ಹೈದರಾಬಾದ್:ವಕ್ಫ್ ಬೋರ್ಡ್​ಗೆ ಸಂಬಂಧಿಸಿದ ಆಸ್ತಿಗಳು ರಾಜ್ಯದಾದ್ಯಂತ ಇದ್ದು, ಅವುಗಳನ್ನು ರಕ್ಷಿಸುವುದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತೆಲಂಗಾಣದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಕೊಪ್ಪುಲ ಈಶ್ವರ್ ಪ್ರಕಟಿಸಿದ್ದಾರೆ. ವಕ್ಫ್​ ಜಮೀನು ಸರ್ವೇ ಕಾರ್ಯ ಎರಡನೇ ಬಾರಿ ನಡೆಸುವುದಕ್ಕೆ ಸಂಬಂಧಿಸಿ ಅಧಿಸೂಚನೆ ಪ್ರಕಟಿಸುವುದು ವಿಳಂಬವಾಗಿದೆ. ಈ ಸಂಬಂಧ ಸರ್ಕಾರ ಶೀಘ್ರವೇ ಸಭೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ವಕ್ಫ್ ಬೋರ್ಡ್​ಗೆ ನ್ಯಾಯಾಂಗದ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಯವರು ಸಭೆಯ ನಂತರದಲ್ಲಿ ಪರಿಶೀಲಿಸಲಿದ್ದಾರೆ. ಈ ಬಗ್ಗೆ ಅವರ ಗಮನಸೆಳೆಯುವ ಕೆಲಸವನ್ನು ಮಾಡುತ್ತೇನೆ ಎಂದು ಸಚಿವ ಕೊಪ್ಪುಲ ಈಶ್ವರ್ ವಿಧಾನಸಭೆಯಲ್ಲಿ ಬುಧವಾರ ಭರವಸೆ ನೀಡಿದ್ದಾರೆ. ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ವಿಧಾಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ವಕ್ಫ್ ಆಸ್ತಿಯ ಸರ್ವೇ ವಿಚಾರ ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಸಚಿವ ಈಶ್ವರ್ ಉತ್ತರಿಸಿದ್ದರು.
ಇದನ್ನೂ ಓದಿ:ಅರೆಸ್ಟ್ ಮಾಡೋಕೆ ಬಂದ ಪೊಲೀಸರ ಮೇಲೆರಗಿದ ಹಂತಕರು ಕೊನೆಗೂ ಸೆರೆ ಸಿಕ್ರು…
ವಕ್ಫ್​ ಆಸ್ತಿಗಳ ಮೊದಲ ಸಮೀಕ್ಷೆ 1954ರಲ್ಲಿ ನಡೆದಿತ್ತು. ಅಂದು, 77,539 ಎಕರೆ ಜಮೀನು 3,929 ಪ್ರದೇಶಗಳಲ್ಲಿ ಇರುವುದನ್ನು ಗುರುತಿಸಲಾಗಿತ್ತು. ಎರಡನೇ ಸರ್ವೇ 2001ರಲ್ಲಿ ಆರಂಭವಾಗಿದ್ದು 2016ರಲ್ಲಿ ಕೊನೆಗೊಂಡಿದೆ. ಈ ಸರ್ವೇ ಫಲಿತಾಂಶದ ಪ್ರಕಾರ, 13,610 ಪ್ರದೇಶಗಳಲ್ಲಿ 3,372 ಎಕರೆ ಪ್ರದೇಶವಷ್ಟೇ ವಕ್ಫ್ ಮಂಡಳಿ ಹೆಸರಲ್ಲಿ ಬಾಕಿ ಇರುವುದು ಕಂಡುಬಂದಿದೆ ಎಂದು ಓವೈಸಿ ಗಮನಸೆಳೆದಿದ್ದರು. (ಏಜೆನ್ಸೀಸ್)
ತೆರಿಗೆ ವಂಚನೆ ಕೇಸ್ – ಎ.ಆರ್.ರೆಹಮಾನ್​ಗೆ ಮದ್ರಾಸ್ ಹೈಕೋರ್ಟ್ ನೋಟಿಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − six =
Remember me
