಾನ್​ ಸಿಟಿಗೆ ಕಾದಿದೆಯಾ ಮಹಾ ಗಂಡಾಂತರ…?!
ಮಾರ್ಚ್​ನಿಂದ ಮೇ ವರೆಗಿನ ವಿದ್ಯುತ್​ ಬಿಲ್​ ಅನ್ನು ಕಳುಹಿಸಲಾಗಿತ್ತು. ಆದರೆ, ರೈತನ ಮನೆಯಲ್ಲಿರುವುದು ಮೂರು ಬಲ್ಬ್​, ಟಿವಿ ಹಾಗೂ ಎರಡು ಫ್ಯಾನ್​ ಮಾತ್ರ. ಸಾಮಾನ್ಯವಾಗಿ ತಿಂಗಳಿಗೆ 500 ರೂ. ಬರುತ್ತಿದ್ದ ಬಿಲ್​ ಇದೀಗ 7,29,417 ರೂ. ಬಂದಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.
ಫೆಬ್ರವರಿಯಲ್ಲಿ 415 ರೂ. ಪಾವತಿಸಿದ್ದ ಶ್ರೀನಿವಾಸ್​ ಬಾಕಿ ಮೊತ್ತವನ್ನು ಉಳಿಸಿಕೊಂಡಿದ್ದರು. ಮಾರ್ಚ್​, ಏಪ್ರಿಲ್​ ಮತ್ತು ಮೇ ತಿಂಗಳ ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಮೀಟರ್​ ರೀಡಿಂಗ್​ ನೋಡದೇ ಬಿಲ್​ ಮಾಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.ಇದನ್ನೂ ಓದಿ:ಮಧ್ಯರಾತ್ರಿ ಪತ್ನಿಯನ್ನು ಕೊಂದು ಪೊಲೀಸ್​ ಠಾಣೆಗೆ ಬಂದ ಭೂಪ!
ತಾಂತ್ರಿಕ ದೋಷದಿಂದ ಹೀಗಾಗಿದ್ದು, ಸರಿಪಡಿಸಿ ಹೊಸ ಬಿಲ್​ ನೀಡುವುದಾಗಿ ಅಲ್ಲಿನ ಸಹಾಯಕ ಇಂಜಿನಿಯರ್​ ಭರವಸೆ ನೀಡಿರುವುದರಿಂದ ರೈತ ನಿಟ್ಟುಸಿರು ಬಿಟ್ಟಿದ್ದಾನೆ.(ಏಜೆನ್ಸೀಸ್​)
ಕರೊನಾಗೆ ಸಜ್ಜಾಗಿದೆ ಲಸಿಕೆ; ಬಿಡುಗಡೆಗೆ ಅಡ್ಡಿಯಾಗಿರುವ ಆತಂಕವಾದರೂ ಏನು?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:15 − 9 =
Remember me
