ನವದೆಹಲಿ:ಶಿಕ್ಷಣ, ಉದ್ಯೋಗದಲ್ಲಿ ಮಹಿಳೆಯರು ಮುಂದಿದ್ದರೂ ಕೌಟುಂಬಿಕ ದೌರ್ಜನ್ಯದಲ್ಲಿ ಆಕೆ ಸಂತ್ರಸ್ತೆ ಎಂಬುದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯಲ್ಲಿ (ಎನ್​ಎಫ್​ಎಚ್​ಎಸ್) ವ್ಯಕ್ತವಾಗಿದೆ. ಪತಿ ತಮ್ಮ ಮೇಲೆ ಹಲ್ಲೆ ಮಾಡುವುದನ್ನು ತೆಲಂಗಾಣದ ಶೇ. 83.8 ಗೃಹಿಣಿಯರು ಸಮರ್ಥಿಸಿಕೊಂಡಿದ್ದಾರೆ. ಈ ರಾಜ್ಯ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಆಂಧ್ರಪ್ರದೇಶದಲ್ಲಿ ಈ ಪ್ರಮಾಣ ಶೇ.83.6 ಇದ್ದು, ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಈ ಪ್ರಮಾಣ ಶೇ. 76.9 ಇದ್ದು, ಮೂರನೇ ಸ್ಥಾನದಲ್ಲಿ ಇದೆ. ಹಿಮಾಚಲ ಪ್ರದೇಶದಲ್ಲಿ ಶೇ. 14.8 ಪತ್ನಿಯರು ತಮ್ಮ ಗಂಡಂದಿರನ್ನು ಹಲ್ಲೆಕೋರ ಸ್ವಭಾವದವರು ಎಂದು ಹೇಳಿದ್ದು, ಈ ರಾಜ್ಯದಲ್ಲಿ ಪತ್ನಿಯರ ಮೇಲಿನ ದೌರ್ಜನ್ಯ ಕಡಿಮೆ ಇದೆ.
ಇದೇ ಪ್ರಶ್ನೆಯನ್ನು ಪುರುಷರಲ್ಲಿ ಕೇಳಿದಾಗ ತೆಲಂಗಾಣದಲ್ಲಿ ಶೇ. 70.4, ಆಂಧ್ರದಲ್ಲಿ ಶೇ. 66.5, ಕರ್ನಾಟಕದಲ್ಲಿ ಶೇ.81.9 ಮತ್ತು ಹಿಮಾಚಲ ಪ್ರದೇಶದಲ್ಲಿ 14.2 ಮಂದಿ ಸಮರ್ಥಿಸಿಕೊಂಡಿದ್ದಾರೆ. 2019-21ರ ನಡುವೆ ಎನ್​ಎಫ್​ಎಚ್​ಎಸ್ ನಡೆಸಿದ ಸಮೀಕ್ಷೆ ಕಳೆದ ಬುಧವಾರ ಪ್ರಕಟವಾಗಿದ್ದು, ಸರ್ವೆಯನ್ನು ಅಸ್ಸಾಂ, ಆಂಧ್ರಪ್ರದೇಶ, ಬಿಹಾರ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನ್ಯಾಗಾಲ್ಯಾಂಡ್, ಸಿಕ್ಕಿಂ, ತೆಲಂಗಾಣ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಸಲಾಗಿದೆ.

ಹಲ್ಲೆಗೆ ಕಾರಣವೇನು?:ಪತ್ನಿಯರ ಮೇಲಿನ ಹಲ್ಲೆಗೆ ಕಾರಣವಾಗುವ ಏಳು ಸನ್ನಿವೇಶಗಳನ್ನಾಧರಿಸಿ ಈ ಸಮೀಕ್ಷೆ ನಡೆಸಲಾಗಿದೆ. ಈ ಕಾರಣಗಳು ಹೀಗೆವೆ: ಪತಿಗೆ ಹೇಳದೆ ಹೊರಗೆ ಹೋಗಿದ್ದು, ಮನೆ ಅಥವಾ ಮಕ್ಕಳನ್ನು ನಿರ್ಲಕ್ಷ್ಯ ಮಾಡಿದ್ದು, ಪತಿಯ ಜತೆಗೆ ವಾದಕ್ಕಿಳಿಯುವುದು, ಲೈಂಗಿಕ ಸುಖ ನೀಡಲು ನಿರಾಕರಣೆ, ಅಡುಗೆ ಸರಿಯಾಗಿ ಮಾಡದಿರುವುದು, ಗಂಡನಿಗೆ ವಿಧೇಯಳಾಗಿ ಇರದಿರುವುದು, ಅತ್ತೆ-ಮಾವನ ಜತೆ ಅಗೌರವದಿಂದ ನಡೆದುಕೊಳ್ಳುವುದು. ಈ ಪೈಕಿ ಅತ್ತೆ-ಮಾವಂದರಿಗೆ ಅಗೌರವ ತೋರುವುದು ಮತ್ತು ಮನೆ, ಮಕ್ಕಳ ನಿರ್ಲಕ್ಷ್ಯ ಸಾಮಾನ್ಯ ಕಾರಣವಾಗಿದೆ ಎಂದು ಎನ್​ಎಫ್​ಎಚ್​ಎಸ್ ಹೇಳಿದೆ.
ಕಚೇರಿಯಲ್ಲೇ ಕಾಮದಾಟ, ಡಾ.ರತ್ನಾಕರ್ ಬಂಧನ; ಮಹಿಳೆಯರನ್ನು ಕರೆದುಕೊಂಡು ರಾಜ್ಯದ ಹಲವೆಡೆಗಷ್ಟೇ ಅಲ್ಲ, ಹೊರಜಿಲ್ಲೆಗೂ ಹೋಗಿದ್ದ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
