ಹೈದರಾಬಾದ್​:ವಿರೋಧದ ನಡುವೆಯೂ ಪ್ರಿಯಕರನನ್ನು ವರಿಸಿದ್ದಕ್ಕೆ ಮಗಳ ಮೇಲೆ ಆಕ್ರೋಶಗೊಂಡ ತಂದೆ, ತನ್ನ ಸಂಬಂಧಿಕರೊಂದಿಗೆ ಸೇರಿ ಮಗಳ ಪ್ರಿಯಕರನ ಮನೆಗೆ ಬೆಂಕಿಯಿಟ್ಟು ಧ್ವಂಸ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಈ ಘಟನೆ ತೆಲಂಗಾಣದ ವಾರಂಗಲ್​ ಜಿಲ್ಲೆಯ ನರ್ಸಂಪೇಟೆ ಮಂಡಲದ ಇಟಿಕಲಪಲ್ಲಿ ಗ್ರಾಮದಲ್ಲಿ ನಡೆದಿದೆ. ಕಾವ್ಯಾ ಮತ್ತು ರಂಜಿತ್​ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಪ್ರೀತಿಗೆ ಕಾವ್ಯಾ ಪಾಲಕರು ಒಪ್ಪಿರಲಿಲ್ಲ. ವಿರೋಧದ ನಡುವೆಯೂ ಓಡಿ ಹೋಗಿ ರಂಜಿತ್​ ಜತೆ ಕಾವ್ಯಾ ಮದುವೆ ಆಗಿದ್ದಾಳೆ. ಇಬ್ಬರು ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
ಇದನ್ನೂ ಓದಿ:ಕ್ಯಾನ್ಸರ್ ಔಷಧಕ್ಕೆ ತೆರಿಗೆ ವಿನಾಯಿತಿ?; ಜಿಎಸ್​ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ
ಮದುವೆಯ ಬೆನ್ನಲ್ಲೇ ಸೆಲ್ಫಿ ವಿಡಿಯೋ ಮಾಡಿರುವ ನವಜೋಡಿ, ನಾವಿಬ್ಬರು ಸಂತೋಷದಿಂದ ಇದ್ದೇವೆ ಎಂದು ತಿಳಿಸಿದ್ದಾರೆ. ಯುವತಿಯ ತಂದೆ ಇಟಿಕಲಪಲ್ಲಿ ಗ್ರಾಮದ ಪಂಚಾಯಿತಿ ಸದಸ್ಯ. ಮದುವೆ ವಿಚಾರ ತಿಳಿದ ಕೂಡಲೇ ತನ್ನ ಸಂಬಂಧಿಕರೊಂದಿಗೆ ಸೇರಿ ರಂಜಿತ್​ ಮನೆಗೆ ಬೆಂಕಿಯಿಟ್ಟಿದ್ದಾರೆ. ಅಲ್ಲದೆ, ನವಜೋಡಿಯ ಮದುವೆಗೆ ಸಹಾಯ ಮಾಡಿದ ಇತರೆ ನಾಲ್ವರ ಮನೆಗೂ ಬೆಂಕಿ ಇಡಲಾಗಿದೆ.
వరంగల్‌లో ప్రేమ వివాహం చేసుకున్న యువ జంట కావ్య – రంజిత్
నర్సంపేట – ఇటుకాలపల్లిలో ప్రేమించి పెళ్లి చేసుకున్న యువ జంట కావ్య – రంజిత్. కోపంతో ప్రేమికుడి ఇంటికి, పెళ్లికి సహకరించిన అతడి స్నేహితుల ఇంటికి నిప్పు పెట్టిన యువతి తండ్రి.
