| ರಾಘವ ಶರ್ಮ ನಿಡ್ಲೆ, ನವದೆಹಲಿ
ಆಂಧ್ರಪ್ರದೇಶದಿಂದ ವಿಭಜನೆಗೊಂಡು ಪ್ರತ್ಯೇಕ ರಾಜ್ಯವಾದ ಬಳಿಕ ತೆಲಂಗಾಣ ಕೃಷ್ಣಾ ನದಿ ನೀರಿನಲ್ಲಿ ತನಗೆ ಸಿಗಬೇಕಿದ್ದ ನೀರಿನ ಅರ್ಹ ಪ್ರಮಾಣ ಸಿಗುತ್ತಿಲ್ಲ ಎಂದು ಕಾದಾಡುತ್ತಿರುವುದು ಹೊಸತೇನಲ್ಲ. ಈ ಹಿನ್ನೆಲೆಯಲ್ಲಿ, ನೀರಿನ ಮರುಹಂಚಿಕೆ ಯಾಗಬೇಕೆಂದು ಸುಪ್ರೀಂಕೋರ್ಟ್​ನಲ್ಲೂ ಕಾನೂನು ಹೋರಾಟ ನಡೆಸಿದೆ.
ಆದರೆ, ಸುಪ್ರೀಂಕೋರ್ಟ್​ನಿಂದ ಪ್ರಕರಣ ಹಿಂತೆಗೆದು ಕೊಂಡಲ್ಲಿ ಜಲ ಹಂಚಿಕೆ ವ್ಯಾಜ್ಯವನ್ನು ನ್ಯಾಯಾಧಿಕರಣಕ್ಕೆ ಹೊಸದಾಗಿ ಕಳುಹಿಸಿಕೊಡುತ್ತೇವೆ ಎಂದು ಕೇಂದ್ರ ಸರ್ಕಾರ ಸಲಹೆ ನೀಡಿರುವುದು ಕರ್ನಾಟಕದ ಮಟ್ಟಿಗೆ ಮತ್ತೊಂದು ಸುತ್ತಿನ ತಲೆನೋವಾಗಿ ಪರಿಣಮಿಸುವ ಲಕ್ಷಣ ಕಂಡುಬಂದಿದೆ.
ಕೃಷ್ಣಾ, ಗೋದಾವರಿ ನದಿ ವ್ಯಾಪ್ತಿಯ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸಿಎಂ ಜಗನ್​ವೋಹನ್ ರೆಡ್ಡಿ ಮತ್ತು ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಜತೆಗೆ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಸಿದ ಸಭೆಯಲ್ಲಿ ಈ ಸಲಹೆ ನೀಡಿದ್ದಾರೆ.
ತೆಲಂಗಾಣ ಸರ್ಕಾರ ಕೇಂದ್ರದ ಅಭಿಪ್ರಾಯಕ್ಕೆ ಸಮ್ಮತಿಸಿದ್ದು, ಸುಪ್ರೀಂಕೋರ್ಟ್​ನಿಂದ ಅರ್ಜಿ ಹಿಂಪಡೆದುಕೊಳ್ಳಲು ತೀರ್ವನಿಸಿದೆ. ಈ ಬಗ್ಗೆ ಅಧಿಕೃತವಾಗಿ ಪತ್ರ ಮುಖೇನ ಮಾಹಿತಿ ನೀಡಿದಲ್ಲಿ ನ್ಯಾಯಾಧಿಕರಣದಲ್ಲಿ ವಿಚಾರಣೆ ನಡೆಸಲು ಸೂಚಿಸಬೇಕೋ ಅಥವಾ ಹೊಸದಾಗಿ ನ್ಯಾಯಾಧಿಕರಣ ರಚಿಸಬೇಕೋ ಎಂಬ ಬಗ್ಗೆ ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆದುಕೊಳ್ಳಲಿದ್ದೇವೆ ಎಂದು ತೆಲಂಗಾಣಕ್ಕೆ ಕೇಂದ್ರ ಸರ್ಕಾರ ತಿಳಿಸಿದೆ.
