ಹೈದರಾಬಾದ್​:ಈ ಒಂದು ಘಟನೆಯನ್ನು ನೋಡಿದರೆ ವಿಧಿಯೇ ನೀನೆಷ್ಟು ಕ್ರೂರಿ ಎನಿಸದೇ ಇರದು. ಅಪ್ಪ-ಅಮ್ಮನ ಮಡಿಲಲ್ಲಿ ಆಡಿ ಬೆಳೆಯಬೇಕಾದ ಬಾಲಕಿ ತನ್ನ ತಾಯಿಯ ಅಂತಿಮ ಸಂಸ್ಕಾರಕ್ಕಾಗಿ ಬೀದಿಯಲ್ಲಿ ಭಿಕ್ಷೆ ಬೇಡಿದ್ದಾಳೆ ಅಂದರೆ ಒಂದು ಕ್ಷಣ ದೇವರನ್ನು ಕೂಡ ನಾವು ಶಪಿಸದೇ ಇರಲಾರೆವು.
ಹೌದು, ಇಂಥದ್ದೊಂದು ಹೃದಯ ವಿದ್ರಾವಕ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ ಪುಟ್ಟ ಬಾಲಕಿಯೊಬ್ಬಳು ತನ್ನ ತಾಯಿ ಅಂತ್ಯ ಸಂಸ್ಕಾರಕ್ಕಾಗಿ ಸಾರ್ವಜನಿಕವಾಗಿ ಭಿಕ್ಷೆ ಬೇಡಿದ್ದಾಳೆ. ತನ್ನ ಹಳ್ಳಿಯ ನೆರೆಹೊರೆಯವರಿಂದ ಆರ್ಥಿಕ ಸಹಾಯವನ್ನೂ ಪಡೆಡಿದ್ದಾಳೆ.
ಬಾಲಕಿಯ ತಂದೆ ಈಗಾಗಲೇ ಅನಾರೋಗ್ಯ ಕಾರಣದಿಂದ ಅಸುನೀಗಿದ್ದಾರೆ. ಇದಾದ ಬಳಿಕ ಆರ್ಥಿಕ ಸಮಸ್ಯೆಗಳನ್ನು ಎದುರಿಸಲಾಗದೇ ತಾಯಿಯೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದಳು. ಈ ಎರಡು ದುರಂತಗಳಿಂದ ಕಂಗೆಟ್ಟ ಬಾಲಕಿಗೆ ಏನು ಮಾಡಬೇಕೆಂದು ತೋಚಲಿಲ್ಲ. ತನ್ನ ತಾಯಿಯ ಅಂತಿಮ ವಿಧಿವಿಧಾನಗಳನ್ನು ಮಾಡಲು ಗ್ರಾಮಸ್ಥರ ಸಹಾಯವನ್ನು ಪಡೆಯುವುದನ್ನು ಬಿಟ್ಟು ಆಕೆಗೆ ಬೇರೆ ದಾರಿ ಇರಲಿಲ್ಲ.
ತಾಯಿಯ ಶವದ ಮುಂದೆ ಕುಳಿತು ಬಾಲಕಿ ಬಿಕ್ಕಿ ಬಿಕ್ಕಿ ಅಳುವುದನ್ನು ಕಂಡು, ಯಾರು ಬಂದು ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಮಾಡುತ್ತಾರೆ? ವೆಚ್ಚವನ್ನು ಯಾರು ಭರಿಸುತ್ತಾರೆ? ಎಂದು ಮಾತನಾಡಿಕೊಳ್ಳತೊಡಗಿದರು. ಆ ಮಾತುಗಳನ್ನು ಕೇಳಿ ಪುಟ್ಟ ಬಾಲಕಿ ಹಣಕ್ಕಾಗಿ ಬೇಡಿಕೊಳ್ಳತೊಡಗಿದಳು. ಅಲ್ಲದೆ, ತಾಯಿ ಮೃತದೇಹದ ಪಕ್ಕದಲ್ಲಿ ಚಿಕ್ಕ ಬಟ್ಟೆಯನ್ನು ಹಾಸಿ ಸಹಾಯಕ್ಕಾಗಿ ಬೇಡಿಕೊಂಡಳು.
ಬಾಲಕಿಯ ದುಸ್ಥಿತಿಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದ ವಿಷಯ ತಿಳಿದ ಸ್ಥಳೀಯರು ಮಗುವಿನ ಬಳಿ ತೆರಳಿ ಧನಸಹಾಯ ಮಾಡಿದರು. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಆಗಮಿಸಿ ಮಗುವಿನ ಸ್ಥಿತಿ ನೋಡಿ ಅವರು ಕೂಡ ಆರ್ಥಿಕ ನೆರವು ನೀಡಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರತಿಕ್ರಿಯಿಸಿ ಮಗುವಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಸ್ಥಳೀಯರೇ ಮುಂದೆ ನಿಂತು ಅಂತ್ಯಕ್ರಿಯೆ ಸಹ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್​) ಮುಖಂಡ ಕೆ.ಟಿ.ರಾಮರಾವ್ ಅವರು ಪ್ರತಿಕ್ರಿಯಿಸಿ, ಆದಷ್ಟು ಬೇಗ ಬಾಲಕಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ನಾನು ಈ ವಿಡಿಯೋವನ್ನು (ಹುಡುಗಿ ಭಿಕ್ಷೆ ಬೇಡುತ್ತಿರುವ) ನೋಡಿದ ತಕ್ಷಣ ಆ ಕ್ಷೇತ್ರದ ನಮ್ಮ ಬಿಆರ್‌ಎಸ್ ನಾಯಕರೊಂದಿಗೆ ಮಾತನಾಡಿದ್ದೇನೆ. ಅವರು ತಕ್ಷಣ ಬಾಲಕಿಯನ್ನು ನೋಡಿಕೊಳ್ಳುತ್ತಾರೆ ಎಂದು ಕೆಟಿಆರ್ ಎಕ್ಸ್ (ಹಿಂದಿನ ಟ್ವಿಟರ್) ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:thirteen + seven =
Remember me