యువతి తండ్రి ఇటుకాలపల్లి సర్పంచ్ కాగా, ఎస్‌బీఐ…pic.twitter.com/qYVN8PGKx5
— Telugu Scribe (@TeluguScribe)July 5, 2023

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಾವ್ಯಾ, ನಾವಿಬ್ಬರು ಜೂನ್​ 30ರಂದು ಮದುವೆಯಾದೆವು ಮತ್ತು ಹೈದರಾಬಾದ್​ನಲ್ಲಿ ನೆಲೆಸಿದ್ದೇವೆ. ಮೊದಲ ಮದುವೆ ಸಿಂಧುವಲ್ಲ ಎಂದು ಹೇಳಿದ್ದಕ್ಕೆ ಜುಲೈ 4ರಂದು ಮತ್ತೆ ದೇವಸ್ಥಾನಕ್ಕೆ ಬಂದು ಮದುವೆ ಆದೆವು. ಬಳಿಕ ನಾವು ಪೊಲೀಸ್​ ಠಾಣೆಗೆ ತೆರಳಿದೆವು. ರಕ್ಷಣೆ ಕೋರಿ ಹೋದರೆ, ನಮಗೆ ಆಘಾತ ನೀಡಿದರು. ಎಲ್ಲ ಪೊಲೀಸರು ನನ್ನ ತಂದೆಗೆ ಬೆಂಬಲ ನೀಡಿ, ನಮ್ಮನ್ನು ಚೆನ್ನಾಗಿ ಬೈದರು. ನಾವು ಹೇಳುವುದನ್ನು ಕೇಳಿಸಿಕೊಳ್ಳಲೇ ಇಲ್ಲ. ಪೊಲೀಸರು ನನ್ನ ಎಲ್ಲ ಚಿನ್ನಾಭರಣ ಕಸಿದುಕೊಂಡರು ಎಂದು ಕಾವ್ಯಾ ಹೇಳಿದ್ದಾಳೆ. ಅಲ್ಲದೆ, ನನ್ನ ತಂದೆಯ ಸ್ನೇಹಿತರು ಮತ್ತು ಸಂಬಂಧಿಕರೆಲ್ಲರೂ ನಮ್ಮನ್ನು ಕೊಲ್ಲುತ್ತಾರೆ ಮತ್ತು ಅವರು ನಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಸೇಫ್ಟಿ ಐಲ್ಯಾಂಡ್‌ಗೆ ‘ಆಪತ್ಬಾಂಧವ’ ಎಂಬ ಹೆಸರು ನಿಮಗೆ ಒಪ್ಪಿಗೆ ಇದೆಯಾ?; ಜನಾಭಿಪ್ರಾಯ ಕೋರಿದ ಪೊಲೀಸ್ ಕಮಿಷನರ್​​!
ಈ ಪ್ರಕರಣ ಬಗ್ಗೆ ಮಾತನಾಡಿರುವ ಎಸಿಪಿ ಸಂಪತ್​ ರಾವ್​, ಯುವಕನ ಮನೆಯ ಮೇಲೆ ದಾಳಿ ಮಾಡಿ, ಬೆಂಕಿಯಿಟ್ಟವರ ವಿರುದ್ಧ ನಾವು ಪ್ರಕರಣವನ್ನು ದಾಖಲಿಸಿದ್ದೇವೆ. ಯುವತಿ ಚಿಕ್ಕಪ್ಪ ಮತ್ತು ಇತರರು ಸೇರಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಎಲ್ಲರ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)
ಹುಡುಗರು ಸೊಂಟದ ಮೇಲೆ ಕೈ ಇಟ್ಟರೆ, ದೂರು ನೀಡುವ ಬದಲು ಎಂಜಾಯ್​ ಮಾಡಿ: ನಟಿ ರೇಖಾ ನಾಯರ್​ ವಿವಾದ

18ನೇ ಬಾರಿಗೆ ಮದುವೆಯಾಗಲು ಸಿದ್ಧನಾದ ಖ್ಯಾತ ನಟ; ಜೀವನದ ದೊಡ್ಡ ರಹಸ್ಯ ಬಿಚ್ಚಿಟ್ಟ ಸ್ಟಾರ್​ ಹೀರೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 11 =
Remember me
