ಹೈದರಾಬಾದ್​:ಕ್ಷಯ ರೋಗಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ಕ್ಷಯ ರೋಗಿಗಳಿಗೆ ಚಿಕನ್​ ಸಾಂಬಾರ್​ ಅನ್ನು ಒದಗಿಸುತ್ತಿದೆ.
ಕ್ಷಯ ರೋಗದಿಂದ ಬಹುಬೇಗನೇ ಗುಣಮುಖರಾಗಲು ಆಸ್ಪತ್ರೆಯ ಮೆನುವಿನಲ್ಲಿ ಚಿಕನ್​ ಸಾಂಬರ್​ ಸೇರಿಸಿರುವ ಸರ್ಕಾರ, ಅಗತ್ಯವಿರುವ ಪೋಷಕಾಂಶಗಳನ್ನು ರೋಗಿಗಳಿಗೆ ನೀಡಲು ಈ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಹೀಗಾಗಿ ವಾರಕ್ಕೆ (ಬುಧವಾರ) ಒಂದು ಬಾರಿ ಚಿಕನ್​ ಸಾಂಬಾರ್​ ನೀಡಲಾಗುವುದು. ಉಳಿದಂತೆ ಪ್ರತಿ ದಿನ ಎರಡು ಮೊಟ್ಟೆಗಳನ್ನು ನೀಡಲಾಗುವುದು. ರಾಜ್ಯದಲ್ಲೇ ಮೊದಲ ಬಾರಿಗೆ ಖಮ್ಮಮ್​ ಜಿಲ್ಲೆಯಲ್ಲಿರುವ ಕ್ಷಯ ರೋಗ ವಿಭಾಗದಲ್ಲಿ ಈ ಯೋಜನೆಯನ್ನು ಬುಧವಾರ ಆರಂಭಿಸಲಾಗಿದೆ.
ಜಿಲ್ಲೆಯ ಕ್ಷಯರೋಗ ತಡೆಗಟ್ಟುವ ಅಧಿಕಾರಿ ಡಾ.ವಿ. ಸುಬ್ಬರಾವ್ ಪ್ರಕಾರ, 2019 ರಲ್ಲಿ 3200 ರೋಗಿಗಳಿದ್ದರು. ಈ ಪೈಕಿ ಶೇ. 94 ರಷ್ಟು ಜನರು ಚೇತರಿಸಿಕೊಂಡಿದ್ದಾರೆ. 2020ರ ವೇಳೆಗೆ 2,900 ರೋಗಿಗಳಲ್ಲಿ 95 ಪ್ರತಿಶತದಷ್ಟು ಜನರು ಚೇತರಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ನಿರಂತರವಾಗಿ ಔಷಧವನ್ನು ನೀಡಿದ್ದಲ್ಲಿ ಕಾಯಿಲೆ ಸಂಪೂರ್ಣವಾಗಿ ನಿರ್ಣಾಮ ಆಗುತ್ತದೆ ಎಂದು ಸುಬ್ಬರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
ರೈತ ಪ್ರತಿಭಟನೆ ಸ್ಥಳಕ್ಕೆ ಮಹಾತ್ಮ ಗಾಂಧಿ ಮೊಮ್ಮಗಳ ಭೇಟಿ

ಪ್ರೇಮಿಗಳ ದಿನದಂದು ಸತಿಪತಿಗಳಾದ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ತಾರಾ ಜೋಡಿ

ಭಾರತಕ್ಕೆ ಮಸಿಬಳಿಯಲು ಗುಟ್ಟಾಗಿ ತಯಾರಿಸಿದ್ದ ‘ಟೂಲ್‌ಕಿಟ್‌’ ವಿವಾದ: ಗ್ರೇಟಾಳಿಂದ ಸಿಕ್ಕಿಬಿದ್ದ ದಿಶಾ ಅರೆಸ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 5 =
Remember me