ರಾಜ್ಯದ ನಿಲುವೇನು
ತೆಲಂಗಾಣದ ಸಮಸ್ಯೆಗಳು ಏನೇ ಇದ್ದರೂ, ಅದನ್ನು ಆಂಧ್ರದೊಂದಿಗೆ ಬಗೆಹರಿಸಿಕೊಳ್ಳಬೇಕು. ನ್ಯಾಯಾಧಿಕರಣಕ್ಕೆ ಪ್ರಕರಣ ಶಿಫಾರಸು ಮಾಡಿ, ಜಲ ವ್ಯಾಜ್ಯದ ಮರುವಿಚಾರಣೆಗೆ ಅವಕಾಶ ನೀಡುವ ಅಧಿಕಾರವೇ ಕೇಂದ್ರ ಸರ್ಕಾರಕ್ಕಿಲ್ಲ. ಏಕೆಂದರೆ, 2010ರ ಐತೀರ್ಪಿನ ಬಳಿಕ ಸ್ಪಷ್ಟೀಕರಣ ಅರ್ಜಿಗಳ ಮೇಲೆ 2013ರಲ್ಲಿ ತೀರ್ಪು ಬಂದಿದೆ. ನದಿ ನೀರು ಹಂಚಿಕೆ ಈಗ ಮುಗಿದ ಅಧ್ಯಾಯವಾಗಿದ್ದರೂ, ಸುಪ್ರೀಂಕೋರ್ಟ್ ಅಂತಿಮ ತೀರ್ಪಷ್ಟೇ ಬಾಕಿಯಿದೆ. ಹೀಗಿರುವಾಗ, ಕೇಂದ್ರ ಸರ್ಕಾರ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಪ್ರಕಟಿಸಬೇಕು. ಬದಲಿಗೆ, ನ್ಯಾಯಾಧಿಕರಣಕ್ಕೆ ಮರುವಿಚಾರಣೆ ಮಾಡಿ ಎಂದು ನಿರ್ದೇಶಿಸುವುದಲ್ಲ. 2014ರ ಆಂಧ್ರಪ್ರದೇಶ ಪುನರ್ ವಿಂಗಡಣೆ ಕಾಯ್ದೆಯಲ್ಲೂ ಜಲ ವ್ಯಾಜ್ಯ ಮರು ವಿಚಾರಣೆಯ ಉಲ್ಲೇಖವಿಲ್ಲ’ ಎಂದು ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ತೆಲಂಗಾಣದ ವಾದವೇನು
ಕೃಷ್ಣಾ ನ್ಯಾಯಾಧಿಕರಣದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದ ವೇಳೆ ತೆಲಂಗಾಣ ಪ್ರಾಂತ್ಯದ ಜಲ ಸಮಸ್ಯೆಗಳನ್ನು ಆಂಧ್ರಪ್ರದೇಶವು ನ್ಯಾಯಮೂರ್ತಿಗಳಿಗೆ ಸಮರ್ಥವಾಗಿ ತಿಳಿಯಪಡಿಸಲಿಲ್ಲ. ಇದರಿಂದಾಗಿ, ನದಿ ನೀರಿನಲ್ಲಿ ಅರ್ಹ ಪಾಲು ನಮಗೆ ಸಿಗುತ್ತಿಲ್ಲ. ನ್ಯಾಯಾಧಿಕರಣ ಪ್ರಕರಣವನ್ನು ಮತ್ತೊಮ್ಮೆ ವಿಚಾರಣೆ ನಡೆಸಿದರೆ ಮಾತ್ರ ನಮಗೆ ಜಲನ್ಯಾಯ ದೊರಕಲು ಸಾಧ್ಯ ಎಂದು ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಪ್ರತಿಪಾದಿಸಿತ್ತು. ಇದನ್ನು ತೀಕ್ಷ್ಣವಾಗಿ ವಿರೋಧಿಸಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರ, ಆಂಧ್ರ-ತೆಲಂಗಾಣ ಮಧ್ಯೆ ಉದ್ಭವಿಸಿರುವ ಜಲ ಹಂಚಿಕೆ ಸಮಸ್ಯೆಗೆ ಕರ್ನಾಟಕ-ಮಹಾರಾಷ್ಟ್ರ ಹೊಣೆಗಾರರಲ್ಲ. ನಿಗದಿಪಡಿಸಿರುವ ನೀರಿನ ಪ್ರಮಾಣದಲ್ಲೇ ಅವರು ಹಂಚಿಕೆ ಮಾಡಿಕೊಳ್ಳಬೇಕು. ವಿನಾಕಾರಣ ನಮ್ಮನ್ನು ಈ ಪ್ರಕರಣದಲ್ಲಿ ಭಾಗಿದಾರರನ್ನಾಗಿ ಮಾಡಬಾರದು ಎಂದು ವಾದಿಸಿದ್ದವು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
